ಮನೆ ಕ್ರೀಡೆ ಸೆಮಿಫೈನಲ್ ಸೋತು ಕಣ್ಣೀರಿಟ್ಟಿದ್ದ ಪಿವಿ ಸಿಂಧು ಪದಕ ಗೆಲ್ಲಲು ಕಾರಣ ಆ ಒಬ್ಬ ವ್ಯಕ್ತಿ

ಸೆಮಿಫೈನಲ್ ಸೋತು ಕಣ್ಣೀರಿಟ್ಟಿದ್ದ ಪಿವಿ ಸಿಂಧು ಪದಕ ಗೆಲ್ಲಲು ಕಾರಣ ಆ ಒಬ್ಬ ವ್ಯಕ್ತಿ

0

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದ ಕಂಚಿನ ಪದಕದ ಸುತ್ತಿನ ಪಂದ್ಯದಲ್ಲಿ ಭಾರತದ ಪಿ ವಿ ಸಿಂಧು ಮತ್ತು ಚೀನಾದ ಹೀ ಬಿಂಗ್ ಜಿಯಾವೊ ಭಾಗವಹಿಸಿದ್ದರು. ಈ ಪಂದ್ಯದಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಚೀನಾದ ಬ್ಯಾಡ್ಮಿಂಟನ್ ಆಟಗಾರ್ತಿ ಹೀ ಬಿಂಗ್ ಜಿಯಾವೊ ವಿರುದ್ಧ 21-13, 21-15 ನೇರ ಸೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸುವುದರ ಮೂಲಕ ಭಾರತಕ್ಕೆ ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಎರಡನೇ ಪದಕವನ್ನು ತಂದುಕೊಟ್ಟಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾನುವಾರ (ಆಗಸ್ಟ್ 1) ನಡೆದ ಪಿವಿ ಸಿಂಧು ಮತ್ತು ಹಿ ಬಿಂಗ್ ಜಿಯಾವೊ ನಡುವಿನ ಪಂದ್ಯದಲ್ಲಿ ಆರಂಭದಿಂದಲೂ ಪಿವಿ ಸಿಂಧು ಪಂದ್ಯದ ಮೇಲೆ ಹಿಡಿತ ಸಾಧಿಸಲು ಆರಂಭಿಸಿದರು. ಮೊದಲನೇ ಸುತ್ತಿನಲ್ಲಿ 21-13 ಅಂತರದಿಂದ ಸುಲಭವಾಗಿ ಜಯ ಗಳಿಸಿದ ಪಿ ವಿ ಸಿಂಧು, ಎರಡನೇ ಸುತ್ತಿನಲ್ಲಿ ಎದುರಾಳಿ ಹಿ ಬಿಂಗ್ ಜಿಯಾವೊ ಕಡೆಯಿಂದ ಕೊಂಚಮಟ್ಟಿಗಿನ ಪೈಪೋಟಿಯನ್ನು ಎದುರಿಸಿದರು. ಆದರೂ ಛಲ ಬಿಡದ ರಿಯೊ ಒಲಿಂಪಿಕ್ಸ್ ರಜತ ಪದಕ ವಿಜೇತೆ ಪಿವಿ ಸಿಂಧು ಎರಡನೇ ಸೆಟ್‌ನಲ್ಲಿಯೂ ಜಯಗಳಿಸುವುದರ ಮೂಲಕ ಕಂಚಿನ ಪದಕವನ್ನುತಮ್ಮದಾಗಿಸಿಕೊಂಡರು.

ಇನ್ನು ಈ ಪಂದ್ಯ ಮುಗಿದ ನಂತರ ಮಾತನಾಡಿರುವ ಪಿವಿ ಸಿಂಧು ಸೆಮಿಫೈನಲ್ ಹಂತದಲ್ಲಿ ಸೋತ ಸಂದರ್ಭದಲ್ಲಿ ತಾವು ಪಟ್ಟ ನೋವು ಮತ್ತು ತಮಗೆ ಸ್ಫೂರ್ತಿ ತುಂಬಿದವರ ಕುರಿತು ಹಂಚಿಕೊಂಡಿದ್ದಾರೆ. ಕಂಚಿನ ಪದಕ ಗೆಲ್ಲಲು ಪಡೆದ ಪ್ರೇರಣೆಯ ಕುರಿತು ಪಿ ವಿ ಸಿಂಧು ಈ ಕೆಳಕಂಡಂತೆ ಹಚ್ಚಿಕೊಂಡಿದ್ದಾರೆ

