ಮನೆ ರಾಜಕೀಯ ಯಡಿಯೂರಪ್ಪ ಯಾವಾಗಲು ಬಿಳಿ ಸಫಾರಿಯನ್ನೆ ಹಾಕೋದು ಏಕೆ ಗೊತ್ತಾ ?

ಯಡಿಯೂರಪ್ಪ ಯಾವಾಗಲು ಬಿಳಿ ಸಫಾರಿಯನ್ನೆ ಹಾಕೋದು ಏಕೆ ಗೊತ್ತಾ ?

0

ಕರ್ನಾಟಕದ ರಾಜ್ಯ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡ್ಯೂರಪ್ಪ ಒಂದು ಅಪರೂಪದ ಡ್ರಸ್‌ಕೋಡ್ ಹೊಂದಿದ್ದಾರೆ. ಬಿಎಸ್‌ವೈ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಆ ಶ್ವೇತವರ್ಣದ ಖಡಕ್ ಸಫಾರಿ ಧರಿಸಿರುವ ಯಡ್ಯೂರಪ್ಪರ ಚಿತ್ರಣ ಕಣ್ಣ ಮುಂದೆ ಬಂದು ಬಿಡುತ್ತೆ. ತಾನು ವಿರೋಧ ಪಕ್ಷದ ನಾಯಕನಾಗಿದ್ದಾಗಲೂ, ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದಾಗಲೂ, ಅಷ್ಟೇ ಯಾಕೇ ರಾಜ್ಯದ ಮುಖ್ಯಮಂತ್ರಿಯಾದಾಗಲೂ ಬಿಎಸ್‌ವೈ ಅವರದ್ದು ಒಂದೆ ಡ್ರಸ್‌ಕೋಡ್, ಆ ಡ್ರಸ್‌ಕೋಡ್ ಬೇರೆ ಯಾವುದು ಅಲ್ಲ ಬಿಳಿ ಬಣ್ಣದ ಸಫಾರಿ. ಪ್ರತಿ ದಿನ, ಪ್ರತಿ ಕ್ಷಣ ಸದಾ ಒಂದೆ ರೀತಿಯ ಲುಕ್ ಈ ವೈಟ್ ಸಫಾರಿ. ಬಿಳಿ ಸಫಾರಿ ಹಿಂದಿದೆ ರೋಚಕ ಸ್ಟೋರಿ….

ಹೌದು ಯಡ್ಯೂರಪ್ಪ ಧರಿಸುವ ಬಿಳಿ ಸಫಾರಿ ಹಿಂದೆ ಒಂದು ರೋಚಕ ಸ್ಟೋರಿ ಅಡಗಿದೆ. ಅದು ಕೇವಲ ಯಡ್ಯೂರಪ್ಪ ಅವರ ವೈಯುಕ್ತಿಕ ಜೀವನಕ್ಕಲ್ಲ, ಇಂದು ದೇಶದಲ್ಲಿ ಅಗ್ರಮಾನ್ಯ ಸ್ಥಾನದಲ್ಲಿರುವ ಬಿಜೆಪಿ ಪಕ್ಷ ದಕ್ಷಿಣ ಭಾರತದಲ್ಲಿ ಆಗಷ್ಟೆ ಅಂಬೆಗಾಲಿಡುತ್ತಿದ್ದ ಕಾಲದಲ್ಲಿ ಪಕ್ಷಕ್ಕಾಗಿ ಬಿಎಸ್‌ವೈ ತೆಗೆದುಕೊಂಡ ಧೃಢ ಸಂಕಲ್ಪದ ಸ್ಟೋರಿ. ಕರ್ನಾಟಕದಲ್ಲಿ ಬಿಜೆಪಿಯನ್ನ ಸೈಕಲ್ ತುಳಿದು ಕಟ್ಟಿದ ಯಡ್ಯೂರಪ್ಪ ಪಕ್ಷಕ್ಕಾಗಿ ತ್ಯಾಗ ಮಾಡಿದ್ದಾರೆ ಅನ್ನೋದನ್ನ ಓದಿದ್ದೇವೆ,ಕೇಳಿದ್ದೇವೆ. ಆದ್ರೆ ಪಕ್ಷಕ್ಕಾಗಿಯೇ ಯಡ್ಯೂರಪ್ಪ ಬಿಳಿ ಸಫಾರಿ ತೊಟ್ಟರು ಅಂದ್ರೆ ನೀವು ನಂಬ್ತಿರಾ? ನೀವು ನಂಬದೆ ಇದ್ರು ಯಡ್ಯೂರಪ್ಪ ಧರಿಸುವ ಬಿಳಿ ಸಫಾರಿ ಹಿಂದೆ ಪಕ್ಷ ಬೆಳೆಸುವ ಮಹದಾಸೆ ಇತ್ತು ಅನ್ನೋದು ಅಕ್ಷರ:ಶಹ ಸತ್ಯ. ಆ ಒಂದು ಮಾತಿನಿಂದ ಬಿಳಿ ಬಣ್ಣಕ್ಕೆ ತಿರುಗಿದ ಬಿಎಸ್‌ವೈ ಸಮವಸ್ತ್ರ.

