ಭೂ ವಿವಾದಕ್ಕೆ ಸಂಬಂಧಿಸಿದ ಕೋರ್ಟ್ ಕೇಸ್ ನಡಿತಿರ್ಬೇಕಾದ್ರೆ ವ್ಯಕ್ತಿಯೊಬ್ಬ ಕೋರ್ಟ್ ಅನುಮತಿಯಿಲ್ಲದೆಯೇ ಅಕ್ರಮವಾಗಿ ಮರ ಕಡಿದಿದ್ದು, ಈ ವಿಚಾರ ತಿಳಿದು ಒಂದಾ 10 ಲಕ್ಷ ಡೆಪಾಸಿಟ್ ಮಾಡಿ ಇಲ್ಲಾಂದ್ರೆ ಜೈಲಿಗೆ ಹೋಗಿ ಎಂದು ಆ ವ್ಯಕ್ತಿಯನ್ನು ಕರ್ನಾಟಕ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಕರ್ನಾಟಕ ಹೈಕೋರ್ಟ್‌ನಲ್ಲಿ ಭೂ ವಿವಾದ ತಕರಾರು ಅರ್ಜಿ ವಿಚಾರಣೆ ನಡಿತಿರ್ಬೇಕಾದ್ರೆ ವಿರಾಜಪೇಟೆಯ ಥೋಮಸ್ ಲೋಬೋ ಎಂಬ ವ್ಯಕ್ತಿ ಕಾಫಿ ತೋಟದ ಸಿಲ್ವರ್ ಮರಗಳನ್ನು ಕಡಿದ್ದು ಹಾಕಿದ್ದು, ಕೋರ್ಟ್ ಕೇಸ್ ನಡಿತಿರ್ಬೇಕಾದ್ರೆ ಅದು ಹೇಗೆ ಯಾರ ಅನುಮತಿಯೂ ಇಲ್ಲದೆ ಮರ ಕಡಿದ್ರಿ ನೀವು ? ಇದಕ್ಕಾಗಿ ಒಂದಾ 10 ಲಕ್ಷ ಡೆಪಾಸಿಟ್ ಮಾಡಿ ಇಲ್ಲಾಂದ್ರೆ ಜೈಲಿಗೆ ಹೋಗಿ ಎಂದು ಆ ವ್ಯಕ್ತಿಯನ್ನು ನ್ಯಾಯಾಧೀಶರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತ ಪೋಸ್ಟ್ ಒಂದನ್ನು KomuvadiVirudda ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಅಕ್ರಮವಾಗಿ ಮರ ಕಡಿದ ವ್ಯಕ್ತಿಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ತರಾಟೆಗೆ ತೆಗೆದುಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು. ನೀವು ಕೋರ್ಟ್ ಕೇಸ್ ನಡಿತಿರುವ ಮಧ್ಯೆ ಮರ ಕಡಿದಿದ್ದೀರಿ, ಇವಾಗ ಮರ ಕಡಿದಿಲ್ಲ ಅಂತಾ ವಾದ ಬೇರೇ ಮಾಡ್ತೀರಾ, ಕೇಸ್ ನಡಿತಿರುವಾಗ ಮರ ಕಡಿದಿದ್ದೀರಿ, ಇವಾಗ ಕಥೆ ಹೇಳ್ಬೇಡಿ ಒಂದಾ 10 ಲಕ್ಷ ಡೆಪಾಸಿಟ್ ಮಾಡಿ ಇಲ್ಲಾಂದ್ರೆ ಜೈಲಿಗೆ ಹೋಗಿ ಎಂದು ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಇವಾಗ ಜೈಲಿಗೆ ಹೋಗಿ ನಿಮ್ಮ ಲಾಯರ್ ಬಂದು ಬಿಡಿಸ್ತಾರೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಸೆಪ್ಟೆಂಬರ್ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 46 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದ್ದು, ಹಲವರು ʼತಪ್ಪು ಮಾಡೋ ರಾಜಕಾರಣಿಗಳು ಮತ್ತು ಉನ್ನತ ಅಧಿಕಾರಿಗಳಿಗೂ ಇದೇ ತರಹ ಖಡಕ್ ಶಿಕ್ಷೆ ಕೊಡ್ಬೇಕುʼ ಎಂದು ಹೇಳಿದ್ದಾರೆ.