ಮನೆ ಸುದ್ದಿ ಜಾಲ ವೀಕೆಂಡ್ ಕರ್ಪ್ಯೂ ಹಿಂಪಡೆಯುವಂತೆ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಒತ್ತಾಯ

ವೀಕೆಂಡ್ ಕರ್ಪ್ಯೂ ಹಿಂಪಡೆಯುವಂತೆ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಒತ್ತಾಯ

0

ಮೈಸೂರು: ಕೊರೋನಾ ತಡೆಯುವ ಉದ್ಧೇಶಕ್ಕಾಗಿ ರಾಜ್ಯದಲ್ಲಿ ಜಾರಿ ಮಾಡಿರುವ ಶೇ.50 ರಷ್ಟು ವ್ಯಾಪಾರ ವಹಿವಾಟು, ವೀಕೆಂಡ್ ಕರ್ಪ್ಯೂ ವಾಪಸ್ ಪಡೆಯುವಂತೆ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಒತ್ತಾಯ ಮಾಡಿದೆ.

ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಇಂದು ಸುದ್ದಿಗೋಷ್ಠಿ ನಡೆಸಲಾಯಿತು. ನಾವು ಕೋವಿಡ್ ಮುಂಜಾಗ್ರತಾ ಕ್ರಮವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದೇವೆ. ತೆರಿಗೆ, ಕಂದಾಯ ಎಲ್ಲವನ್ನೂ ಕಾಲಕಾಲಕ್ಕೆ ಸಂಪೂರ್ಣ ಸಂದಾಯ ಮಾಡುತ್ತಿದ್ದೇವೆ. ಆದ್ರೆ ಶೇ.50 ರಷ್ಟು ಗ್ರಾಹಕರನ್ನ ಇಟ್ಟುಕೊಂಟು ವ್ಯಾಪಾರ ಮಾಡಲು ಸಾಧ್ಯವಿಲ್ಲ. ವ್ಯಾಪಾರದ ಸ್ಥಳದಲ್ಲಿ ಮಾಸ್ಕ್, ಸ್ಯಾನಿಟೈಸರ್ ಬಳಸಿ, ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರುವ  ಪ್ರಮಾಣಪತ್ರವನ್ನು ನೋಡಿ ನಾವು ವಹಿವಾಟು ಮಾಡುತ್ತಿದ್ದೇವೆ. ವೀಕೆಂಡ್ ನಲ್ಲಿ ನಮ್ಮ ವ್ಯಾಪಾರ ವಹಿವಾಟು ಹೆಚ್ಚಾಗಿರುತ್ತದೆ. ಈ ವೇಳೆಯಲ್ಲಿ ಕರ್ಪ್ಯೂ ವಿಧಿಸಿದ್ರೆ ನಾವು ಹೋಗೊದೆಲ್ಲಿಗೆ..? ರಾಜಕೀಯ ರ್ಯಾಲಿಗಳಿಗೆ ಇಲ್ಲದ ನಿರ್ಬಂಧ ನಮಗೆ ಯಾಕೆ.? ಹೀಗಾಗಿ ಶೇ.50 ರಷ್ಟು ವ್ಯಾಪಾರ ವಹಿವಾಟು, ವೀಕೆಂಡ್ ಕರ್ಪ್ಯೂ ವಾಪಸ್ ಪಡೆಯಬೇಕು ಎಂದು ಸರ್ಕಾರಕ್ಕೆ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಆಗ್ರಹಿಸಿದೆ.

ಈ  ಕುರಿತು ಮಾತನಾಡಿದ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ ಅಸಮಾಧಾನ ವ್ಯಕ್ತಪಡಿಸಿ, ಲಸಿಕೆ ಪಡೆದ ಮೇಲೂ ಲಾಕ್ ಡೌನ್ ಯಾಕೆ. ಈಗಾಗಲೇ ಶೇ.95 ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ. ಲಸಿಕೆಗಿಂತ ಮೊದಲು ಲಾಕ್ ಡೌನ್ ಮಾಡಿದ್ದು ಸರಿ. ಲಸಿಕೆ ಪಡೆದ ಮೇಲೂ ಲಾಕ್ ಡೌನ್ ಕ್ರಮ ಸರಿಯಲ್ಲ. ಜನರಿಗೆ ಲಸಿಕೆ ಮೇಲೆ ಡೌಟ್ ಬರಲು ಶುರುವಾಗಿದೆ. ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರ ಅಲ್ಲ. ಅವೈಜ್ಞಾನಿಕವಾಗಿ ವೀಕೆಂಡ್ ಕರ್ಪ್ಯೂ ಮಾಡೋದ್ರಿಂದ ಸಾಕಷ್ಟು ವ್ಯಾಪಾರ ನೆಲ ಕಚ್ಚಿದೆ. ಬಿಜೆಪಿ ಸರ್ಕಾರಕ್ಕೆ ಲಾಕ್ ಡೌನ್ ನಿಂದ ಕೆಟ್ಟ ಹೆಸರು ಬರುತ್ತದೆ. ಶೇ.50 ರಷ್ಟು ಗ್ರಾಹಕರನ್ನು ಇಟ್ಟುಕೊಂಡು ವ್ಯಾಪಾರ ಮಾಡಿ ಅಂತೀರಾ‌. ಹೋಟೆಲ್ ಉದ್ಯಮಕ್ಕೆ ಈ ರೀತಿ ನಿರ್ಬಂಧ ಸರಿಯಲ್ಲ. ಸಾವಿರಾರು ಮಂದಿ ಸಭೆ ಸೇರಬಹುದು. ಆದ್ರೆ ಹೋಟೆಲ್ ನಲ್ಲಿ ಊಟ ಮಾಡಲು ಬಂದ್ರೆ ನಿಷೇಧ ತರ್ತಿರಾ ಎಂದು ಕಿಡಿಕಾರಿದರು.

ಹಿಂದಿನ ಲೇಖನಮೇಕೆದಾಟು ಪಾದಯಾತ್ರೆ ಕೈಬಿಡುವಂತೆ ಕಾಂಗ್ರೆಸ್ಗೆು ಗೃಹ ಸಚಿವ ಮನವಿ
ಮುಂದಿನ ಲೇಖನಅಣ್ಣನ ಮೃತದೇಹ ನೋಡಿ ಅಘಾತದಿಂದ ತಂಗಿ ಸಾವು