ಮನೆ ರಾಜಕೀಯ ಮೂರನೇ ದಿನಕ್ಕೆ ಕಾಲಿಟ್ಟ ಮೇಕೆದಾಟು ಪಾದಯಾತ್ರೆ: ಕನಕಪುರದೆಡೆಗೆ ‘ಕೈ’ನಾಯಕರ ನಡಿಗೆ

ಮೂರನೇ ದಿನಕ್ಕೆ ಕಾಲಿಟ್ಟ ಮೇಕೆದಾಟು ಪಾದಯಾತ್ರೆ: ಕನಕಪುರದೆಡೆಗೆ ‘ಕೈ’ನಾಯಕರ ನಡಿಗೆ

0

ಬೆಂಗಳೂರು/ಕನಕಪುರ: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಮಂಗಳವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪಾದಯಾತ್ರೆ ಬೆಂಗಳೂರಿನಿAದ ಕನಕಪುರದ ಕಡೆ ಸಾಗಿದೆ.

ಇಂದು ಕನಕಪುರದಲ್ಲಿ ಪಾದಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ.

ಕನಕಪುರ ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿದ್ದು, ಪಾದಯಾತ್ರೆ ಸಲುವಾಗಿ ಕಾಂಗ್ರೆಸ್-ಜೆಡಿಎಸ್ ನಾಯಕರ ನಡುವೆ ಪರಸ್ಪರ ಜಟಾಪಟಿ ನಡೆಯಲಿದೆಯೇ ಎಂಬ ಕುತೂಹಲ ಮನೆ ಮಾಡಿದೆ.

ಬೆಳಗ್ಗೆ ಕನಕಪುರದಿಂದ ಪಾದಯಾತ್ರೆ ಆರಂಭವಾಗಿ ಗಾಣಾಳು ಮೂಲಕ ಮಧ್ಯಾಹ್ನ ಹೊತ್ತಿಗೆ ಸಾಗಿ ರಾತ್ರಿ ಚಿಕ್ಕೇನಹಳ್ಳಿಯಲ್ಲಿ ಕೈ ನಾಯಕರು ಇಂದಿನ ಯಾತ್ರೆ ಮುಗಿಸಿ ವಿಶ್ರಾಂತಿ ಪಡೆಯಲಿದ್ದಾರೆ. ನಾಳೆ ರಾಮನಗರ ಪ್ರವೇಶಿಸಲಿದ್ದಾರೆ.

ಮೇಕೆದಾಟು ಸಂಗಮದಿAದ ಜನವರಿ ೯ರಂದು ಭಾನುವಾರ ಆರಂಭವಾದ ಪಾದಯಾತ್ರೆ ದೊಡ್ಡ ಆಲದಹಳ್ಳಿಗೆ ಬಂದು ಇಂದು ಕನಕಪುರ ತಲುಪಿದ್ದು, ಪಾದಯಾತ್ರೆಯ ಆರಂಭದ ದಿನವಾದ ಭಾನುವಾರದಂದು ಕೊರೋನಾ ನಿಯಮ ಮತ್ತು ವೀಕೆಂಡ್ ಕರ್ಫೂ್ಯ ನಿಯಮ ಉಲ್ಲಂಘನೆಯಾಗಿದೆ ಎಂದು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ೩೦ ಮಂದಿ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ.

ಹಿಂದಿನ ಲೇಖನಡಿ.ಕೆ.ಶಿವಕುಮಾರ್ ವಿರುದ್ಧ ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲು
ಮುಂದಿನ ಲೇಖನಲಾಲ್ ಬಹದ್ಧೂರ್ ಶಾಸ್ತ್ರೀ ಅವರ ಪುಣ್ಯತಿಥಿ: ಪುಷ್ಪನಮನ ಸಲ್ಲಿಸಿದ ಸಚಿವ ಅಶ್ವಥ್ ನಾರಾಯಣ್