ಮನೆ ಸುದ್ದಿ ಜಾಲ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ: ಕಾರು ಸಂಪೂರ್ಣ ಭಸ್ಮ, ವೈದ್ಯ ಪಾರು.

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ: ಕಾರು ಸಂಪೂರ್ಣ ಭಸ್ಮ, ವೈದ್ಯ ಪಾರು.

0

ಮೈಸೂರು: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರಿನಲ್ಲಿದ್ದ ವೈದ್ಯರೊಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಮೈಸೂರಿನ ಗನ್ ಹೌಸ್ ವೃತ್ತದ ಬಳಿ ನಡೆದಿದೆ.

ಕುವೆಂಪು ನಗರದ ವೈದ್ಯ ಭೂಷಣ್ ಎಂಬುವವರಿಗೆ ಸೇರಿದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರಿನಲ್ಲಿ ಕೆ.ಆರ್. ಆಸ್ಪತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದ್ದು,  ಕೂಡಲೇ ವೈದ್ಯ ಭೂಷಣ್ ಕಾರಿನಿಂದ ಕೆಳಗಿಳಿದ್ದಾರೆ.

ಧಗಧಗನೆ ಹೊತ್ತಿ ಉರಿದ ಕಾರು ಸಂಪೂರ್ಣ ಭಸ್ಮವಾಗಿದೆ.  ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ  ಬೆಂಕಿ ನಂದಿಸಿದ್ದಾರೆ. ಬ್ಯಾಟರಿಯಿಂದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ಸಂಭವಿಸಿದ್ದು, ಐ20 ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.

ಹಿಂದಿನ ಲೇಖನರಾಜ್ಯದ ಹಿತಾಸಕ್ತಿಗಾಗಿ ಪಾದಯಾತ್ರೆ: ಸಿದ್ದರಾಮಯ್ಯ
ಮುಂದಿನ ಲೇಖನಒಮಿನಿ ಕಾರಿನಲ್ಲಿ ಬೆಂಕಿ: ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು