ಮನೆ ಸುದ್ದಿ ಜಾಲ ಓಮಿಕ್ರಾನ್ ಆತಂಕ; ಲಾಕ್‌ಡೌನ್ ಭೀತಿಯಲ್ಲಿ ಮದುವೆಗೆ ತರಾತುರಿ

ಓಮಿಕ್ರಾನ್ ಆತಂಕ; ಲಾಕ್‌ಡೌನ್ ಭೀತಿಯಲ್ಲಿ ಮದುವೆಗೆ ತರಾತುರಿ

0

ರೂಪಾಂತರ ತಳಿ ಓಮಿಕ್ರಾನ್ ಜಾಗತಿಕವಾಗಿ ವೇಗವಾಗಿ ಹಬ್ಬುತ್ತಿದ್ದು, ರಾಜ್ಯಕ್ಕೂ ವೈರಸ್ ಕಾಲಿರಿಸಿದೆ. ಈ ನಡುವೆ ಈಗಾಗಲೇ ಮದುವೆ ನಿಶ್ಚಯವಾಗಿರುವ ಕುಟುಂಬಗಳಲ್ಲಿ ಲಾಕ್‌ಡೌನ್ ಆತಂಕ ಮನೆ ಮಾಡಿದೆ. ಜನವರಿಯಲ್ಲಿ ಪುಷ್ಯ ಮಾಸ ಆರಂಭವಾಗುವುದರಿಂದ ತಿಂಗಳ ಪೂರ್ತಿ ಮದುವೆಗೆ ಮುಹೂರ್ತ ಇಲ್ಲ. ಹಾಗಾಗಿ ಸಾಮಾನ್ಯವಾಗಿ ಮದುವೆ, ಸಮಾರಂಭಗಳಿಗೆ ಡಿಸೆಂಬರ್ ತಿಂಗಳು ಪ್ರಶಸ್ತವಾದ ಮಾಸ. ಒಳ್ಳೆಯ ದಿನ, ಮುಹೂರ್ತ ಸಿಗುತ್ತದೆ ಎಂದು ಬಹುತೇಕರು ಮದುವೆ ನಿಶ್ಚಯ ಮಾಡುತ್ತಾರೆ.

ಬೇಸಿಗೆ ಕಾಲದಲ್ಲಿ ಕೃಷಿ ಚಟುವಟಿಕೆಗಳು ಕಡಿಮೆ. ಈ ಸಮಯದಲ್ಲಿ ಮದುವೆ ಹೆಚ್ಚು. ಆದರೆ, ಓಮಿಕ್ರಾನ್ ಆತಂಕದ ನಡುವೆ ಮದುವೆ ಮಾಡುವುದು ಹೇಗೆ? ಎಂಬ ಭಯ ಪೋಷಕರನ್ನು ಕಾಡುತ್ತಿದೆ. ಒಂದು ವೇಳೆ ಲಾಕ್‌ಡೌನ್‌ ಆದರೆ? ಎಂದು ಸಹ ಮಾತುಕತೆಗಳು ಆರಂಭವಾಗಿವೆ.

ಕೆಲವು ಕುಟುಂಬಗಳು ತರಾತುರಿಯಲ್ಲಿ ಮದುವೆ ಮಾಡಲು ಮುಂದಾಗಿದ್ದಾರೆ. ಭವಿಷ್ಯದಲ್ಲಿ ಲಾಕ್ ಡೌನ್ ಆಗಬಹುದೆಂಬ ಆತಂಕದಿಂದ ಒಡವೆ ಹಾಗೂ ಬಟ್ಟೆಗಳನ್ನು ಖರೀದಿ ಮಾಡುತ್ತಿದ್ದಾರೆ. ಮುಂದಿನ ತಿಂಗಳಿಂದ ವಿವಾಹ ಮುಹೂರ್ತ ಕಡಿಮೆ ಇರುವುದರಿಂದ ಎಲ್ಲೆಡೆ ಮದುವೆ ಗಡಿಬಿಡಿ ಹೆಚ್ಚಾಗಿದೆ. ಕರ್ನಾಟಕದ ಸರ್ಕಾರ ಈಗಾಗಲೇ ವಿವಾಹದಲ್ಲಿ 500 ಜನರು ಪಾಲ್ಗೊಳ್ಳಲು ಅವಕಾಶವನ್ನು ನೀಡಿದೆ.

ಹಿಂದಿನ ಲೇಖನಮಹಾರಾಷ್ಟ್ರದಲ್ಲಿ ಗೂಳಿ ರೇಸ್‌ಗೆ ಸುಪ್ರೀಂಕೋರ್ಟ್ ಅನುಮತಿ
ಮುಂದಿನ ಲೇಖನಆಪರೇಶನ್ಗೆ ಬಂದಿದ್ದ ನೈಜೀರಿಯಾದವ ಸೈಲೆಂಟ್ ಆಗಿ ಡ್ರಗ್ ಪೆಡ್ಲರ್