ಸೆಮಿಫೈನಲ್ ಸೋತಾಗ ಕಣ್ಣೀರಿಟ್ಟಿದ್ದ ಪಿವಿ ಸಿಂಧು ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 31 ಜುಲೈ ಶನಿವಾರದಂದು ನಡೆದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ತೈ ತ್ಸು ಯಿಂಗ್ ವಿರುದ್ಧ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು 18-21, 11-21 ಸೆಟ್‌ಗಳ ಅಂತರದಲ್ಲಿ ಸೋಲನುಭವಿಸಿದರು. ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ ಆರಂಭವಾದಾಗಿನಿಂದ ಯಾವುದೇ ಪಂದ್ಯದಲ್ಲಿಯೂ ಸೋಲದೆ ಸೆಮಿಫೈನಲ್ ಹಂತವನ್ನು ಯಶಸ್ವಿಯಾಗಿ ತಲುಪಿದ್ದ ಪಿ ವಿ ಸಿಂಧು, ಸೆಮಿಫೈನಲ್ ಪಂದ್ಯದಲ್ಲಿ ಸೋತ ನಂತರ ಕಣ್ಣೀರಿಟ್ಟಿದ್ದ ವಿಷಯವನ್ನು ಸ್ವತಃ ಪಿವಿ ಸಿಂಧು ಕಂಚಿನ ಪದಕವನ್ನು ಗೆದ್ದ ನಂತರ ಹಂಚಿಕೊಂಡಿದ್ದಾರೆ.

 ಸೆಮಿಫೈನಲ್ ಸೋತಾಗ ಧೈರ್ಯ ತುಂಬಿದ್ದು ಪಿವಿ ಸಿಂಧು ತಂದೆ ಚೀನಾದ ತೈಪೆಯ ಬ್ಯಾಡ್ಮಿಂಟನ್ ಆಟಗಾರ್ತಿ ತೈ ತ್ಸು ಯಿಂಗ್ ವಿರುದ್ಧ ಭಾರತದ ಪಿವಿ ಸಿಂಧು ಸೆಮಿಫೈನಲ್ ಪಂದ್ಯದಲ್ಲಿ ಸೋತ ನಂತರ ಕಣ್ಣೀರು ಹಾಕಿದ್ದ ಸಂದರ್ಭದಲ್ಲಿ ಪಿ ವಿ ಸಿಂಧುಗೆ ಧೈರ್ಯ ತುಂಬಿದ್ದು ಆಕೆಯ ತಂದೆ ಪಿ ವಿ ರಮಣ. ಸೆಮಿಫೈನಲ್ ಹಂತದಲ್ಲಿ ಸೋತು ಕಂಗೆಟ್ಟಿದ್ದ ಪಿವಿ ಸಿಂಧು ಜೊತೆ ಮಾತನಾಡಿದ ಪಿ ವಿ ರಮಣ ಅವರು ಪಿ ವಿ ಸಿಂಧುಗೆ ತಮ್ಮ ಮಾತುಗಳಿಂದ ಆತ್ಮಸ್ಥೈರ್ಯವನ್ನು ತುಂಬಿದ್ದಾರೆ. ಪಿವಿ ಸಿಂಧು ಜತೆ ಮಾತನಾಡಿದ ಆಕೆಯ ತಂದೆ ಪಿ ವಿ ರಮಣ ‘ನನಗೋಸ್ಕರ ಕಂಚಿನ ಪದಕದ ಸುತ್ತಿನಲ್ಲಿ ನೀನು ಪಂದ್ಯವನ್ನು ಗೆಲ್ಲಬೇಕು, ನೀನು ಆ ಪಂದ್ಯವನ್ನು ಗೆದ್ದರೆ ಅದೇ ನೀನು ನನಗೆ ಕೊಡುವ ಉಡುಗೊರೆ’ ಎಂದು ಪಿ ವಿ ರಮಣ ಅವರು ಪಿ ವಿ ಸಿಂಧುಗೆ ಧೈರ್ಯ ತುಂಬಿದ್ದರು. ತಂದೆಯ ಮಾತಿನಂತೆಯೇ ಪಿವಿ ಸಿಂಧು ಕಂಚಿನ ಪದಕದ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ, ಈ ಗೆಲುವಿಗೆ ಪಿ ವಿ ರಮಣ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ಕಂಚು ಗೆದ್ದು ದಾಖಲೆ ಬರೆದ ಪಿ ವಿ ಸಿಂಧು ಪ್ರಸ್ತುತ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಒಲಿಂಪಿಕ್ಸ್ ಪಂದ್ಯಗಳಲ್ಲಿ ಭಾರತದ ಪರ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯೆ ಎಂಬ ದಾಖಲೆಯನ್ನು ಪಿವಿ ಸಿಂಧು ನಿರ್ಮಿಸಿದ್ದಾರೆ. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದ ಪಿ ವಿ ಸಿಂಧು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಳ್ಳುವುದರ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ 2 ಪದಕಗಳನ್ನು ಗೆದ್ದ ಭಾರತೀಯೆ ಎಂಬ ದಾಖಲೆ ಬರೆದಿದ್ದಾರೆ.

ಹಿಂದಿನ ಲೇಖನವ್ಯಕ್ತಿ ಸ್ವಾತಂತ್ರ್ಯ ಕುರಿತಂತೆ ನ್ಯಾ. ಡಿ ವೈ ಚಂದ್ರಚೂಡ್‌ ನಿರ್ಧರಿಸಿದ ಐದು ಪ್ರಕರಣಗಳು ಇವು
ಮುಂದಿನ ಲೇಖನಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ಎ.ಮಂಜು ಗಂಭೀರ ಆರೋಪ