ಮೈಸೂರು: ಜಿಲ್ಲಾ ಹಾಗೂ ನಗರ ಸವಿತಾ ಸಮಾಜದ ವತಿಯಿಂದ ಬಿಹಾರದ ಮಾಜಿ ಮುಖ್ಯಮಂತ್ರಿಗಳು ಭಾರತ ರತ್ನ ಪುರಸ್ಕೃತರಾದ ಕರ್ಪೂರಿ ಟಾಕೂರ್ ರವರ 100ನೇ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಸಿಹಿ ಹಂಚುವ ಮೂಲಕ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಕರ್ಪೂರಿ ಠಾಕೂರ್ ರವರಿಗೆ ಭಾರತ ರತ್ನ ಪುರಸ್ಕಾರ ಘೋಷಣೆ ಮಾಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಎನ್ ಆರ್ ನಾಗೇಶ್. ನಗರ ಅಧ್ಯಕ್ಷ ಹರೀಶ್ ರೆಡ್ಡಿ. ಪ್ರಧಾನ ಕಾರ್ಯದರ್ಶಿ ಲೇಖಕರೂ ಆದ ಲೋಕೇಶ್ ನಾಗಪ್ಪ, ಸವಿತಾ ನಾದಬ್ರಹ್ಮ ಸಂಘದ ಅಧ್ಯಕ್ಷರಾದ ವಿದ್ವಾನ್ ಪುಟ್ಟರಾಜು, ಮುಖಂಡರಾದ ಮುರಳಿಧರ, ರಾಜು ರೆಡ್ಡಿ, ಶ್ರೀಧರ, ಕೃಷ್ಣಪ್ಪ, ಮಹೇಶ್, ಸೂರಿ, ಕಿಶೋರ್, ರವಿ, ಮಡಿವಾಳ ಸಮಾಜದ ಜಿಲ್ಲಾ ಅಧ್ಯಕ್ಷ ರವೀ ನಂದನ, ಮುಖಂಡರಾದ ವೆಂಕಟೇಶ್ ಗುಡ್ಡ, ಮಹೇಶ್, ರಘು, ರಾಮು ಉಪಸ್ಥಿತರಿದ್ದರು.














