ಮನೆ ಮನೆ ಮದ್ದು  ಗುಲಾಬಿ

 ಗುಲಾಬಿ

0

           ಕಲ್ಲು ಸಕ್ಕರೆ ಪುಡಿ 1/2 ಭಾಗ ; ಜೇನುತುಪ್ಪ 1/2ಭಾಗ ಗುಲಾಬಿ ದಳಗಳು ಒಂದು ಭಾಗ ; ಅಥವಾ ಜೇನುತುಪ್ಪದ ಒಂದು ಭಾಗ ಗುಲಾಬಿ ದಳಗಳು ಒಂದು ಭಾಗ.

Join Our Whatsapp Group

             ಉತ್ತಮ ಗುಣಮಟ್ಟದ ಗುಲಾಬಿಗಳನ್ನು ಆಯ್ದು ದಳಗಳನ್ನು ಬಿಡಿಸಿಟ್ಟುಕೊಳ್ಳಬೇಕು. ನಂತರ ನೀರಿನಲ್ಲಿ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ತೊಳೆದ ನಂತರ ಆರಲು ಬಿಡಬೇಕು ತೇವಾಂಶ ಇಲ್ಲದಂತೆ ಒಳಗಿರಬೇಕು. ಒಂದು ಪಿಂಗಾಣಿ ಜಾಡಿಯಲ್ಲಿ ಕಲ್ಲುಸಕ್ಕರೆ ಪುಡಿ ಉದುರಿಸಿ ಸ್ವಲ್ಪ ಜೇನುತುಪ್ಪ ಹಾಕಿ ನಂತರ ಗುಲಾಬಿ ದಳಗಳನ್ನು ಹರಡಬೇಕು ಮತ್ತೆ ಅದರ ಮೇಲೆ ಕಲ್ಲು ಸಕ್ಕರೆ ಪುಡಿ. ಜೇನುತುಪ್ಪ ಹಾಕಿ ಗುಲಾಬಿ ದಳ ಹರಡಬೇಕು. ಇದೇ ರೀತಿ ಹತ್ತು ಪದರಗಳವರೆಗೆ ಹರಡಬೇಕು. ನಂತರ ಜಾಡಿಯನ್ನು ಸ್ವಚ್ಛವಾದ ಬಿಳಿಯ ಬಟ್ಟೆಯಿಂದ ಮುಚ್ಚಬೇಕು. ತೇವಾಂಶದ ಒಳಗೆ ಹೋಗದಂತೆ ಗಟ್ಟಿಯಾಗಿ ಮುಚ್ಚಬೇಕು. ಆಮೇಲೆ ಈ ಜಾಡಿಯನ್ನು ಹಗಲು ಹೊತ್ತು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಹಿಟ್ಟು ಸೂರ್ಯಾಸ್ತದ ನಂತರ ಮನೆಯೊಳಗಡೆ ತೆಗೆದಿಡಬೇಕು.ಇದೇ ರೀತಿ 21 ದಿನಗಳು ಅಂದರೆ 3 ವಾರಗಳ ಕಾಲ ಮಾಡಬೇಕು. ಆಮೇಲೆ ಬಟ್ಟೆ ತೆಗೆದುಬಿಡಬೇಕು. ರುಚಿಕರವಾದ ಗುಲ್ಕಂದ್  ಸಿದ್ಧವಾಗುತ್ತದೆ. ಗುಲಾಬಿ ದಳಗಳು ಜೇನು ಹಾಗೂ ಕಲ್ಲುಸಕ್ಕರೆ ಬೆರೆತು ಕಳಿತು ಮೃದುವಾಗಿರುತ್ತವೆ. ಇದಕ್ಕೆ ಏಲಕ್ಕಿ ಪುಡಿ ಬೆರೆಸಿದಲ್ಲಿ ಸುವಾಸನೆ ಬರುತ್ತದೆ ಕೆಲವರು ಗುಲ್ಕಂದ್ ತಯಾರಿಕೆಯಲ್ಲಿ ಕೇವಲ ಕಲ್ಲು ಸಕ್ಕರೆ ಬೆರೆಸುವವರು.

         ಜೇನುತುಪ್ಪ ಬೆರೆಸಿ ತಯಾರಿಸಿದ ಗುಲ್ಕಂದ್ ಅತ್ಯುತ್ತಮ.ಆದರೆ ಜೇನುತುಪ್ಪ ಆಹಾರ ಪದಾರ್ಥಗಳ ಉತ್ತಮ ಸಂರಕ್ಷಕವಾಗಿರುವುದರಿಂದ ಕೇವಲ ಜೇನುತುಪ್ಪ ಹಾಕಿ ತಯಾರಿಸಿದ ಗುಲ್ಕಂದ್ ಬಹಳ ಕಾಲ ಇಡಬಹುದು. ಕೇವಲ ಕಲ್ಲು ಸಕ್ಕರೆ ಹಾಕಿ ತಯಾರಿಸಿದ ಗುಲ್ಕಂದ್  ಗೆ ಕೆಡದಂತಿರಲು  ರಾಸಾಯನಿಕ ಸಂರಕ್ಷಕ ಬೆರೆಸಬೇಕಾಗಿ ಬರುವುದರಿಂದ ಉತ್ತಮವಾದದ್ದಲ್ಲ.

 ಇತರೆ  : ಗುಲಾಬಿಯಿಂದ ಮರಬ್ಬ, ಜಾಮ್, ಶರಬತ್ತು, ಅರ್ಕವನ್ನು ತಯಾರಿಸಲಾಗುತ್ತದೆ. ಸೂರ್ಯೋದಯಕ್ಕೆ ಮುಂಚೆಯೇ  ಶೇಖರಿಸಿದ ಹೂಗಳಿಂದ ಪನ್ನೀರನ್ನು ತಯಾರಿಸಲಾಗುತ್ತದೆ. ಇದು ತಂಪುಕಾರಕ.ಒಣಗಿಸಿದ ಸುವಾಸನೆಯುಳ್ಳ ಪನ್ನೀರನ್ನು ಪಾನೀಯ ಬೇಸಿಗೆ ಕಾಲದಲ್ಲಿ ದಾಹವನ್ನು ನೀಗಲೂ ಸಹಕಾರಿ. ಅಲ್ಲದೆ ಗುಲಾಬಿ ದಳಗಳನ್ನು ಉಪ್ಪು ಹೀರುವಂತೆ  ಮಾಡಿ ತಯಾರಿಸಿದ ಪಾಪುರಿ ಒಂದು ಖಾದ್ಯ ವಸ್ತು.

 ಪುರಾಣ :

         ಗ್ರೀಕ್ ಪ್ರೇಮದೇವತೆ ‘ವಿನಸ್’ ತನ್ನ ಪ್ರಿಯ ಎಂಡೋನಿಸ್ ನನ್ನು ಭೇಟಿಯಾಗಲು  ಆತುರದಿಂದ ಬೇಗಬೇಗನೆ  ಹೋಗುವಾಗ ಕಾಲಿಗೆ ಮುಳ್ಳುಚುಚ್ಚಿ ಸೋರಿದ ರಕ್ತದಿಂದ ತೊಯ್ದು ಗುಲಾಬಿ ಕೆಂಪು ವರ್ಣಕ್ಕೆ ತಿರುಗಿತಂತೆ ಖ್ಯಾತ ಚಿತ್ರಗಾರ ಬಾಟಿಸೆಲ್ಲಿಯ ಪ್ರಸಿದ್ಧ ಕಲಾ ಕೃತಿಯಲ್ಲಿ ವಿನಸ್ ಳ  ಜನನ ಚಿತ್ರದಲ್ಲಿ ಸಮುದ್ರದಿಂದ ಉದ್ಭವಿಸುವ ಅವಳ ಜೊತೆಯಲ್ಲಿಯೇ ಗುಲಾಬಯೂ ಉದ್ಭವಿಸುವಂತೆ ಚಿತ್ರಿಸಿದ್ದಾನೆ.

