ಮನೆ ರಾಜಕೀಯ ತಾಕತ್ತಿದ್ದರೆ ನಮ್ಮ ಮೇಲೆ ಕೇಸ್ ಹಾಕಲಿ ಆರಗ ಜ್ಞಾನೇಂದ್ರ

ತಾಕತ್ತಿದ್ದರೆ ನಮ್ಮ ಮೇಲೆ ಕೇಸ್ ಹಾಕಲಿ ಆರಗ ಜ್ಞಾನೇಂದ್ರ

0

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಸಂಬಂಧ ತಾಕತ್ತಿದ್ದರೆ ಇದ್ದರೆ ನಮ್ಮ ಮೇಲೆ ಕ್ರಮ ಕೈಗೊಳ್ಳಲಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದರು.

ನನಗೆ ಧೈರ್ಯ ಇದೆ, ಕಾನೂನು ಎಲ್ಲರಿಗೂ ಒಂದೇ. ಪಾದಯಾತ್ರೆ ವೇಳೆ ಡಿಕೆ ಶಿವಕುಮಾರ್ ಬಾಡಿ ಲಾಂಗ್ವೆಜ್​​ ಬಗ್ಗೆ ನಾನು ಏನೂ ಹೇಳಲ್ಲ. ಅವರ ಬಾಡಿ ಲಾಂಗ್ವೆಜ್ ಬಗ್ಗೆ ಜನರಿಗೇ ಗೊತ್ತಿದೆ. ಬೆಂಗಳೂರು ಜನರ ರಕ್ಷಣೆ ಮಾಡುವ ದೃಷ್ಟಿಯಿಂದ ಸಮಾಲೋಚನೆ ಆಗ್ತಿದೆ. ಜನರಿಗೆ ಸುಳ್ಳು ಹೇಳ್ತಿದ್ದಾರೆ, ಬೆಂಗಳೂರು ಜನರ ರಕ್ಷಣೆ ದೃಷ್ಟಿಯಿಂದ ಒಂದಷ್ಟು ಚರ್ಚೆ ಆಗ್ತಿದೆ ಎಂದರು.


https://bc1b6dbc197552ceefded13c99fa8363.safeframe.googlesyndication.com/safeframe/1-0-38/html/container.html ಕಾಂಗ್ರೆಸ್ ಕೂಡ ಯೋಚನೆ ಮಾಡಬೇಕು. ಇದರಿಂದ ಕಾಂಗ್ರೆಸ್  ಗಳಿಕೆಗಿಂತ ಕಳೆದುಕೊಳ್ಳೋದು ಜಾಸ್ತಿ. ಪಾದಯಾತ್ರೆಯೇ ಕಾಂಗ್ರೆಸ್​​ಗೆ ಮಾರಕವಾಗಲಿದೆ. ಫೀಸಿಬಿಲಿಟಿ ರಿಪೋರ್ಟ್ ತೆಗೆದುಕೊಳ್ಳೋದಕ್ಕೇ ಕಾಂಗ್ರೆಸ್ ಐದು ವರ್ಷ ಮಾಡಿದರು. ಐದು ವರ್ಷ ಸಿಂಹಾಸನದ ಮೇಲೆ ಕುಳಿತಾಗ ನಮ್ಮ ನೀರು ನಮ್ಮ ಹಕ್ಕು ಅನ್ನೋದು ಕಾಂಗ್ರೆಸ್ ಗೆ ನೆನಪೇ ಆಗಲಿಲ್ಲ. ಕಾಂಗ್ರೆಸ್ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಭೆ ಗಮನಿಸಿದ್ದೇನೆ. ರೇಣುಕಾಚಾರ್ಯ ಸಭೆ ವಿರುದ್ಧ ಎಫ್ಐಆರ್ ಆಗಿದೆ, ವಿಚಾರಣೆ ನಡೆಯುತ್ತಿದೆ. ಕಾನೂನು ಎಲ್ಲರಿಗೂ ಕೂಡ ಒಂದೇ. ರೇಣುಕಾಚಾರ್ಯ ವಿರುದ್ದವೂ ಕೂಡ ಎಫ್ಐಆರ್ ಮಾಡ್ತಾರೆ. ಪೊಲೀಸ್ ಅಧಿಕಾರಿಗಳಿಂದ ನಾನು ವಿವರಣೆ ಕೇಳ್ತೇನೆ. ಬೆಳಗ್ಗೆ ರೇಣುಕಾಚಾರ್ಯ ಬಂದಿದ್ರು, ಯಾಕೆ ಹೋಗಿದ್ದು ಅಂತ ನಾನೂ ರೇಣುಕಾಚಾರ್ಯಗೆ ಪ್ರಶ್ನೆ ಮಾಡಿದ್ದೇನೆ. ಜಿಲ್ಲಾಡಳಿತಗಳಿಗೆ ನಾವು ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇವೆ.


ಇನ್ನು ಸರ್ಕಾರಕ್ಕೆ ಲಾಕ್​​​ಡೌನ್ ಮಾಡುವ ಇರಾದೆ ಏನೂ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಕಂಟ್ರೋಲ್ ತಪ್ಪುವ ಸ್ಥಿತಿ ಬಂದಾಗ ಲಾಕ್​​ಡೌನ್ ಮಾಡೋದು ಒಂದು ವಿಧಾನ. ಲಾಕ್​ಡೌನ್​ ಮಾಡಿದ್ರೆ, ಹೊಟೇಲ್-ಬಾರ್ ಎಲ್ಲ ಉದ್ಯಮಕ್ಕೆ ಹೊಡೆತ ಬೀಳತ್ತೆ. ಲಾಕ್​​ಡೌನ್ ಒಂದೇ ಪರಿಹಾರ ಅಲ್ಲ, ಅದನ್ನು ಮಾಡೋದು ಇಲ್ಲ. ಆದಷ್ಟು ನೋಡಿಕೊಂಡು ನಿರ್ಣಯ ತೆಗೆದುಕೊಳ್ಳುತ್ತೇವೆ. ಕೇಂದ್ರದಿಂದಲೂ ಏನು ಸಲಹೆ ಸೂಚನೆ ಬರುತ್ತದೆ ನೋಡೋಣ. ಸಿಎಂ ಕೂಡ ಲಾಕ್ ಡೌನ್ ಬೇಡ ಅಂತಲೇ ಹೇಳಿದ್ದಾರೆ ಎಂದರು.

ಹಿಂದಿನ ಲೇಖನಸೀಫುಡ್ ಫ್ಯಾಕ್ಟರಿಯಲ್ಲಿ ಅಮೋನಿಯಂ ಸೋರಿಕೆ, ೨೬ ಮಂದಿ ಅಸ್ವಸ್ಥ
ಮುಂದಿನ ಲೇಖನಕೊರೋನಾ ಅಬ್ಬರ: 1.94 ಲಕ್ಷ ಹೊಸ ಪ್ರಕರಣ ಪತ್ತೆ, 442 ಮಂದಿ ಸಾವು