ಮನೆ ಕ್ರೀಡೆ ಭಾರತಕ್ಕೆ ಐದನೇ ಚಿನ್ನದ ಪದಕ ಗೆಲ್ಲಿಸಿಕೊಟ್ಟ ಶಟ್ಲರ್ ಕೃಷ್ಣ ನಗರ್

ಭಾರತಕ್ಕೆ ಐದನೇ ಚಿನ್ನದ ಪದಕ ಗೆಲ್ಲಿಸಿಕೊಟ್ಟ ಶಟ್ಲರ್ ಕೃಷ್ಣ ನಗರ್

0

ಟೋಕಿಯೋ, ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಐತಿಹಾಸಿಕ ಐದನೇ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಬ್ಯಾಡ್ಮಿಂಟನ್‌ನಲ್ಲಿ ಭಾರತದ ಶಟ್ಲರ್ ಕೃಷ್ಣ ನಗರ್ ಫೈನಲ್‌ನಲ್ಲಿ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ ತನ್ನ ಪದಕಗಳ ಸಂಖ್ಯೆಯನ್ನು 19ಕ್ಕೆ ವಿಸ್ತರಿಸಿಕೊಂಡಿದೆ.

ಬ್ಯಾಡ್ಮಿಂಟನ್‌ನ ಎಸ್‌ಹೆಚ್ 6 ವಿಭಾಗದಲ್ಲಿ ರಾಜಸ್ಥಾನ ಮೂಲದ ಕೃಷ್ಣ ನಗರ್ ಹಾಂಗ್‌ಕಾಂಗ್‌ನ ಚು ಮನ್ ಕಾಯ್ ವಿರುದ್ಧ ಕಠಿಣ ಸ್ಪರ್ಧೆಯಲ್ಲಿ ಗೆದ್ದು ಬೀಗಿದ್ದಾರೆ. 21-17, 16-21, 21-17 ಅಂತರದಿಂದ ಕೃಷ್ಣ ಗೆಲುವು ಸಾಧಿಸುವ ಮೂಲಕ ಭಾರತ ಐದನೇ ಚಿನ್ನದ ಪದಕವನ್ನು ಗೆಲ್ಲಲು ಕಾರಣವಾಗಿದ್ದಾರೆ. ಫೈನಲ್ ಪಂದ್ಯ 44 ನಿಮಿಷಗಳ ಹೋರಾಟವನ್ನು ಕಂಡಿತು.

ಪುರುಷರ ಸಿಂಗಲ್ಸ್ ಎಸ್‌ಎಲ್ 4 ಕ್ಲಾಸ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಫ್ರಾನ್ಸ್‌ನ ಲ್ಯೂಕಾಸ್ ಮಜೂರ್ ವಿರುದ್ಧ ಸುಹಾಸ್ ಯತಿರಾಜ್ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ನಂತರ ಭಾರತಕ್ಕೆ ಈ ಚಿನ್ನದ ಪದಕ ಬಂದಿದೆ. ಈ ಮೂಲಕ ಭಾನುವಾರ ಬೆಲಗಿನ ಅವಧಿಯಲ್ಲಿ ಭಾರತ ಎರಡು ಪದಕವನ್ನು ಗೆದ್ದುಕೊಂಡಿದೆ. ಈ ಮೂಲಕ ಭಾರತದ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