ಮನೆ ರಾಜಕೀಯ ಮೇಕೆದಾಟು ಪಾದಯಾತ್ರೆ ಕೈಬಿಡುವಂತೆ ಕಾಂಗ್ರೆಸ್ಗೆು ಗೃಹ ಸಚಿವ ಮನವಿ

ಮೇಕೆದಾಟು ಪಾದಯಾತ್ರೆ ಕೈಬಿಡುವಂತೆ ಕಾಂಗ್ರೆಸ್ಗೆು ಗೃಹ ಸಚಿವ ಮನವಿ

0

ಬೆಂಗಳೂರುರಾಜ್ಯದಲ್ಲಿ  ದಿನೇ ದಿನೇ ಕೊರೋನಾ ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ಕಾಂಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆಯಿಂದ ಕೊರೋನಾ ಸೋಂಕು ಇನ್ನಷ್ಟು ಹರಡುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಪಾದಯಾತ್ರೆಗೆ ಬಿಜೆಪಿ ನಾಯಕರು ಟೀಕಿಸುತ್ತಾ ಬಂದಿದ್ದು, ಕೈ ನಾಯಕರ ವಿರುದ್ಧ 3 ಎಫ್ಐಆರ್ ಗಳು ದಾಖಲಾಗಿವೆ.

ಈ ಸಂದರ್ಭದಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ನಾಯಕರ ಪಾದಯಾತ್ರೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಪಾದಯಾತ್ರೆ ಕೊರೋನಾ ಯಾತ್ರೆ ಆಗುವುದು ಬೇಡ, ದಯವಿಟ್ಟು ರಾಜಕೀಯ ಉದ್ದೇಶದ ಯಾತ್ರೆ ಕೈಬಿಡಿ ಎಂದು  ಕೈ ನಾಯಕರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಆರಗ ಜ್ಞಾನೇಂದ್ರ ಮನವಿ ಮಾಡಿದ್ದು,  ಸಾರ್ವಜನಿಕರ ಆರೋಗ್ಯದ ಬಗ್ಗೆ ಆರಂಭದಲ್ಲೇ ಆತಂಕ ಇತ್ತು. ಹೀಗಾಗಿ ಪಾದಯಾತ್ರೆ ಮುಂದೂಡಿ ಅಂತ ಮನವಿ ಮಾಡಿದ್ವಿ, ಈಗ ಎಲ್ಲರ ಆತಂಕ ನಿಜವಾಗುತ್ತಿದೆ. ಕೊರೋನಾ ಕೇಸ್ ಹೆಚ್ಚಾಗುತ್ತಿದೆ. ಅಪಪ್ರಚಾರ, ವಿತಂಡವಾದ ಬಿಟ್ಟು ಪಾದಯಾತ್ರೆ ಕೈಬಿಡಿ ಎಂದು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದಾರೆ.