ಕೊವಿಡ್ ಸೋಂಕಿನ ಹೊಸ ತಳಿ ಒಮಿಕ್ರಾನ್ ಕಾಲಿಟ್ಟಿದ್ದು ಈ ಬಾರಿಯೂ ಹೊಸ ವರ್ಷದ ಸಂಭ್ರಮಾಚರಣೆಗೆ ಮಂಕು ಕವಿದಿದೆ. ಆದರೆ ಮಾದಕವಸ್ತು ಪ್ರಿಯರ ಮೇಲೆ ಅದೇನೂ ಎಫೆಕ್ಟ್ ಇಲ್ಲವೆನಿಸುತ್ತಿದೆ. ಏಕೆಂದರೆ ಹೊಸ ವರ್ಷ ಹತ್ತಿರವಾಗ್ತಿದ್ದಂತೆ ಮಾದಕವಸ್ತುಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಅನ್ನುವಂತಾಗಿದೆ. ಆದರೆ ಬೆಂಗಳೂರಲ್ಲಿ ಮಾದಕವಸ್ತು ಮಾರಾಟ ಜಾಲ ಫುಲ್ ಆಕ್ವೀವ್ ಹಿನ್ನೆಲೆ ಬೆಂಗಳೂರು ಪೊಲೀಸರು ನಗರದಾದ್ಯಂತ ಫುಲ್ ಅಲರ್ಟ್ ಆಗಿದ್ದಾರೆ. ಬೆಂಗಳೂರು: ಕೊವಿಡ್ ಸೋಂಕಿನ ಹೊಸ ತಳಿ ಒಮಿಕ್ರಾನ್ ಕಾಲಿಟ್ಟಿದ್ದು ಈ ಬಾರಿಯೂ ಹೊಸ ವರ್ಷದ ಸಂಭ್ರಮಾಚರಣೆಗೆ ಮಂಕು ಕವಿದಿದೆ. ಆದರೆ ಮಾದಕವಸ್ತು ಪ್ರಿಯರ ಮೇಲೆ ಅದೇನೂ ಎಫೆಕ್ಟ್ ಇಲ್ಲವೆನಿಸುತ್ತಿದೆ. ಏಕೆಂದರೆ ಹೊಸ ವರ್ಷ ಹತ್ತಿರವಾಗ್ತಿದ್ದಂತೆ ಮಾದಕವಸ್ತುಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಅನ್ನುವಂತಾಗಿದೆ. ಬೆಂಗಳೂರಲ್ಲಿ ಮಾದಕವಸ್ತು ಮಾರಾಟ ಜಾಲ ಫುಲ್ ಆಕ್ವೀವ್ ಹಿನ್ನೆಲೆ ಬೆಂಗಳೂರು ಪೊಲೀಸರು ನಗರದಾದ್ಯಂತ ಫುಲ್ ಅಲರ್ಟ್ ಆಗಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಒಂದೇ ದಿನ ಅಂತರಾಜ್ಯ ಹಾಗೂ ವಿದೇಶಿ ಪ್ರಜೆ ಸೇರಿ 6 ಮಂದಿ ಡ್ರಗ್ ಪೆಡ್ಲರ್ಸ್ ಅರೆಸ್ಟ್ ಆಗಿದ್ದಾರೆ. ನ್ಯೂ ಇಯರ್ ಗೆ ನಶೆಯ ಮತ್ತೆರಿಸಲು ಸಜ್ಜಾಗಿದ್ದ ಗ್ಯಾಂಗ್ ಸದ್ಯ ಅಂದರ್ ಆಗಿದೆ.
ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ರಚನೆಯಾಗಿದ್ದ ಕೋಣನಕುಂಟೆ ಕೆ.ಎಸ್. ಲೇಔಟ್ ಹಾಗೂ ಗಿರಿನಗರ ಪೊಲೀಸರನ್ನೊಳಂಡ ಸ್ಪೆಷಲ್ ಟೀಂ ಭರ್ಜಿ ಕಾರ್ಯಾಚರಣೆ ನಡೆಸಿದೆ. ದಕ್ಷಿಣ ವಿಭಾಗದಲ್ಲಿ ಡ್ರಗ್ ಪೆಡ್ಲಿಂಗ್ ಮಾಡಲು ಯತ್ನಿಸ್ತಿದ್ದ ಮೂವರು ಅಂತರಾಜ್ಯ ಪೆಡ್ಲರ್ ಹಾಗೂ ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ನ್ಯೂ ಇಯರ್ ಹಿನ್ನೆಲೆ ಬೆಂಗಳೂರಲ್ಲಿ ಮಾದಕವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇರೋದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.