ಮನೆ ಮನರಂಜನೆ ಭಾರತದ ಸ್ಟಾರ್ ನಟರ ಸಿನಿಮಾಗಳನ್ನು ಹಿಂದಿಕ್ಕಿದ ‘ಸ್ಪೈಡರ್‌ಮ್ಯಾನ್’

ಭಾರತದ ಸ್ಟಾರ್ ನಟರ ಸಿನಿಮಾಗಳನ್ನು ಹಿಂದಿಕ್ಕಿದ ‘ಸ್ಪೈಡರ್‌ಮ್ಯಾನ್’

0

ಭಾರತದ ಸಿನಿಮಾ ಮಾರುಕಟ್ಟೆ ಬಹಳ ದೊಡ್ಡದು. ಹಾಲಿವುಡ್ ಸಿನಿಮಾಗಳು ನಿರ್ಮಾಣ ಹಂತದಲ್ಲಿಯೇ ಭಾರತದ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡೆ ಸಿನಿಮಾದ ಪ್ರಚಾರ, ಬಿಡುಗಡೆಯನ್ನು ಯೋಜನೆ ಹಾಕುವ ಮಟ್ಟಿಗೆ ಭಾರತದ ಸಿನಿಮಾರುಕಟ್ಟೆ ಬೆಳೆದಿದೆ. ಇದೀಗ ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನ ಹೊಸ ಸಿನಿಮಾ ‘ಸ್ಪೈಡರ್‌ಮ್ಯಾನ್; ನೋ ವೇ ಹೋಮ್’ ಭಾರತದಲ್ಲಿ ಬಿಡುಗಡೆ ಆಗಿದ್ದು, ಮೊದಲ ದಿನದ ಕಲೆಕ್ಷನ್‌ನಲ್ಲಿ ದಾಖಲೆಯನ್ನೇ ಬರೆದಿದೆ. ಭಾರತದ ಸ್ಟಾರ್ ನಟರ ಸಿನಿಮಾಗಳ ಗಳಿಕೆಯ ದಾಖಲೆಯನ್ನೇ ಹಿಂದಿಕ್ಕಿರುವ ‘ಸ್ಪೈಡರ್‌ಮ್ಯಾನ್’ ಸಿನಿಮಾ ಹೊಸ ದಾಖಲೆಯನ್ನೇ ಬರೆದಿದೆ.

ಹಾಲಿವುಡ್ ಸಿನಿಮಾಗಳು ಬೆಂಗಳೂರು, ಮುಂಬೈ, ದೆಹಲಿಯ ಕೆಲವು ಚಿತ್ರಮಂದಿರಗಳಲ್ಲಿಯಷ್ಟೆ ಬಿಡುಗಡೆ ಆಗಿ ಹಾಗೆಯೇ ಮರೆಯಾಗುತ್ತಿದ್ದ ಕಾಲವಿತ್ತು. ಆದರೆ ಈಗ ಹಾಲಿವುಡ್ ಸಿನಿಮಾ ಒಂದು ಸ್ಥಳೀಯ ಸ್ಟಾರ್ ನಟರ ಸಿನಿಮಾಗಳನ್ನೂ ಮೀರಿಸಿ ಕಲೆಕ್ಷನ್ ಮಾಡುತ್ತಿದೆ. ಇತ್ತೀಚೆಗೆ ಬಿಡುಗಡೆ ಆದ ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಬಹಳ ದೊಡ್ಡ ಮೊತ್ತ ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಆದರೆ ‘ಸೂರ್ಯವಂಶಿ’ ಸಿನಿಮಾದ ದಾಖಲೆ ಮುರಿದಿರುವ ‘ಸ್ಪೈಡರ್‌ಮ್ಯಾನ್’ ಮೊದಲ ದಿನವೇ ಬರೋಬ್ಬರಿ 33 ಕೋಟಿ ರುಪಾಯಿ ಗಳಿಕೆ ಮಾಡಿದೆ.

ಹಿಂದಿನ ಲೇಖನಓಮಿಕ್ರಾನ್ ಆತಂಕ; ಲಾಕ್‌ಡೌನ್ ಭೀತಿಯಲ್ಲಿ ಮದುವೆಗೆ ತರಾತುರಿ
ಮುಂದಿನ ಲೇಖನTest Video