ಮನೆ ರಾಜ್ಯ 1.87 ಲಕ್ಷ ಕೋಟಿ ರೂ. ಜಿಎಸ್’​ಟಿ ಸಂಗ್ರಹ: ದೇಶದ ಆರ್ಥಿಕತೆಯಲ್ಲಿ ಕರ್ನಾಟಕದ ಪಾಲೇನು?

1.87 ಲಕ್ಷ ಕೋಟಿ ರೂ. ಜಿಎಸ್’​ಟಿ ಸಂಗ್ರಹ: ದೇಶದ ಆರ್ಥಿಕತೆಯಲ್ಲಿ ಕರ್ನಾಟಕದ ಪಾಲೇನು?

0

ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್’​ಟಿ) ಜಾರಿಯಾದ ಬಳಿಕ ದಾಖಲೆ ಪ್ರಮಾಣದಲ್ಲಿ ಜಿಎಸ್’​ಟಿ ಸಂಗ್ರಹವಾಗಿದೆ.

Join Our Whatsapp Group

ಕಳೆದ ತಿಂಗಳಲ್ಲೇ 1.87 ಲಕ್ಷ ಕೋಟಿ ರೂ. ಮೊತ್ತದ ತೆರಿಗೆ ಜಮೆಯಾಗಿದೆ. ವಾರ್ಷಿಕವಾಗಿ ಹೇಳುವುದಿದ್ದರೆ ಶೇ.12 ಏರಿಕೆಯಾಗಿದೆ ಎಂದು ಸೋಮವಾರ ಹೊಸದಿಲ್ಲಿಯಲ್ಲಿ ಕೇಂದ್ರ ವಿತ್ತ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

2022ರ ಎಪ್ರಿಲ್ ನಲ್ಲಿ 1.68 ಲಕ್ಷ ಕೋಟಿ ರೂ. ಸಂಗ್ರಹವಾದದ್ದು ಇದುವರೆಗಿನ ದಾಖಲೆಯಾಗಿದೆ.

2022ರ ಮಾರ್ಚ್ ನಲ್ಲಿ 1,42,095 ಲಕ್ಷ ಕೋಟಿ ರೂ., ಪ್ರಸಕ್ತ ವರ್ಷದ ಮಾರ್ಚ್ ನಲ್ಲಿ 1,60, 122 ಲಕ್ಷ ಕೋಟಿ ರೂ., 2022ರ ಫೆಬ್ರವರಿಯಲ್ಲಿ 1,33, 025 ಲಕ್ಷ ಕೋಟಿ ರೂ., ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ 1,49, 577 ಲಕ್ಷ ಕೋಟಿ ರೂ., 2022ರ ಜನವರಿಯಲ್ಲಿ 1,40, 986 ಲಕ್ಷ ಕೋಟಿ ರೂ., ಪ್ರಸಕ್ತ ವರ್ಷದ ಜನವರಿಯಲ್ಲಿ 1,57, 554 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು.

ದೇಶದ ಜಿಎಸ್’​ಟಿ ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕ ಮುಂದಿದೆ.

ತಲಾದಾಯದಲ್ಲಿ ಕರ್ನಾಟಕದ ಟಾಪ್-10 ಜಿಲ್ಲೆಗಳಿವು:

ಬೆಂಗಳೂರು ನಗರ: 6.21 ಲಕ್ಷ ರೂ

ದಕ್ಷಿಣಕನ್ನಡ: 4.43 ಲಕ್ಷ ರೂ

ಉಡುಪಿ: 3.71 ಲಕ್ಷ ರೂ

ಚಿಕ್ಕಮಗಳೂರು: 3.39 ಲಕ್ಷ ರೂ

ಬೆಂಗಳೂರು ಗ್ರಾಮೀಣ: 3.19 ಲಕ್ಷ ರೂ

ಶಿವಮೊಗ್ಗ: 2.71 ಲಕ್ಷ ರೂ

ಕೊಡಗು: 2.48 ಲಕ್ಷ ರೂ

ತುಮಕೂರು: 2.27 ಲಕ್ಷ ರೂ

ರಾಮನಗರ: 2.25 ಲಕ್ಷ ರೂ

ಮಂಡ್ಯ: 2.17 ಲಕ್ಷ ರೂ

ರಾಜ್ಯ ಡಿಡಿಪಿಯಲ್ಲಿ ಅತಿಹೆಚ್ಚು ಕೊಡುಗೆ ನೀಡುವ ಜಿಲ್ಲೆಗಳು

ಬೆಂಗಳೂರು ನಗರ

ದಕ್ಷಿಣ ಕನ್ನಡ

ಬೆಳಗಾವಿ

ತುಮಕೂರು

ಮೈಸೂರು

ಡಿಡಿಪಿಗೆ ಅತಿಕಡಿಮೆ ಕೊಡುಗೆ ನೀಡುವ ಜಿಲ್ಲೆಗಳು

ಕೊಪ್ಪಳ

ಚಾಮರಾಜನಗರ

ಗದಗ

ಯಾದಗಿರಿ

ಕೊಡಗು