ಮನೆ ಸುದ್ದಿ ಜಾಲ ಒಮಿನಿ ಕಾರಿನಲ್ಲಿ ಬೆಂಕಿ: ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು

ಒಮಿನಿ ಕಾರಿನಲ್ಲಿ ಬೆಂಕಿ: ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು

0

ಮೈಸೂರು:  ಚಲಿಸುತ್ತಿದ್ದ ಕಾರು ಹೊತ್ತಿ ಉರಿದಿರುವ ಘಟನೆ ನಂಜನಗೂಡಿನ ಬದನವಾಳು ದೇವನೂರು ರಸ್ತೆಯಲ್ಲಿ ನಡೆದಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ರಸ್ತೆಯಲ್ಲಿ ಹುರುಳಿ ಒಕ್ಕಣೆಯಿಂದ ಕಾರಿನ ಎಂಜಿನ್ ಗೆ ಒಣಗಿದ ಹುರುಳಿ ಸೊಪ್ಪು ಸುತ್ತಿಕೊಂಡ ಪರಿಣಾಮ‌ ಓಮ್ನಿ ಕಾರಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಅನುಮಾನ ವ್ಯಕ್ತವಾಗಿದ್ದು,  ‌ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ತಕ್ಷಣ ಕಾರಿನಲ್ಲಿದ್ದವರು ಇಳಿದಿದ್ದಾರೆ. ಕಾರಿನಿಂದ ಹೊರ ಬಂದು ಬೆಂಕಿ ನಂದಿಸಲು ಯತ್ನಿಸಿದರೂ ಕಾರು ಸುಟ್ಟು ಕರಕಲಾಗಿದೆ.
ಕಾರಿನವರು ಬನ್ನೂರು ಮೂಲದವರು ಎನ್ನಲಾಗಿದೆ. ಆದರೆ ಆ ರಸ್ತೆಯಲ್ಲಿ ಎರಡು ಕಿಲೋಮೀಟರ್ ವರೆಗೆ ಯಾವುದೇ ಉರುಳಿ ಒಕ್ಕಣೆ ಆಗಿಲ್ಲ. ಆದರೂ ಕಾರು ಸಂಪೂರ್ಣ ಭಸ್ಮವಾಗಿದೆ ಇದು ಯಾವುದರಿಂದ ಆಗಿದೆ ಎಂದು ತಿಳಿಯಬೇಕಿದೆ ಎಂದು ಕವಲಂದೆ ಪೊಲೀಸರು ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ‌.

ಹಿಂದಿನ ಲೇಖನಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ: ಕಾರು ಸಂಪೂರ್ಣ ಭಸ್ಮ, ವೈದ್ಯ ಪಾರು.
ಮುಂದಿನ ಲೇಖನಸೀಫುಡ್ ಫ್ಯಾಕ್ಟರಿಯಲ್ಲಿ ಅಮೋನಿಯಂ ಸೋರಿಕೆ, ೨೬ ಮಂದಿ ಅಸ್ವಸ್ಥ