ಮನೆ ರಾಜ್ಯ ಆಡಳಿತಾಧಿಕಾರಿ ಕಿರುಕುಳ ಆರೋಪ: ವೈದ್ಯ ಆತ್ಮಹತ್ಯೆಗೆ ಯತ್ನ

ಆಡಳಿತಾಧಿಕಾರಿ ಕಿರುಕುಳ ಆರೋಪ: ವೈದ್ಯ ಆತ್ಮಹತ್ಯೆಗೆ ಯತ್ನ

0

ಚಿಕ್ಕಮಗಳೂರು: ಆಡಳಿತಾಧಿಕಾರಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ವೈದ್ಯರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ನಡೆದಿದೆ.

ಕೊಪ್ಪ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಸಂದೀಪ್ ಬಾಳೆಹೊನ್ನೂರಿನ ಮನೆಯಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಆಡಳಿತಾಧಿಕಾರಿ ಪದೇ-ಪದೇ ನೋಟಿಸ್ ನೀಡುತ್ತಿದ್ದರು ಎನ್ನಲಾಗುತ್ತಿದೆ ಹಾಗೂ ವೈಯಕ್ತಿಕ ಕಾರಣಗಳಿಂದಲೂ ವೈದ್ಯರು ಮನನೊಂದಿದ್ದರು ಎನ್ನಲಾಗುತ್ತಿದೆ.

ಮಾತ್ರೆ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ವೈದ್ಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆಡಳಿತಾಧಿಕಾರಿಗಳ ಕಿರುಕುಳ ತಾಳಲಾರದೆ ಕೆಲ ನರ್ಸ್ ಗಳ ವರ್ಗಾವಣೆ ಮಾಡಿದ್ದು, ಕೆಲಸ ನಿರ್ವಹಿಸಲು ಉತ್ತಮ ವಾತಾವರಣ ಇಲ್ಲವೆಂದು ಸಿಬ್ಬಂದಿಗಳು ಆರೂಪಿಸಿದ್ದಾರೆ.

ಹಿಂದಿನ ಲೇಖನಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಿಗೆ ಸಮಾಜದ ಬಗ್ಗೆ ದೂರದೃಷ್ಟಿ ಇತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಂದಿನ ಲೇಖನಶೃಂಗೇರಿ ದೇವಸ್ಧಾನ