ಮನೆ ಮನರಂಜನೆ ರಾಮ್ ಚರಣ್, ಜೂನಿಯರ್ ಎನ್  ಟಿ ಆರ್   ಸೇರಿ ಹಲವು  ಭಾರತೀಯರಿಗೆ  ಆಸ್ಕರ್ ಸದಸ್ಯತ್ವ

ರಾಮ್ ಚರಣ್, ಜೂನಿಯರ್ ಎನ್  ಟಿ ಆರ್   ಸೇರಿ ಹಲವು  ಭಾರತೀಯರಿಗೆ  ಆಸ್ಕರ್ ಸದಸ್ಯತ್ವ

0

ವಿಶ್ವ ಶ್ರೇಷ್ಠ ಪ್ರಶಸ್ತಿ ಆಸ್ಕರ್  ಜೊತೆಗೆ ಹಲವು ಪ್ರತಿಷ್ಟೆಗಳನ್ನು ಮುಡಿಗೇರಿಸಿಕೊಂಡ RRR ತಂಡ  ಮತ್ತೊಂದು ಅಪರೂಪದ ಗೌರವಕ್ಕೆ ಪಾತ್ರವಾಗಿದೆ. ಈ ಬಾರಿ  ಆಸ್ಕರ್ ತೀರ್ಪುಗಾರರಲ್ಲಿ ಒಟ್ಟು 398 ಹೊಸ ಸದಸ್ಯರಿಗೆ  ಸ್ಥಾನ ನೀಡುವುದಾಗಿ  ಅಕಾಡೆಮಿ  ತಂಡ  ಪ್ರಕಟಿಸಿದೆ.

Join Our Whatsapp Group

ನಟನಾ ವಿಭಾಗದಲ್ಲಿ ಗ್ಲೋಬಲ್ ಸ್ಟಾರ್ ರಾಮ ಚರಣ್  ಮತ್ತು ಜೂನಿಯರ್ ಎನ್  ಟಿ ಆರ್  ಸದಸ್ಯರಾಗಿ ಸ್ಥಾನ ಪಡೆದಿದ್ದಾರೆ. ಸಂಗೀತ  ನಿರ್ದೇಶಕ  ಎಂ. ಎಂ ಕೀರಣ್   ವಾಣಿ ಸಂಗೀತ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.  ನಾಟು ನಾಟು ಬರಹಗಾರ ಚಂದ್ರ ಬೋಸ್,  ಚಿತ್ರ ನಿರ್ಮಾಪಕ ಕಿರಣ್ ಜೋಹರ್ ಕೂಡ ತಮ್ಮ ಪ್ರತಿಭೆಗಳಿಗೆ ಅನುಸಾರವಾಗಿ ಆಸ್ಕರ್ ಸದಸ್ಯರಾಗಿ  ಸೇರ್ಪಡೆಗೊಂಡಿದ್ದಾರೆ.

ಮೋಷನ್  ಪಿಚ್ಚರ್ಸ್ ಮತ್ತು ಹಾಟ್ಸ್  ಅಕಾಡೆಮಿಯು 2023 ರಲ್ಲಿ ತನ್ನ  ಶ್ರೇಣಿಗೆ ಸೇರುವ 398 ಸದಸ್ಯರನ್ನು ಆಹ್ವಾನಿಸಿದೆ. ಈ ಪಟ್ಟಿಯಲ್ಲಿ RRR ಜೋಡಿ  ರಾಮಚರಣ್ ಮತ್ತು ಜೂನಿಯರ್ ಎನ್  ಟಿ ಆರ್  ಸೇರಿದಂತೆ ಹಲವು ಭಾರತೀಯ ಕಲಾವಿದರಿದ್ದಾರೆ. ಭಾರತೀಯ ಆಹ್ವಾನಿತರ ಪೈಕಿ  ಕರಣ್ ಜೋಹರ, ಸಿದ್ದಾರ್ಥ್ ರಾಯ್ ಕಪೂರ್, ಮಣಿರತ್ನಂ, ಚೈತನ್ಯ  ತಮ್ಹಾನೆ, ಶೌಕನ್ ಸೇನ್, ಎಂ ಎಂ ಕಿರಣ ವಾಣಿ  ಮತ್ತು ಕೆ ಕೆ ಸೆಂಥಿಲ್ ಕುಮಾರ್ ಕೂಡ ಸೇರಿದ್ದಾರೆ. ಮನರಂಜನಾ  ಉಧ್ಯಮದಲ್ಲಿನ   ಪ್ರಮುಖ ಸದಸ್ಯರ ಪಟ್ಟಿಯಲ್ಲಿ  ಗುರುತಿಸಿಕೊಂಡಿದ್ದಾರೆ.