        ಅಕ್ಕಿಲ್ಲೇಸನ ಗುರಾಣಿ ಮೇಲೆ ಗುಲಾಬಿಯನ್ನು ಕೆತ್ತಿರುವುದನ್ನು ಹೋಮರ್ ಉಲ್ಲೇಖಿಸಿದ್ದಾನೆ. ವಂಶ ಲಾಂಛನ ರೂಪಿಸುವಲ್ಲಿ ಗೋರಿಗಳ ರಚನೆಯಲ್ಲಿ, ನಾಗ ನಾಣ್ಯಗಳ ಎರಕದಲ್ಲಿ ಪೇಂಟಿಂಗ್ ಳಲ್ಲಿ! ಉಡುಪುಗಳ ವಿನ್ಯಾಸದಲ್ಲಿ ಅತಿಚೀಟಿಗಳಲ್ಲಿ ಮತ್ತು ಕಲಾತ್ಮಕ ರಚನೆಯಲ್ಲಿ ಗುಲಾಬಿ ಪ್ರಮುಖ ಸ್ಥಾನ ಪಡೆದಿದೆ.

       ಸಂಸ್ಕೃತದಲ್ಲಿ ಮಾತ್ರವಲ್ಲದೆ ಇಂಗ್ಲಿಷ್ ಭಾಷೆಗಳ ಕವನಗಳಲ್ಲಿ ಗುಲಾಬಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.ಷೇಕ್ಸ್ ಪಿಯರ್ ತನ್ನ ಕೃತಿಗಳಲ್ಲಿ ಅನೇಕ ಕಡೆ ಗುಲಾಬಿಯ ಸೌಂದರ್ಯ ವರ್ಣಿಸಿದ್ದಾನೆ. ಜಾನ್ ಕೀಟ್ಸ್, ಶೆಲ್ಲಿಙಙ ಬ್ಲೇಕ್ ಎಲ್ಲರೂ ಗುಲಾಬಿಯ ಅಂದವನ್ನು ಕೊಂಡಾಡಿದ್ದವರೇ. ‘ಥಾಮಸ್  ಮೂರ್ ಬರೆದ ದಿ ಲಾಸ್ಟ್ ರೋಸ್ ಆಫ್’ ಸಮರ್ ಅವರ ಕವನ ಬಹಳ ಜನಪ್ರಿಯ ರವೀಂದ್ರನಾಥ ಟಾಗೋರರು ತಮ್ಮ ಕವನಗಳಲ್ಲಿ ಕುಲವೇ ಕುರಿತು ವರ್ಣಿಸಿದ್ದಾರೆ.

 ಇತಿಹಾಸ :