ಯಡ್ಯೂರಪ್ಪರೇ ಆತ್ಮಿಯರ ಬಳಿ ಹೇಳಿಕೊಂಡಂತೆ, ಬಿಜೆಪಿ ಪಕ್ಷ ಚಿಕ್ಕದಿದ್ದಾ ಪಕ್ಷ ನಡೆಸಲು ದೇಣಿಗೆ ಹಣ ಸಂಗ್ರಹಿಸಲು ಹಲವು ಉದ್ಯಮಿಗಳ ಬಳಿ ಹೋಗುತ್ತಿದ್ದರಂತೆ. ಯಡ್ಯೂರಪ್ಪ ಪಕ್ಷಕ್ಕಾಗಿ ಯಾರ ಬಳಿ ಹೋಗಿ ಎಷ್ಟೇ ನೆರವು ಕೇಳಿದ್ರೂ ಸಿಗುತ್ತಿದ್ದದ್ದು ಮಾತ್ರ ತುಂಬಾ ಕಡಿಮೆ. ದೇಣಿಗೆ ಸಿಗದಿದ್ದ ಸಂದರ್ಭದಲ್ಲಿ ಪಕ್ಷ ನಡೆಸಲು ಪರಿಸ್ಥಿತಿ ಕಷ್ಟ ಇತ್ತು, ಆದ್ರೆ ಯಡ್ಯೂರಪ್ಪ ಮಾತ್ರ ತಮ್ಮ ಛಲ ಬಿಡದೆ ಉದ್ಯಮಿಗಳ ಬಳಿ ಹೋಗೋದನ್ನ ಬಿಡಲಿಲ್ಲ. ಹೀಗೆ ಅಂದಿಗೆ ಶ್ರೀಮಂತರ ಸಾಲಿನಲ್ಲಿದ್ದ ಖ್ಯಾತ ಉದ್ಯಮಿಯಾದ ಖೋಡಾಯಿಸ್ ಸಂಸ್ಥೆಯ ಮಾಲೀಕರಾದ ಶ್ರೀಹರಿ ಖೋಡೆ ಅವರನ್ನ ಭೇಟಿ ಮಾಡಿದ್ದರು. ಕುಶಾಲೋಪರಿ ಮಾತು ನಡೆಸುತ್ತಾ ಕುಳಿತಿದ್ದ ಖೋಡೆಯವರು ಯಡ್ಯೂರಪ್ಪರಿಗೆ ಸರ್ ನೀವು ಒಂದು ಡ್ರಸ್‌ಕೋಡ್ ಇಟ್ಕೋಳಿ ಆಗ ನೀವು ಬರ್ತಾ ಇದ್ರೇನೆ ಯಡ್ಯೂರಪ್ಪ ಬಂದ್ರು ಅಂತ ಗೊತ್ತಾಗಬೇಕು ಆ ಥರ ಇರಬೇಕು ಅಂದ್ರಂತೆ. ಆಗ ಯಡ್ಯೂರಪ್ಪ ಸಣ್ಣ ನಗು ಚೆಲ್ಲಿದರಂತೆ. ಅಷ್ಟಕ್ಕೆ ಸುಮ್ಮನಾಗಾದ ಖೋಡೆಯವರು, ಇಲ್ಲ ಸರ್ ನೀವು ಎಲ್ಲರೂ ಗುರುತು ಹಿಡಿಯುವ ರೀತಿ ಬಟ್ಟೆ ಹಾಕಬೇಕು. ನಿಮ್ಮ ಬಟ್ಟೆಯೇ ನಿಮ್ಮ ಗುರುತಾಗಬೇಕು. ಅದನ್ನು ನೋಡಿಯೇ ಜನ ಯಡಿಯೂರಪ್ಪ ನವರು ಬಂದರು ಎನ್ನಬೇಕು ಅಂತ ಹೇಳಿದ್ರಂತೆ. ಆ ಒಂದು ಮಾತು ಯಡ್ಯೂರಪ್ಪರ ಬಿಳಿ ಸಫಾರಿಗೆ ಬದಲಾಗಲು ಕಾರಣವಾಯಿತಂತೆ.

