ಮನೆ ತಂತ್ರಜ್ಞಾನ ಕೇವಲ 10,000 ರೂ. ಒಳಗೆ ಸಿಗುತ್ತಿರುವ ಅದ್ಭುತ ಕ್ಯಾಮೆರಾದ ಸ್ಮಾರ್ಟ್ ​ಫೋನ್’ಗಳ ಮಾಹಿತಿ ಇಲ್ಲಿದೆ

ಕೇವಲ 10,000 ರೂ. ಒಳಗೆ ಸಿಗುತ್ತಿರುವ ಅದ್ಭುತ ಕ್ಯಾಮೆರಾದ ಸ್ಮಾರ್ಟ್ ​ಫೋನ್’ಗಳ ಮಾಹಿತಿ ಇಲ್ಲಿದೆ

0

ಸ್ಮಾರ್ಟ್ ​ಫೋನ್ ಮಾರುಕಟ್ಟೆಯಲ್ಲಿ ಇಂದು ಕ್ಯಾಮೆರಾ ಫೋನ್ ​ಗಳಿಗೆ ಭರ್ಜರಿ ಬೇಡಿಕೆ ಇದೆ. 108 ಮೆಗಾ ಪಿಕ್ಸೆಲ್ ಕ್ಯಾಮೆರಾದ ಮೊಬೈಲ್​ಗಳ ಹಾವಳಿ ನಡುವೆ ಈಗ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ಸ್ಮಾರ್ಟ್ ​ಫೋನ್ ಕೂಡ ಬಿಡುಗಡೆ ಆಗುತ್ತಿದೆ. ಆದರೆ, ಇವುಗಳ ಬೆಲೆ ಕೊಂಚ ದುಬಾರಿ. ಬಜೆಟ್ ಬೆಲೆಗೆ ಮೊಬೈಲ್ ಪಡೆದುಕೊಳ್ಳುವವರಿಗೆ ಇಷ್ಟು ಮೆಗಾ ಪಿಕ್ಸೆಲ್ ಕ್ಯಾಮೆರಾದ ಫೋನನ್ನು ಖರೀದಿಸಲು ಸಾಧ್ಯ ಆಗುವುದಿಲ್ಲ. ಹಾಗಂತ ಇದಕ್ಕೆ ಬೇಸರ ಪಡುವ ಅಗತ್ಯವಿಲ್ಲ. ಯಾಕೆಂದರೆ ಕಡಿಮೆ ಬೆಲೆಗೆ ಕೂಡ ಆಕರ್ಷಕ ಕ್ಯಾಮೆರಾದ ಫೋನ್​ ಗಳು ಮಾರುಕಟ್ಟೆಯಲ್ಲಿದೆ. ಹಾಗಾದರೆ, 10,000 ರೂ. ಒಳಗೆ ಖರೀದಿಸಬಹುದಾದ ಬೆಸ್ಟ್ ಕ್ಯಾಮೆರಾ ಸ್ಮಾರ್ಟ್​ ಫೋನ್ ​ಗಳು ಯಾವುವು ಎಂಬುದನ್ನು ನೋಡೋಣ.

Join Our Whatsapp Group

ಸ್ಯಾಮ್‌ ಸಂಗ್‌ ಗ್ಯಾಲಕ್ಸಿ F13: ಈ ಸ್ಮಾರ್ಟ್‌ ಫೋನ್‌ ಫ್ಲಿಪ್ ​ಕಾರ್ಟ್ ​ನಲ್ಲಿ ಕೇವಲ 9,699 ರೂ. ಗೆ ಮಾರಾಟ ಆಗುತ್ತಿದೆ. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಇದರ ಜೊತೆಗೆ 6000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. 6.6 ಫುಲ್‌ ಹೆಚ್‌ಡಿ + LCD ಡಿಸ್‌ ಪ್ಲೇ ಹಾಗೂ ಎಕ್ಸಿನೋಸ್‌ 850 ಪ್ರೊಸೆಸರ್‌ ಬಲವನ್ನು ಹೊಂದಿದೆ.

ರಿಯಲ್‌ ಮಿ ನಾರ್ಜೋ N53: ರಿಯಲ್‌ ಮಿ ನಾರ್ಜೋ N53 ಸ್ಮಾರ್ಟ್‌ ಫೋನ್ ​ನ 4GB RAM + 64GB ಸ್ಟೋರೇಜ್‌ ಮಾದರಿಯ ಆಯ್ಕೆಗೆ ಕೇವಲ 8,999 ರೂ. ಇದೆ. ಇದು 6.74 ಇಂಚಿನ ಡಿಸ್‌ ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಯುನಿಸೊಕ್ T612 SoC ಪ್ರೊಸೆಸರ್ ವೇಗವನ್ನು ನೀಡಲಾಗಿದೆ. ಇದರಲ್ಲಿ ಕೂಡ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ AI ಸೆನ್ಸಾರ್‌ ಅನ್ನು ಹೊಂದಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W ವೈರ್ಡ್ ಸೂಪರ್‌ ವೂಕ್‌ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ರೆಡ್ಮಿ 10: ಈ ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಜೊತೆಗೆ 8 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸರ್‌, ಮುಂಭಾಗದಲ್ಲಿ ಸೆಲ್ಫಿಗಳಿಗಾಗಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಿದೆ. 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ, 6.5 ಇಂಚಿನ ಎಲ್​ ಸಿಡಿ ಡಿಸ್​ ಪ್ಲೇ, ಮೀಡಿಯಾ ಟೆಕ್ ಹೆಲಿಯೊ ಜಿ88 ಎಸ್ ಒಸಿ ಪ್ರೊಸೆಸರ್ ನೀಡಲಾಗಿದೆ. ಇದರ ಬೆಲೆ 9,499 ರೂ.

ನೋಕಿಯಾ C32: ಕಳೆದ ತಿಂಗಳು ಬಿಡುಗಡೆ ಆದ ಈ ಸ್ಮಾರ್ಟ್​ಫೋನ್​ನ 4 GB RAM + 64 GB ಆಯ್ಕೆಗೆ 8,999 ರೂ. ಇದೆ. ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಹಿಂಬದಿಯಲ್ಲಿ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ಅಳವಡಿಸಲಾಗಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಟೆಕ್ನಾಲಜಿಯನ್ನು ಹೊಂದಿದೆ. ಜೊತೆಗೆ 2 ಮೆಗಾಪಿಕ್ಸೆಲ್​ ನ ಸೆಕೆಂಡರಿ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ. ಮುಂಭಾಗ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಕ್ಯಾಮೆರಾ ಫೀಚರ್ಸ್‌ ಗಳಲ್ಲಿ ಪೋರ್ಟ್ರೇಟ್ ಮೋಡ್, ಟೈಮ್ ಲ್ಯಾಪ್ಸ್, ಬ್ಯೂಟಿಫಿಕೇಶನ್ ಸಪೋರ್ಟ್ ಮತ್ತು ಎಲ್‌ಇಡಿ ಫ್ಲ್ಯಾಷ್ ಸೇರಿದಂತೆ ಕೆಲ ವಿಶೇಷ ಫೀಚರ್​ಗಳಿವೆ.

ಟೆಕ್ನೋ ಪೊವಾ 3: ಬರೋಬ್ಬರಿ 7,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿರುವ ಈ ಫೋನಿನ ಬೆಲೆ 9,999ರೂ. ಇದು 6.9 ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G88 ಪ್ರೊಸೆಸರ್ ನೀಡಲಾಗಿದೆ. ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. 33W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ.