ಮನೆ ಅಪರಾಧ ಮತ ಹಾಕದ್ದಕ್ಕೆ ಎಂಜಲು ನೆಕ್ಕಿಸಿದ ರಾಜಕಾರಣಿ

ಮತ ಹಾಕದ್ದಕ್ಕೆ ಎಂಜಲು ನೆಕ್ಕಿಸಿದ ರಾಜಕಾರಣಿ

0

ತನಗೆ ಮತ ಹಾಕದ ಸಿಟ್ಟಿಗೆ ಯುವಕರಿಬ್ಬರಿಗೆ ರಾಜಕೀಯ ನಾಯಕನೊಬ್ಬ ತನ್ನ ಉಗುಳನ್ನು ನೆಕ್ಕಿಸಿ ಥಳಿಸಿದ ಹೀನಾಯ ಘಟನೆ ಬಿಹಾರದಲ್ಲಿ ನಡೆದಿದೆ. ಗ್ರಾಮ ಮುಖ್ಯಸ್ಥರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಲವಂತ್ ಸಿಂಗ್ ಎಂಬಾತ ಸಾಕಷ್ಟು ಹಣ ಹಂಚಿ ತನಗೇ ಮತ ಹಾಕುವಂತೆ ಮತದಾರರಿಗೆ ಆಮಿಷವೊಡ್ಡಿದ್ದ. ಹಾಗಿದ್ದರೂ ಆತ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ. ಇದರಿಂದ ಸಿಟ್ಟಿಗೆದ್ದ ಆತ ತನಗೆ ಮತ ಹಾಕದ ಇಬ್ಬರು ಯುವಕರನ್ನು ರಸ್ತೆ ಮಧ್ಯೆ ಎಳೆದು ತಂದು ತಾನು ಉಗುಳಿದ ಕಫ ನೆಕ್ಕುವಂತೆ ಹೇಳಿದ್ದಲ್ಲದೆ, ಹಲ್ಲೆ ನಡೆಸಿದ್ದಾನೆ. ಈ ಅಮಾನವೀಯ ಕೃತ್ಯದ ವಿಡಿಯೋ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದೀಗ ಪೊಲೀಸರು ಬಲವಂತ್ ಸಿಂಗ್ ನನ್ನು ಬಂಧಿಸಿದ್ದಾರೆ.

ಹಿಂದಿನ ಲೇಖನಮಹಾರಾಷ್ಟ್ರದಲ್ಲಿ ಗೂಳಿ ರೇಸ್‌ಗೆ ಸುಪ್ರೀಂಕೋರ್ಟ್ ಅನುಮತಿ
ಮುಂದಿನ ಲೇಖನಆಪರೇಶನ್ಗೆ ಬಂದಿದ್ದ ನೈಜೀರಿಯಾದವ ಸೈಲೆಂಟ್ ಆಗಿ ಡ್ರಗ್ ಪೆಡ್ಲರ್