ಬೆಂಗಳೂರು: ಗರ್ಭಿಣಿಯ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸಿ, ತೀವ್ರ ತರಹದ ಅನಾರೋಗ್ಯಕ್ಕೆ ಕಾರಣವಾದ ನಗರದ ಪ್ರತಿಷ್ಠಿತ ಖಾಸಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ 3ನೇ ಹೆಚ್ಚುವರಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಆಯೋಗವು 10.20 ಲಕ್ಷ ರೂ. ದಂಡ ವಿಧಿಸಿದೆ.
ಬೆಂಗಳೂರು ನಿವಾಸಿ ಆರ್.ಎಸ್. ಸಂಜನಾ ಅವರು ಗರ್ಭಿಣಿಯಾದ ಬಳಿಕ ಪ್ರಗ್ನೆನ್ಸಿ ಕೇರ್‌ಗೆ ಸಂಬಂಧಿಸಿದಂತೆ ಮಲ್ಲೇಶ್ವರದ ಕಿಡ್ಸ್ ಕ್ಲಿನಿಕ್ ಇಂಡಿಯಾ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದಾರೆ. ಸುಮಾರು 7 ತಿಂಗಳ ಸಂದರ್ಭದಲ್ಲಿ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದು, ಈ ಕುರಿತು ವೈದ್ಯರಿಗೆ ಮಾಹಿತಿ ನೀಡಿದ್ದರೂ ಯಾವುದೇ ಚಿಕಿತ್ಸೆಯನ್ನು ನೀಡಿರಲಿಲ್ಲ. ಹೊಟ್ಟೆ ನೋವು ಹೆಚ್ಚಾಗುತ್ತಿದ್ದಂತೆ ಮತ್ತೂಮ್ಮೆ ವೈದ್ಯರನ್ನು ಸಂಪರ್ಕಿಸಿದ್ದರೂ ಹೆರಿಗೆ ಬಳಿಕ ತಪಾಸಣೆ ಮಾಡೋಣ ಎಂದು ಹೇಳಿ ನಿರ್ಲಕ್ಷಿಸಿದ್ದರು.
ಈ ನಡುವೆ, 2017ರ ಆ.10ರಂದು ದೂರುದಾರರು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕವೂ ಕಿಬ್ಬೊಟ್ಟೆಯಲ್ಲಿ ನೋವು ಕಡಿಮೆಯಾಗಿರಲಿಲ್ಲ. ಈ ವೇಳೆ ಬಾಣಂತಿ ತೀವ್ರ ತರಹದ ಉಸಿರಾಟ ಸಮಸ್ಯೆ, ಕಿಬ್ಬೊಟ್ಟೆಯಲ್ಲಿ ನೋವು ಕಾಣಿ ಸಿ ಕೊಂಡಿದೆ. ಆಸ್ಪತ್ರೆಯಲ್ಲಿ ಐಸಿಯು ವ್ಯವಸ್ಥೆ ಇರದ ಕಾರಣ ಸಂಜನಾ ಅವರಿಗೆ ಆಕ್ಸಿಜನ್‌ನಲ್ಲಿಟ್ಟು ಮೇಲ್ವಿಚಾರಣೆ ನಡೆಸಿದ್ದಾರೆ. 3 ದಿನಗಳ ಬಳಿಕ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದ್ಯೊ ಯುವಂತೆ ಸೂಚನೆ ನೀಡಿದ್ದಾರೆ.
ಆ.12ರಂದು ನಗರದ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆ ರೋಗಿಯು ಆರೋಗ್ಯ ಸ್ಥಿರವಾಗಿರಲಿಲ್ಲ. ರಕ್ತ, ಇತರೆ ತಪಾಸ ಣೆಯ ಬಳಿಕ ಸಂಜನಾಗೆ ಪ್ಯಾಂಕ್ರಿಯಾ ಟೈಟಿಸ್ ಸಮಸ್ಯೆ ಇರುವುದು ದೃಢವಾಗಿದೆ. ಬಳಿಕ ಐಸಿಯುನಲ್ಲಿ 10 ದಿನ ಚಿಕಿತ್ಸೆ ನೀಡಿದ ಬಳಿಕ ಗುಣಮುಖವಾಗಿದ್ದಾರೆ.