ಅಲ್ಲು ಅರ್ಜುನ್ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ಸಿನಿಮಾ ‘ಪುಷ್ಪ’ ಭರ್ಜರಿ ಪ್ರಚಾರದ ಮೂಲಕ ಥಿಯೇಟರ್‌ಗೆ ಎಂಟ್ರಿ ಕೊಟ್ಟಿತ್ತು. ಪ್ಯಾನ್ ಇಂಡಿಯಾ ಸಿನಿಮಾ ಆಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ‘ಪುಷ್ಪ’ ಮೊದಲ ದಿನ ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿಲ್ಲ. ಕರ್ನಾಟಕದಲ್ಲಿ ತೆಲುಗು ‘ಪುಷ್ಪ’ ಹಾಗೂ ಕೇರಳದಲ್ಲಿ ತಮಿಳು ‘ಪುಷ್ಪ’ ರಿಲೀಸ್ ಆಗಿತ್ತು. ಹೀಗಿದ್ದರೂ, ಬಾಕ್ಸಾಫೀಸ್‌ನಲ್ಲಿ ಅಲ್ಲು ಅರ್ಜುನ್ ಸಿನಿಮಾ ಧೂಳೆಬ್ಬಿಸಿದೆ.
ಪ್ರಾದೇಶಿಕ ಸಿನಿಮಾವೊಂದು ಪ್ಯಾನ್ ಇಂಡಿಯಾ ಅವತಾರವೆತ್ತಿ ಗ್ರ್ಯಾಂಡ್ ರಿಲೀಸ್ ಆಗುವುದು ದೊಡ್ಡ ವಿಷಯ. ‘ಪುಷ್ಪ’ ಪ್ಯಾನ್ ಇಂಡಿಯಾ ಸಿನಿಮಾವನ್ನಾಗಿ ರಿಲೀಸ್ ಮಾಡಲು ನಿರ್ದೇಶಕ ಸುಕುಮಾರ್ ಕೊನೆಯ ಕ್ಷಣದವರೆಗೂ ಪರದಾಡಿದ್ದರು. ಆದರೂ, ಎರಡು ಭಾಷೆಗಳಲ್ಲಿ ಬಿಡುಗಡೆ ಮಾಡದೆ ಕೇವಲ ಮೂರು ಭಾಷೆಗಳಲ್ಲಿ ಮಾತ್ರ ಚಿತ್ರ ತೆರೆಕಂಡಿತ್ತು. ಹೀಗಾಗಿ ‘ಪುಷ್ಪ’ ಲೆಕ್ಕಾಚಾರ ಕೊಂಚ ತಲೆಕೆಳಗಾಗಿದೆ. ಆದರೂ ಅಲ್ಲು ವೃತ್ತಿ ಬದುಕಿನಲ್ಲಿಯೇ ಮೊದಲ ದಿನ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನಲಾಗಿದೆ.