ವಿಜಯ್ ರಾಘವೇಂದ್ರ ಪತ್ನಿಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಸ್ಪಂದನಾ ಅವರು ಬ್ಯಾಂಕಾಕ್ ಪ್ರವಾಸದಲ್ಲಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದು ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಕುಟುಂಬ ಹಾಗೂ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿತ್ತು.
ಹೀಗೆ ಪತ್ನಿಯ ಉತ್ತರ ಕ್ರಿಯೆ ಕಾರ್ಯಗಳನ್ನೆಲ್ಲಾ ಮುಗಿಸಿದ ನಂತರ ವಿಜಯ್ ರಾಘವೇಂದ್ರ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪತ್ನಿಗಾಗಿ ಇಂದು ಪತ್ನಿ ಸ್ಪಂದನಾ ಅವರನ್ನು ಕುರಿತು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
ವಿಜಯ್ ರಾಘವೇಂದ್ರ ಪತ್ನಿಯ ಕುರಿತು ತಮ್ಮ ಮನದಲ್ಲಿರುವ ಸಾಲುಗಳಿಗೆ ತಮ್ಮದೇ ದನಿಯನ್ನು ನೀಡಿ ವಿಡಿಯೊದಲ್ಲಿ ಹಂಚಿಕೊಂಡಿರುವ ಮನದಾಳದ ಮಾತು ಏನೆಂದರೆ “ಸ್ಪಂದನಾ.. ಹೆಸರಿಗೆ ತಕ್ಕ ಜೀವ, ಉಸಿರಿಗೆ ತಕ್ಕ ಭಾವ, ಅಳತೆಗೆ ತಕ್ಕ ನುಡಿ, ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದೆ ನಿನ್ನ ಹೃದಯವ, ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ, ಕೇವಲ ನಿನ್ನವ, ಚಿನ್ನ” ಎಂದು ಹೇಳಿಕೊಂಡಿದ್ದಾರೆ.
Saval TV on YouTube
Saval TV on YouTube