ಮನೆ ಅಪರಾಧ ಆದೇಶವಿಲ್ಲದೆ ಅರಣ್ಯ ಇಲಾಖೆಗೆ ಸೇರಿದ ಮರಗಳ ಕಟಾವು

ಆದೇಶವಿಲ್ಲದೆ ಅರಣ್ಯ ಇಲಾಖೆಗೆ ಸೇರಿದ ಮರಗಳ ಕಟಾವು

0

ಗುಂಡ್ಲುಪೇಟೆ: ಪಟ್ಟಣದಿಂದ ಕೇರಳಕ್ಕೆ ತೆರಳುವ ರಸ್ತೆ  ಕೂತನೂರು ಮಾರ್ಗದ ರಸ್ತೆ ಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅರಣ್ಯ ಇಲಾಖೆಗೆ ಸೇರಿದ ಬಫರ್ ಜೋನ್ ವ್ಯಾಪ್ತಿಗೆ ಒಳಪಡುವ ಮರಗಳನ್ನು ಜಮೀನಿನ ಮಾಲೀಕ ಮಾರಾಟ ಮಾಡಿದ್ದು ಮರ ಕೊಳ್ಳುವವರು ಅದನ್ನು ಕಟಾವು ಮಾಡಿ ತುಂಬುತಿದ್ದರೂ ಸಹ ಅರಣ್ಯ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ಆರೋಪಿಸಿದರು.
ಮಲ್ಲಯ್ಯನಪುರ ಗ್ರಾಮದ ವ್ಯಕ್ತಿಯೊಬ್ಬ ನನ್ನ ಜಮೀನಿನ ಒಳಗೆ ಮರವಿದೆ ಎಂದು ಅರಣ್ಯ ಇಲಾಖೆಗೆ ಸೇರಿದ ನಾಲ್ಕು ಮರಗಳನ್ನು ಮಾರಾಟ ಮಾಡಿದ್ದು ಅದನ್ನು ಕಟಾವು ಮಾಡುವ ವೇಳೆ ಅರಣ್ಯ ಇಲಾಖೆಗೆ ಸೇರಿದ ವಾಚರ್ ಗಳಿಬ್ಬರು ಸಹ ಮರ ಕಡಿಯುವವರ ಜೊತೆಯೇ ಇದ್ದಿದ್ದನ್ನು ಕಂಡ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ತಕ್ಷಣ ಅರಣ್ಯ ರಕ್ಷಕ ಸ್ಥಳೀಯರೊಬ್ಬರು ಕರೆ ಮಾಡಿದ ತಕ್ಷಣ ಸ್ಥಳಕ್ಕಾಗಮಿಸಿದ್ದು ಅರಣ್ಯ ಇಲಾಖೆಗೆ ಸೇರಿದ ಮರವನ್ನು ಅಧಿಕಾರಿಗಳಿಗೆ ತಿಳಿಯದಂತೆ ಕಟಾವು ಮಾಡಿದ್ದು ಮರ ಕಡಿದವರ ವಿರುದ್ದ ಮೆಲಾಧಿಕಾರಿಗಳಿಗೆ ಮಾಹಿತಿ ನೀಡಿ ಕೇಸು ದಾಖಲಿಸುವುದಾಗಿ ಹೇಳಿದರು.

ಹಿಂದಿನ ಲೇಖನಪ್ರಕಾಶಕರ ಸಮ್ಮೇಳನಾಧ್ಯಕ್ಷರಾಗಿ ಟಿ.ಎಸ್. ಛಾಯಾಪತಿ ಆಯ್ಕೆ
ಮುಂದಿನ ಲೇಖನಜಿಲ್ಲಾಡಳಿತ ಸದಾ ರೈತರೊಂದಿಗಿರುತ್ತದೆ: ಜಿಲ್ಲಾಧಿಕಾರಿ