ಮನೆ ರಾಜ್ಯ ಮಂಡ್ಯದಲ್ಲಿ 11 ತಿಂಗಳ‌ ಬಂಡೂರು ಕುರಿ 1.35 ಲಕ್ಷಕ್ಕೆ ಮಾರಾಟ

ಮಂಡ್ಯದಲ್ಲಿ 11 ತಿಂಗಳ‌ ಬಂಡೂರು ಕುರಿ 1.35 ಲಕ್ಷಕ್ಕೆ ಮಾರಾಟ

0

ಮಂಡ್ಯ : 11 ತಿಂಗಳ ಬಂಡೂರು ಕುರಿಯನ್ನು 1 ಲಕ್ಷದ 35 ಸಾವಿರ ರೂಪಾಯಿ ದಾಖಲೆ ಮೊತ್ತಕ್ಕೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಮಾರಾಟ ಮಾಡಲಾಗಿದೆ.

ಕಿರುಗಾವಲು ಗ್ರಾಮದ ಯುವ ರೈತ ಉಲ್ಲಾಸ್‌ಗೌಡಗೆ ಸೇರಿದ ಬಂಡೂರು ಟಗರನ್ನು ಬೆಂಗಳೂರು ಮೂಲದ ಇಂಜಿನಿಯರ್ ಹರೀಶ್ ಎಂಬವರು ದಾಖಲೆ ಮೊತ್ತಕ್ಕೆ ಖರೀದಿ ಮಾಡಿದ್ದಾರೆ.

ಕುರಿ ಸಾಕಾಣಿಕೆ ಮಾಡುತ್ತಿರುವ ಹರೀಶ್ ಬಂಡೂರು ತಳಿಯನ್ನು ಅಭಿವೃದ್ಧಿಪಡಿಸಲು ಉಲ್ಲಾಸ್ ಬಳಿ ಬಂಡೂರು ಟಗರನ್ನು ಖರೀದಿ ಮಾಡಿದ್ದು, ಬಳಿಕ ಉಲ್ಲಾಸ್‌ಗೆ ಹಣ ನೀಡಿ ಸನ್ಮಾನ ಮಾಡಿದ್ದಾರೆ. ನಂತರ ಬಂಡೂರು ಟಗರನ್ನು ಹರೀಶ್ ಅವರಿಗೆ ಹಸ್ತಾಂತರ ಮಾಡಲಾಗಿದೆ.