           ಯುರೋಪಿನಲ್ಲಿ ಒಂದು ಕಾಲದಲ್ಲಿ ಕೆಲವೇ ದಳಗಳುಳ್ಳ ಕಾಡು ಗುಲಾಬಿಗಳಿದ್ದವು. ಇವು ಜೂನ್ ಜುಲೈ ತಿಂಗಳಲ್ಲಿ ಹೂವು ಕೊಡುತ್ತಿದ್ದವು.ನಂತರ ಚೀನಾದಿಂದ ಬಂಗಾಳಕ್ಕೆ ಬಂದ ವ್ಯಾಪಾರಸ್ಥರು ಚಹಾ ವಾಸನೆಯ ಹೂ ಕೊಡುವ ಗಿಡಗಳನ್ನು ಕೊಂಡೊಯ್ದರು. ಅನಂತರ ಚೀನಾದಿಂದಲೇ ಇನ್ನೆರಡು  ಜಾತಿಯ ಗಿಡಗಳು ಒಯಲ್ಪಟ್ಟವು. ಯುರೋಪಿನ ಮತ್ತು ಚೀನಾ ದೇಶದ ಗಿಡಗಳು ಒಂದೇ ಕಡೆಯಲ್ಲಿ ಬೆಳೆಯುತ್ತಿದ್ದಾಗ ಗಾಳಿಯಿಂದ ಪರಾಗ ಪ್ರಸಾರವಾಗಿ ಉಂಟಾದ ಹೊಸ ಬೀಜಗಳನ್ನು ನೆಟ್ಟಾಗ ಅವುಗಳಿಂದ ಹುಟ್ಟಿದ ಗಿಡಗಳಲ್ಲಿ ಕೆಲವು ಉತ್ತಮ ಗುಣಮಟ್ಟದ ಹೂಗಳು ಮೂಡಿ ಬಂದವು.  ಇದನ್ನು ಕಂಡು ಕೃಷಿಕರು ತಾವೇ ಪಾರಂಗ ಪ್ರಸಾರ ಮಾಡಿ ವಿಶೇಷ ಬೀಜಗಳನ್ನು ತಯಾರಿಸಿದರು.ಅಂತಹ ವಿಶೇಷ ಬೀಜಗಳಿಂದ ಹುಟ್ಟಿದ ಗಿಡಗಳಲ್ಲಿ ಇನ್ನಷ್ಟು ಉತ್ತಮ ಹೂಗಳು  ಸಿಕ್ಕಿದವು. ಗುಲಾಬಿ ಅಭಿವೃದ್ಧಿಯಲ್ಲಿ ಪ್ರಥಮ ಹಂತ   ಇದಾಗಿದ್ದು ಪ್ರಸ್ತುತ ಗುಲಾಬಿ ಬೇಸಾಯ ಬೃಹದಾಕಾರ ತಾಳಿದೆ. ಗುಲಾಬಿ ಸೂರ್ಯನು ಪ್ರೀತಿಸುತ್ತದೆ. ಅದರಿಂದ ನೆರಳಿನಲ್ಲಿ ಅದರ  ಬೆಳವಣೆಗೆಗೆ ಉತ್ತಮ ಗುಲಾಬಿಯು ವೈಜ್ಞಾನಿಕ ಸಂಶೋಧನೆಗಳಿಂದ ಜಗತ್ತಿನಲ್ಲಿ ಅತಿ ಹೆಚ್ಚು ಬದಲಾವಣೆಗೆ  ಗುರಿಯಾಗಿದೆ .ಗುಲಾಬಿಯ ದಳ, ಆಕಾರ, ಸುವಾಸನೆ ಎಲ್ಲವೂ ನಮಗೆ ಯಾವ ರೀತಿ ಬೇಕೋ ಆ ರೀತಿ ರೂಪಿಸುವಲ್ಲಿ ಗುಲಾಬಿ ತಳಿಯ ನಿರ್ಮಾಣ ಸಾಧ್ಯ

 ಕ್ರಿಸ್ತಶಕ ಸರದ 1445- 87ರ ಕಾಲದಲ್ಲಿ ಅರಳಿದ ಆರನೇ ಹೆನ್ರಿ ಕಾಲದಿಂದ ಆರಂಭವಾದ ಒಂದು ಯುದ್ಧ ನೂರು ವರ್ಷಗಳ ಕಾಲ ನಡೆದಿತ್ತು ಅದು ಬಿಡುಗುಲಾಬಿ ಲಾಂಛನವುಳ್ಳ ಯಾರ್ಕ್ ಮನೆತನದವರಿಗೂ, ಕೆಂಪು ಗುಲಾಬಿ ಲಾಂಛನದ ಲ್ಯಾಂಕೆಸ್ಟರ್ ಮನೆತನದವರಿಗೂ ನಡೆದ ಅಂತರ್ಯುದ್ಧವಾಗಿದ್ದು ಇದಕ್ಕೆ ಇತಿಹಾಸದಲ್ಲಿ ಗುಲಾಬಿ ಯುದ್ಧವೆಂದು ಹೆಸರು ಬಂದಿದೆ.