ಮನೆ ರಾಜಕೀಯ ಹಾವು ಬಿಟ್ಟರೆ ತಾನೇ ಅದು ಬುಸ್ ಅನ್ನುತ್ತಾ ಠುಸ್ ಅನ್ನುತ್ತಾ ಗೊತ್ತಾಗೋದು: ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯ

ಹಾವು ಬಿಟ್ಟರೆ ತಾನೇ ಅದು ಬುಸ್ ಅನ್ನುತ್ತಾ ಠುಸ್ ಅನ್ನುತ್ತಾ ಗೊತ್ತಾಗೋದು: ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯ

0

ಮೈಸೂರು: ಬಿಜೆಪಿ ಸಚಿವ, ಶಾಸಕರು ಕಾಂಗ್ರೆಸ್ ಗೆ ಬರುತ್ತಾರೆ ಅಂತ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಹಾವಿನ ಬುಟ್ಟಿ ಇಟ್ಟುಕೊಂಡು ಹಾವು ಬಿಡ್ತೀವಿ ಬಿಡ್ತೀನಿ ಅಂತಾರೆ. ಬುಟ್ಟಿ ತೆಗೆದರೆ ತಾನೆ ಗೊತ್ತಾಗೋದು, ಬುಸ್ ಅನ್ನುತಾ ಅಥವಾ ಠುಸ್ ಅನ್ನುತ್ತಾ ಗೊತ್ತಾಗೋದುಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಕೂಡ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತಾರೆ, ಅವಲೆಲ್ಲಾ ನನ್ನ ಸಂಪರ್ಕದಲ್ಲಿದ್ದಾರೆ ಅಂತ ಹೇಳುತ್ತಾರೆ. ಇದು ಎಲ್ಲರಿಗೂ ಒಂದು ತರಹದ ಚಟವಾಗಿದೆ. ಇದಕ್ಕೆ ನಾವು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಸ್ವಪಕ್ಷದ ರಮೇಶ್ ಜಾರಕಿಹೊಳಿಗೂ ಕೂಡ ಸೋಮಶೇಖರ್ ತೀವ್ರ ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ನವರಿಗೆ ಮಾಡಲು ಬೇರೆ ಕೆಲಸವಿಲ್ಲ. ಬೆಳಿಗ್ಗೆ ಎದ್ದರೆ ಸಾಕು ಕಿರುಚಾಡೋದು ಅವರಿಗೆ ಮಾಮೂಲಿ ಕೆಲಸ. ಆದರೆ ನಮಗೆ ಮಾಡಲು ಬೇಕಾದಷ್ಟು ಕೆಲಸವಿದೆ ಎಂದು ಹೇಳಿದರು.

ಹಿಂದಿನ ಲೇಖನ5G ಪ್ರಕರಣ; ನಟಿ ಜೂಹಿ ಚಾವ್ಲಾಗೆ ವಿಧಿಸಿದ ದಂಡದ ಪ್ರಮಾಣ ಇಳಿಸಿದ ಹೈಕೋರ್ಟ್!
ಮುಂದಿನ ಲೇಖನರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಸಕ್ರಿಯವಾಗಿ ಜಾರಿಗೊಳಿಸಲಾಗಿದೆ: ಪ್ರೊ.ಜಿ.ಹೇಮಂತ್ ಕುಮಾರ್