ಮನೆ ರಾಜಕೀಯ ನೆಲಮಂಗಲ ನಗರಸಭೆಯ ಅಧ್ಯಕ್ಷೆ ಸೇರಿದಂತೆ ಜೆಡಿಎಸ್’ನ 11 ಸದಸ್ಯರು ಕಾಂಗ್ರೆಸ್ ಸೇರ್ಪಡೆ

ನೆಲಮಂಗಲ ನಗರಸಭೆಯ ಅಧ್ಯಕ್ಷೆ ಸೇರಿದಂತೆ ಜೆಡಿಎಸ್’ನ 11 ಸದಸ್ಯರು ಕಾಂಗ್ರೆಸ್ ಸೇರ್ಪಡೆ

0

ಬೆಂಗಳೂರು(Bengaluru): ನೆಲಮಂಗಲ ನಗರಸಭೆಯ ಅಧ್ಯಕ್ಷೆ ಲತಾ ಹೇಮಂತ್ ಕುಮಾರ್ ಸೇರಿದಂತೆ ಜೆಡಿಎಸ್ ನ 11 ಸದಸ್ಯರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಗೃಹ ಕಚೇರಿಯಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ವಿಧಾನ ಪರಿಷತ್ ನ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಮತ್ತು ಕೆಪಿಸಿಸಿ ಸದಸ್ಯ ‌ಎನ್. ಶ್ರೀನಿವಾಸ್ ಉಪಸ್ಥಿತರಿದ್ದರು.

ನೆಲಮಂಗಲ ನಗರಸಭೆಯಲ್ಲಿ ಜೆಡಿಎಸ್ 14 ಸದಸ್ಯರನ್ನು ಹೊಂದಿತ್ತು. 11 ಸದಸ್ಯರ ಪಕ್ಷಾಂತರದೊಂದಿಗೆ ಈಗ ಮೂವರಷ್ಟೇ ಜೆಡಿಎಸ್’ನಲ್ಲಿ ಉಳಿದುಕೊಂಡಿದ್ದಾರೆ. ಇದರೊಂದಿಗೆ ನೆಲಮಂಗಲ ನಗರಸಭೆಯಲ್ಲಿ ಜೆಡಿಎಸ್ ಅಧಿಕಾರ ಕಳೆದುಕೊಂಡಿದೆ.

ಕಾಂಗ್ರೆಸ್ ಸೇರಿದವರ ಮಾಹಿತಿ: ಲತಾ ಹೇಮಂತ್ ಕುಮಾರ್, .ರಾಜಮ್ಮ ಪಿಳ್ಳಪ್ಪ, ಆನಂದ್, ಆಂಜಿನಪ್ಪ, ಅಂಜನಮೂರ್ತಿ( ಪಾಪಣಿ), ದಾಕ್ಷಾಯಿಣಿ ರವಿ ಕುಮಾರ್, ಪ್ರಸಾದ್, ಚೇತನ್, ಪುಷ್ಪಲತಾ ಮಾರೇಗೌಡ, ಭಾರತಿ ಬಾಯಿ ನಾರಾಯಣ್ ರಾವ್.