ಮನೆ ರಾಜಕೀಯ ವಿಧಾನ ಪರಿಷತ್ ಸಚಿವಾಲಯದ ಕಚೇರಿಗಳಿಗೆ ಸಭಾಪತಿ ಬಸವರಾಜ ಹೊರಟ್ಟಿ ದಿಢೀರ್ ಭೇಟಿ, ಪರಿಶೀಲನೆ.

ವಿಧಾನ ಪರಿಷತ್ ಸಚಿವಾಲಯದ ಕಚೇರಿಗಳಿಗೆ ಸಭಾಪತಿ ಬಸವರಾಜ ಹೊರಟ್ಟಿ ದಿಢೀರ್ ಭೇಟಿ, ಪರಿಶೀಲನೆ.

0

ಬೆಂಗಳೂರು:  ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ರಾಜ್ಯಾದ್ಯಂತ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಮಧ್ಯೆ  ವಿಧಾನಪರಿಷತ್ ಸಚಿವಾಲಯದ ಕಚೇರಿಗಳಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು  ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪರಿಷತ್ ಸಚಿವಾಲಯದ ಕಚೇರಿಗಳಿಗೆ ಏಕಾಏಕಿ‌ ಭೇಟಿ ನೀಡಿ ಸಭಾಪತಿ ಬಸವರಾಜ ಹೊರಟ್ಟ ಅವರು, ಕೊರೋನಾ ನಿಯಮಾವಳಿ ಪಾಲನೆಯಾಗಿದೆಯೇ ಎಂದು ಪರಿಶೀಲನೆ ನಡೆಸಿದರು.  ವಿಧಾನಸಭೆಯ ಮೊದಲ ಅಂತಸ್ತಿನಲ್ಲಿರುವ ಕಚೇರಿಗಳಲ್ಲಿ ಬಸವರಾಜ ಹೊರಟ್ಟಿ ಅವರ ಪರಿಶೀಲನೆ ಕಾರ್ಯ ಮುಂದುವರಿದೆ.