ಮನೆ ರಾಜ್ಯ ಬೆಳಗಾವಿಗೆ ಸಾಗಣೆ ಮಾಡುತ್ತಿದ್ದ ದಾಖಲೆ ಇಲ್ಲದ 1.54 ಕೋಟಿ ನಗದು ವಶ

ಬೆಳಗಾವಿಗೆ ಸಾಗಣೆ ಮಾಡುತ್ತಿದ್ದ ದಾಖಲೆ ಇಲ್ಲದ 1.54 ಕೋಟಿ ನಗದು ವಶ

0

ರಾಮದುರ್ಗ (ಬೆಳಗಾವಿ ಜಿಲ್ಲೆ): ಪಟ್ಟಣದ ಮೂಲಕ ಬೆಳಗಾವಿಗೆ ಸಾಗಣೆ ಮಾಡುತ್ತಿದ್ದ  ದಾಖಲೆ ಇಲ್ಲದ 1.54 ಕೋಟಿ ನಗದನ್ನು ಪೊಲೀಸರು ಗುರುವಾರ ನಸುಕಿನಲ್ಲಿ ವಶಕ್ಕೆ ಪಡೆದಿದ್ದಾರೆ.

Join Our Whatsapp Group

ಕಾರಿನಲ್ಲಿ ವ್ಯಕ್ತಿಯೊಬ್ಬರು ಈ ಹಣ ಸಾಗಣೆ ಮಾಡುತ್ತಿದ್ದರು. ಬೀಟ್ ನಲ್ಲಿದ್ದ ಪೊಲೀಸರು ತಪಾಸಣೆ ಮಾಡಿದಾಗ 500 ಮುಖಬೆಲೆಯ ನೋಟುಗಳು ಪತ್ತೆಯಾದವು.

ಸೂಕ್ತ ದಾಖಲೆಗಳು ಇಲ್ಲದ ಕಾರಣ ಹಣ ಹಾಗೂ ಕಾರನ್ನು ವಶಕ್ಕೆ ಪಡೆದ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.

ಆದಾಯ ತೆರಿಗೆ ಇಲಾಖೆಗೆ ಪ್ರಕರಣ ಒಪ್ಪಿಸಲಾಗಿದೆ ಎಂದು ಎಸ್ಪಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.