ಮನೆ ಸುದ್ದಿ ಜಾಲ ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕೋವಿಡ್ ಜಾಗೃತಿ

ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕೋವಿಡ್ ಜಾಗೃತಿ

0

ಮೈಸೂರು: ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಹಬ್ಬದ ಸಾಮಾನುಗಳನ್ನು ಖರೀದಿಸಲು  ಮಾರ್ಕೆಟ್ ಗೆ ಹೆಚ್ಚು ಹೆಚ್ಚು ಗ್ರಾಹಕರು  ಬರುವ ಹಿನ್ನೆಲೆಯಲ್ಲಿ ನಮ್ಮ ಕೆಎಂಪಿಕೆ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಗೆ ಕೋವಿಡ್ ಮೂರನೇ ಅಲೆಯಿಂದ ಎಚ್ಚರವಾಗಿರಲಿ ಎಂದು  ದೊಡ್ಡ ಮಾರ್ಕೆಟ್ ಮುಂಭಾಗ  ಸಾರ್ವಜನಿಕರಿಗೆ ಉಚಿತ ಮಾಸ್ಕ್  ಹಾಗೂ ಗುಲಾಬಿ ನೀಡಿ ಜಾಗೃತಿ ಮೂಡಿಸಲಾಯಿತು

 ಸಂಕ್ರಾಂತಿ ವೈಕುಂಠ, ಏಕಾದಶಿ ಹಬ್ಬಗಳನ್ನ ನಾಗರೀಕರು ಮನೆಯಲ್ಲಿಯೇ ಆಚರಿಸಲು ಮುಂದಾಗಬೇಕು ಜನಸಮೂಹ ಹೆಚ್ಚಾಗಿ ಸೇರಿದರೆ ಸೊಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ ಹಿರಿಯ ನಾಗರೀಕರು ಮತ್ತು ಸಣ್ಣ ಮಕ್ಕಳ ಬಗ್ಗೆ ಹೆಚ್ಚು ಗಮನ ವಹಿಸಬೇಕಾಗಿದೆ ಎಂದು ದೇವರಾಜ ಠಾಣೆಯ  ಸಂಚಾರಿ ವೃತ್ತ ಉಪ ನಿರೀಕ್ಷಕರು ಸುಬ್ರಮಣ್ಯ ಸ್ವಾಮಿ ಸಾರ್ವಜನಿಕರಲ್ಲಿ ಮನವಿ ಮಾಡಿದರು

ಕೋವಿಡ್ 3ನೇ ಅಲೆ ಸ್ಪೋಟದಿಂದಾಗಿ ಸೋಂಕು ಹರಡುವಿಕೆ ಹೆಚ್ಚಾಗುತ್ತಿದ್ದು ಸರ್ಕಾರ ನೈಟ್ ಕರ್ಫ್ಯೂ ಲಾಕ್ ಡೌನ್ ನಿಯಮ ಜಾರಿಗೆ ತಂದಿದ್ದರು ಸಹ ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯವಾಗಿ ಧರಿಸದ್ದಿದ್ದರೆ ಅಪಾಯ ಕಟ್ಟಿತ್ತ ಬುತ್ತಿ, ಓಮ್ರಿಕಾನ್ ಸೊಂಕು ಹರುಡುವಿಕೆ ವಿದೇಶದಲ್ಲಿ ಹೆಚ್ಚಿದೆ ಇದರ ಬಗ್ಗೆ ನಾವು ಹಗರವಾಗಿ ಪರಿಗಣಿಸಬಾರದು, ನಾಗರೀಕರು ಎರಡು ಲಸಿಕೆಗಳನ್ನು ಹಾಕಿಸಿದರೆ ಒಳಿತು ಮತ್ತು ಹಿರಿಯ ನಾಗರೀಕರು ಬೂಸ್ಟರ್ ಲಸಕೆ ಹಾಕಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು

ಇದೇ ಸಂದರ್ಭದಲ್ಲಿ ದೇವರಾಜ ಪೋಲಿಸ್ ಠಾಣೆಯ ಸಂಚಾರಿ ವೃತ್ತ ನಿರೀಕ್ಷಕರಾದ ಸುಬ್ರಹ್ಮಣ್ಯ ಸ್ವಾಮಿ ,ವೀರಭದ್ರ ಸ್ವಾಮಿ ,ಶ್ರೀನಿವಾಸ್ ,ಸಂತೋಷ್ ,ಹಾಗೂ ಕೆಎಂಪಿಕೆ ಟ್ರಸ್ಟ್ ನ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್ ,ಸಾಮಾಜಿಕ ಹೋರಾಟಗಾರ ಮಹೇಂದ್ರ ಎಂ  ಶೈವ ,ಪ್ರಮೋದ್ ಗೌಡ, ನವೀನ್ ,ಹಾಗೂ ಇನ್ನಿತರರು ಹಾಜರಿದ್ದರು

ಹಿಂದಿನ ಲೇಖನಸ್ವಾಮಿ ವಿವೇಕಾನಂದ ಜಯಂತಿ: ಪ್ರಧಾನಿ ಸೇರಿ ಗಣ್ಯರಿಂದ ಸ್ಮರಣೆ
ಮುಂದಿನ ಲೇಖನಆನ್ಲೈನ್ ತರಗತಿ ಮೂಲಕ ಶಿಕ್ಷಣ ಮುಂದುವರಿಸಲು ಸಚಿವ ಎಸ್.ಟಿ.ಸೋಮಶೇಖರ್ ಸೂಚನೆ