ಮನೆ ರಾಜಕೀಯ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ಎ.ಮಂಜು ಗಂಭೀರ ಆರೋಪ

ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ಎ.ಮಂಜು ಗಂಭೀರ ಆರೋಪ

0

ಹಾಸನಹಾಸನದಿಂದ ನಾವು ನಮ್ಮ ಮಗನಿಗೆ ಎಂಎಲ್​ಸಿ ಟಿಕೆಟ್​ ಕೇಳಿರ್ಲಿಲ್ಲ. ಆದ್ರೆ ಟಿಕೆಟ್​ ಕೊಡ್ತೀವಿ ಅಂತಾ ಬಿಜೆಪಿ ಪಕ್ಷದವರೇ ಹೇಳಿದ್ದರು. ಟಿಕೆಟ್​​ ಕೊಡುವ ವೇಳೆಯಲ್ಲಿ ಮಂಥರ್​ ಗೌಡ ಇಲ್ಲಿ ಅಭ್ಯರ್ಥಿಯಾದ್ರೆ ನಾನು ₹5 ಕೋಟಿ ಕೊಡ್ತೇನೆ ಅಂತಾ ಹೇಳಿದ್ರು. ಹಾಸನದ ಬಿಜೆಪಿ ಶಾಸಕರೇ ಐದು ಕೋಟಿ ಬಂಡವಾಳವನ್ನು ಹಾಕುವ ಮಾತುಗಳನ್ನಾಡಿದ್ದರು ಅಂತಾ ಮಾಜಿ ಸಚಿವ ಎ.ಮಂಜು ಹೊಸ ಬಾಂಬ್​ ಸಿಡಿಸಿದ್ದಾರೆ.

ಜಿಲ್ಲೆಯ ಕೊಣನೂರಿನಲ್ಲಿ ಮಾತನಾಡಿದ ಅವರು, ವಿಧಾನಪರಿಷತ್​ ಚುನಾವಣೆಯಲ್ಲಿ ನಾನು ಯಾರಿಗೂ ಬೆಂಬಲ ನೀಡದೇ ತಟಸ್ಥನಾಗಿದ್ದೆ. ಆದ್ರೆ ಬಹಿರಂಗವಾಗಿ ಪಕ್ಷದ ವಿರುದ್ಧ ನಾನು ಕೊಡಗು ಹಾಗೂ ಹಾಸನಗಳಲ್ಲಿ ಕೆಲಸ ಮಾಡಿಲ್ಲ. ಹಾಸನದ ಶಾಸಕರು ನಮ್ಮ ಕುಟುಂಬವನ್ನೇ ಒಡೆದು ಹಾಕಿದ್ದಾರೆ ಅಂತಾ ಪ್ರೀತಂ ಗೌಡರ ವಿರುದ್ಧ ಗಂಭೀರ ಆರೋಪ ಮಾಡಿದ್ರು. ಅವರು ಪಕ್ಷದ ಸಭೆಯಲ್ಲಿಯೇ ನಮ್ಮ ಮಗನಿಗೆ ಟಿಕೆಟ್​ ನೀಡುವ ಬಗ್ಗೆ ಮಾತನಾಡಿದ್ರು. ನಂತರ ಅವರ ಆಪ್ತರ ಮೂಲಕ ಚುನಾವಣೆಗೆ ನಿಲ್ಲುವುದು ಬೇಡ ಎಂದು ಹೇಳಿ ಕಳುಹಿಸಿದ್ರು. ಈ ಬೆಳವಣಿಗೆಯಿಂದ ನಮ್ಮ ಕುಟುಂಬದಲ್ಲಿ ಸಮಸ್ಯೆಯಾಗಿದೆ ಅಂತಾ ಆಕ್ರೋಶ ಹೊರಹಾಕಿದ್ರು.