ಕಳೆದ ಒಂದೂವರೆ ತಿಂಗಳಲ್ಲಿ ಕೋಡಿಮಠದ ಶ್ರೀಗಳು ಮತ್ತೊಮ್ಮೆ ಭವಿಷ್ಯವನ್ನು ನುಡಿದಿದ್ದಾರೆ. ಸಾಮಾನ್ಯವಾಗಿ, ಹಿಂದೂಗಳ ಹಬ್ಬದ ಸಂದರ್ಭಗಳಲ್ಲಿ ಭವಿಷ್ಯ ನುಡಿಯುವ ಶ್ರೀಗಳು, ಈಗ ತಾವು ಭಾಗವಹಿಸುವ ಧಾರ್ಮಿಕ ಕಾರ್ಯಕ್ರಮದ ನಂತರ ಕೂಡಾ ಭವಿಷ್ಯವನ್ನು ನುಡಿಯಲಾರಂಭಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದ ಬಗ್ಗೆ ಭವಿಷ್ಯ ನುಡಿದಿರುವ ಕೋಡಿಶ್ರೀಗಳು, ‘ಸೂತ್ರಧಾರಿ ಪಟ್ಟ ಅಳಿಯುತ್ತದೆ’ ಎಂದು ಹೇಳಿದ್ದು, ಒಂದು ತಿಂಗಳ ಹಿಂದೆ ಅವರು ಹೇಳಿದ ಭವಿಷ್ಯಕ್ಕೂ ಈಗ ಹೇಳುತ್ತಿರುವ ಭವಿಷ್ಯಕ್ಕೂ ತಾಳೆಯಾಗುತ್ತಿಲ್ಲ ಎನ್ನುವುದು ಗಮನಿಸ ಬೇಕಾದವಿಚಾರ.
ಕೋಡಿ ಶ್ರೀಗಳು ಹೋದಲೆಲ್ಲಾ ಮಾಧ್ಯಮದವರು ಅವರನ್ನು ಭವಿಷ್ಯದ ಬಗ್ಗೆ ಕೇಳಲಾರಂಭಿಸಿದ ನಂತರ, ಕೋಡಿಶ್ರೀಗಳ ತಾಳೆಗರಿ ಆಧಾರಿತ ನುಡಿಗಟ್ಟು ಹೆಚ್ಚು ಹೆಚ್ಚು ಹೊರ ಬರಲಾರಂಭಿಸಿದೆ. ಶನಿವಾರದಂದು ಶ್ರೀಗಳು ಮಾಧ್ಯಮಗಳ ಪ್ರಶ್ನೆಗೆ ನಗುನಗುತ್ತಲೇ ಉತ್ತರಿಸಿದ್ದಾರೆ. ಅಫ್ಘಾನಿಸ್ತಾನ ತಾಲಿಬಾನ್ ವಶ, ಕೋಡಿ ಮಠ ಶ್ರೀಗಳ ಭವಿಷ್ಯ ನಿಜವಾಯ್ತು ಬಸವರಾಜ ಬೊಮ್ಮಾಯಿಯವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡುತ್ತಿದ್ದ ಕೋಡಿ ಶ್ರೀಗಳು, ಈಗತಾನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಹಾಗಾಗಿ, ಅಪಶಕುನವನ್ನು ನುಡಿಯಲಾರೆ ಎಂದು ಹೇಳಿದ್ದರು. ಆದರೆ, ಈಗ ಬೊಮ್ಮಾಯಿ ಸರಕಾರಕ್ಕೆ ತೊಂದರೆಯಿಲ್ಲ ಎಂದು ಹೇಳಿದ್ದಾರೆ.
ಒಂದು ವರ್ಷದಿಂದ ನಾನು ಹೇಳುತ್ತಾ ಬರುತ್ತಿದ್ದೇನೆ, ನಿಮಗೆ ಗೊತ್ತಿರಬಹುದು. ‘ಸೂತ್ರಧಾರಿ ಪಟ್ಟ ಅಳಿಯುತ್ತದೆ, ಸೂತ್ರಧಾರಿ ಸರಕಾರವನ್ನು ನಡೆಸುತ್ತಾನೆ’ ಎಂದು ಹೇಳಿದ್ದೆ. ಅದರಂತೇ, ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಪಟ್ಟ ಹೋಯಿತು. ಈಗ ಬೊಮ್ಮಾಯಿಯವರು ಅಧಿಕಾರದಲ್ಲಿದ್ದಾರೆ, ಅವರು ಜಾಣ ವ್ಯಕ್ತಿ, ವಿವೇಕವಿದೆ. ಆದರೆ, ಇಲ್ಲಿರುವ ಸೂತ್ರಧಾರಿ ಸರಕಾರವನ್ನು ನಡೆಸುತ್ತಾರೆ”ಎಂದು ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.