30 ವರ್ಷಗಳಿಂದ ಇದೆ ಸಫಾರಿ

ಮುಂದೇಯೂ ಇದೆ. ಬಿ.ಎಸ್.ಯಡ್ಯೂರಪ್ಪನವರಿಗೆ ಶ್ರೀಹರಿ ಖೋಡೆಯವರು ಹೇಳಿದ ಮಾತಿನಿಂದ ಒಂದು ಸಣ್ಣ ಪರಿವರ್ತನೆ ದಾರಿ ಸಿಕ್ಕಿದಂತಾಯಿತು. ಮರುದಿನದಿಂದಲೇ ಬಿಳಿ ಸಫಾರಿಯನ್ನ ತೊಡಲು ಆರಂಭಿಸಿದ ಬಿಎಸ್‌ವೈ, ತನ್ನದೆ ಆದ ಒಂದು ಡ್ರಸ್‌ಕೋಡ್ ಆರಂಭಿಸಿಕೊಂಡರು. ಸಾಕಷ್ಟು ವಿಭಿನ್ನವಾಗಿರುವ ಯಡ್ಯೂರಪ್ಪರ ಆ ಸಫಾರಿಯಲ್ಲಿ ಒಟ್ಟು ಮೂರು ಜೇಬುಗಳಿದ್ದು, ಎರಡು ಮುಂಬದಿಯಲ್ಲಿದ್ದರೇ ಒಂದು ಮೇಲ್ಬಾಗದಲ್ಲಿದೆ. ಪ್ಯಾಂಟ್‌ನಲ್ಲು ಎರಡು ಜೇಬುಗಳು ಇದೆ. ಒಂದೆ ರೀತಿಯ ಈ ಸಫಾರಿಗಳು ಯಡ್ಯೂರಪ್ಪ ಬಳಿ ಲೆಕ್ಕವಿಲ್ಲದಷ್ಟಿದೆ. ಯಡ್ಯೂರಪ್ಪ ಬರೋಬ್ಬರಿ 30 ವರ್ಷಗಳಿಂದ ಈ ರೀತಿ ಸಫಾರಿ ತೊಡುತ್ತಿದ್ದಾರೆ. 30 ವರ್ಷಗಳಿಂದ ಬಿಳಿ ಸಫಾರಿ ಬಿಟ್ಟು ಬೇರೆ ಬಟ್ಟೆಯನ್ನ ಹಾಕಿಲ್ಲ ಬಿಎಸ್‌ವೈ. ಆಪ್ತರ ಬಳಿ ಹೇಳಿಕೊಂಡಂತೆ ಯಡ್ಯೂರಪ್ಪ ಮುಂದೇಯೂ ಬಿಳಿ ಸಫಾರಿಯನ್ನೆ ಹಾಕ್ತಾರಂತೆ. ಇಷ್ಟೇಲ್ಲ ಕೇಳಿದ ಮೇಲೆ ಬಿಎಸ್‌ವೈ ಅಭಿಮಾನಿಗಳಿಗೆ ಬಿಜೆಪಿ ಹಾಗೂ ಯಡ್ಯೂರಪ್ಪ ಮೇಲಿನ ಅಭಿಮಾನ ಇಮ್ಮಡಿಯಾಗೋದ್ರಲ್ಲಿ ಅನುಮಾನ ಇಲ್ಲ. ಬಿಜೆಪಿ ಪಕ್ಷಕ್ಕೆ ಯಡ್ಯೂರಪ್ಪ ಮಾಡಿರುವ ಹಲವಾರು ತ್ಯಾಗದಲ್ಲಿ ತನ್ನ ಬಣ್ಣ ಬಣ್ಣದ ಬಟ್ಟೆಗಳನ್ನ ತ್ಯಜಿಸಿ ಪಕ್ಷದ ವರ್ಚಸ್ಸು ಹೆಚ್ಚಿಸಲು ಏಕರೂಪದ ಶ್ವೇತವರ್ಣದ ಈ ಶಪಥ ಮಾಡಿ ಕೊನೆಗು ಪಕ್ಷವನ್ನ ಅಧಿಕಾರಕ್ಕೆ ತಂದ ಬಿಎಸ್‌ವೈ ಸಾಧನೆ ಹೆಮ್ಮೆಯೇ ಸರಿ.

ಬಿಳಿಯೇ ಸಫಾರಿ ಯಾಕೇ ?

ಸಫಾರಿ ಎಂದಾಕ್ಷಣ ಬೂದು ಬಣ್ಣ ಅಥವ ಕಪ್ಪು ಬಣ್ಣ ಅಂದಿನ ಕಾಲದಿಂದಲೂ ಟ್ರೆಂಡ್ ಇರುವ ಬಣ್ಣಗಳು. ಆದ್ರೆ ಯಡ್ಯೂರಪ್ಪ ಮಾತ್ರ ಬಿಳಿ ಬಣ್ಣದ ಸಫಾರಿ ಧರಿಸುತ್ತಾರೆ. ಬಿಳಿ ಬಣ್ಣದ ಆಯ್ಕೆಯ ಹಿಂದೆ ಸ್ವಚ್ಚ ಹಾಗೂ ಶುಭ್ರತೆಯ ಉದ್ದೇಶ ಇದೆ. ಹೌದು ಬಿಳಿ ಎಂದ್ರೆ ಅದು ಎಲ್ಲಕ್ಕಿಂತ ಸ್ಚಚ್ಛವಾದದ್ದು ಅನ್ನೋ ಮಾತಿದೆ. ಯಡ್ಯೂರಪ್ಪನವರ ವಿಚಾರದಲ್ಲು ಇದೆ ಮಾತು ಜನಜನಿತವಾಗಿದೆ. ಬಿಜೆಪಿಯಲ್ಲಿ ಪ್ರಾಮಾಣಿಕ ಹಾಗೂ ನೈತಿಕತೆಯ ವ್ಯಕ್ತಿತ್ವದಲ್ಲಿ ಬಿಎಸ್‌ವೈ ಹೆಸರು ಮುಂಚೂಣಿಯಲ್ಲಿದೆ. ಇತ್ತಿಚಿನ ದಿನಗಳಲ್ಲಿ ಭ್ರಷ್ಟಚಾರ ಹಾಗೂ ಕುಟುಂಬ ರಾಜಕಾರಣದ ಆರೋಪಗಳನ್ನ ಹೊರೆತುಪಡಿಸಿದರೆ ಬಿಎಸ್‌ವೈ ಶುದ್ದಹಸ್ತ ವ್ಯಕ್ತಿ ಅನ್ನೋದರದಲ್ಲಿ ಎರಡ ಮಾತಿಲ್ಲ.

ಹಿಂದಿನ ಲೇಖನಮಹಾರಾಷ್ಟ್ರದಲ್ಲಿ ಗೂಳಿ ರೇಸ್‌ಗೆ ಸುಪ್ರೀಂಕೋರ್ಟ್ ಅನುಮತಿ
ಮುಂದಿನ ಲೇಖನಆಪರೇಶನ್ಗೆ ಬಂದಿದ್ದ ನೈಜೀರಿಯಾದವ ಸೈಲೆಂಟ್ ಆಗಿ ಡ್ರಗ್ ಪೆಡ್ಲರ್