ಬಾಗಲಕೋಟೆ: ರಾಜ್ಯದ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಕೇವಲ ಒಂದು ದಿನದ ಹೆಣ್ಣು ಮಗುವನ್ನು ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ.
ಮಗು ಕಳಕೊಂಡಿರುವ ಮಹಿಳೆ ಮಾಬೂಬಿ (30) ಎಂಬುವರು ಎಂದು ತಿಳಿದುಬಂದಿದೆ. ನರ್ಸ್ ಎಂದು ತಮ್ಮನ್ನು ಪರಿಚಯಿಸಿಕೊಂಡ ಮಹಿಳೆ, “ಮಗುವಿಗೆ ಕಫಾ ತೆಗೆಸಬೇಕಿದೆ” ಎಂದು ಹೇಳಿ ಮಗುವನ್ನು ತೆಗೆದುಕೊಂಡು ಹೋಗಿದ್ದಾಳೆ.
ಕೆಲ ಸಮಯ ಕಳೆದರೂ ಮಗು ಮರಳಿ ಬಂದಿಲ್ಲವೆಂಬ ಅನುಮಾನ ಕುಟುಂಬಸ್ಥರಲ್ಲಿ ಹುಟ್ಟಿದ ಕೂಡಲೆ, ಅವರು ಆಸ್ಪತ್ರೆಯಲ್ಲಿ ಹುಡುಕಾಟ ಆರಂಭಿಸಿದರು. ಆದರೆ ಮಗು ಎಲ್ಲಿಯೂ ಪತ್ತೆಯಾಗದ ಕಾರಣ ಕುಟುಂಬಸ್ಥರು ತಕ್ಷಣ ನವನಗರ ಠಾಣೆಗೆ ದೂರು ನೀಡಿದರು.
ತಕ್ಷಣವೇ ನವನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಯ ಸಿಸಿಟಿವಿ ಫೂಟೇಜ್ ಪರಿಶೀಲನೆ, ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹ ಹಾಗೂ ಶಂಕಾಸ್ಪದ ವ್ಯಕ್ತಿಗಳ ಮಾಹಿತಿ ಪಡೆದು ತನಿಖೆ ಮುಂದುವರಿಸಿದ್ದಾರೆ.














