ಮನೆ ರಾಷ್ಟ್ರೀಯ ನೀಟ್‌ ಪರೀಕ್ಷೆಗೆ 18.72 ಲಕ್ಷ ಅಭ್ಯರ್ಥಿಗಳಿಂದ ನೋಂದಣಿ

ನೀಟ್‌ ಪರೀಕ್ಷೆಗೆ 18.72 ಲಕ್ಷ ಅಭ್ಯರ್ಥಿಗಳಿಂದ ನೋಂದಣಿ

0

ನವದೆಹಲಿ (New Delhi)- ಜುಲೈ 17 ರಂದು ನಡೆಯಲಿರುವ 2022ನೇ ಸಾಲಿನ ನೀಟ್‌ ಪರೀಕ್ಷೆಗೆ 18.72 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

ಸ್ನಾತಕೋತ್ತರ ವೈದ್ಯಕೀಯ/ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗೆ (ನೀಟ್‌) 18.72 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚುವರಿ 2.5 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ.

ನೋಂದಾಯಿತ ಅಭ್ಯರ್ಥಿಗಳ ಪೈಕಿ ಸುಮಾರು 10.64 ಲಕ್ಷ ಮಹಿಳೆಯರು ಮತ್ತು 8.07 ಲಕ್ಷ ಮಂದಿ ಪುರುಷರು, 771 ವಿದೇಶಿಯರು ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.

ಪರೀಕ್ಷೆಯು ದೇಶದಾದ್ಯಂತ 13 ಭಾಷೆಗಳಲ್ಲಿ ನಡೆಯಲಿದೆ. ಕಳೆದ ವರ್ಷ ನೋಂದಾಯಿತರಾಗಿದ್ದ ಶೇ. 95ರಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಹಿಂದಿನ ಲೇಖನದಲಿತ ಯುವಕನ ಹತ್ಯೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ; ಸಚಿವ ಮುರುಗೇಶ್‌ ನಿರಾಣಿ
ಮುಂದಿನ ಲೇಖನಆರ್‌ಎಸ್‌ ಎಸ್‌ ಅನ್ನು ಟೀಕಿಸಿದ ಸಿದ್ದರಾಮಯ್ಯ ಜನರ ಕ್ಷಮೆಯಾಚಿಸಬೇಕು: ಕೆ.ಎಸ್.ಈಶ್ವರಪ್ಪ