ಶ್ರೀರಂಗಪಟ್ಟಣ:ರೈತರ ಜೀವನಾಡಿ ಕೆಆರ್‌ಎಸ್ ಜಲಾಶಯಕ್ಕೆ ಒಳ ಹರಿವು ಪ್ರಮಾಣ ಅಧಿಕವಾಗಿ ಬರುತ್ತಿದ್ದು,ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 115 ಅಡಿಗೆ ಏರಿಕೆ ಕಂಡು ಬಂದಿದೆ. ಇನ್ನು ಜಲಾಶಯ ಭರ್ತಿಗೆ ಕೇವಲ 9 ಅಡಿಗಳು ಬಾಕಿ ಇದೆ.ನಿರಂತವಾಗಿ ಮಳೆ ಹಾಗೂ ಜಲಾಶಯದ ಒಳಹರಿವು ಬರುತ್ತಿದ್ದರೆ ಮೂರು ನಾಲ್ಕು ದಿನದಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗುತ್ತದೆ ಎನ್ನಲಾಗಿದೆ.
ಕಾವೇರಿಯ ಉಗಮ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ದಾರಾಕಾರ ಸುರಿಯುತ್ತಿರುವ ಮಳೆಯಿಂದ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗು ತ್ತಿದ್ದು,ಗುರುವಾರ ಸಂಜೆಗೆ 38,130 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿತು. ಇನ್ನು ಕೇವಲ ಜಲಾಶಯಕ್ಕೆ 9 ಅಡಿ ಬಾಕಿ ಉಳಿದಿದೆ.
ಗುರುವಾರ ಬೆಳಿಗ್ಗೆ ಒಳ ಹರಿವು ಕೂಡ 36,772ಕ್ಯೂಸೆಕ್ ಇದ್ದರೆ 113.40 ಅಡಿ ನೀರು ಜಲಾಶಯದ ಮಟ್ಟದಲ್ಲಿ ಸಂಗ್ರವಾಗಿತ್ತು. ಜಲಾಶಯದಿಂದ 2448 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿತ್ತು. ಜಲಾಸಯದ ಗರಿಷ್ಠ ನೀರಿನ ಪ್ರಮಾಣ 49,452 ಸಂಗ್ರಹದಲ್ಲಿ ಪ್ರಸ್ತುತ 35.282 ಟಿಎಂಸಿ ನೀರಿದೆ. ಕೊಡಗಿನಲ್ಲಿ ಹೆಚ್ಚಿನ ಮಳೆಯಿಂದ ಗುರುವಾರ ಸಂಜೆ ವೇಳೆಗೆ 38 ಸಾವಿರ ಕ್ಯೂಸೆಕ್‌ನ ಹೆಚ್ಚು ನೀರು ಹರಿದು ಬರುತ್ತಿತ್ತು ,ಸಂಜೆಗೆ 115 ಅಡಿಗೆ ನೀರು ಏರಿಕೆಯಾಗಿತ್ತು. ಕೊಡಗು ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತುದ್ದು ಜಲಾಶಯಕ್ಕೂ ಹೆಚ್ಚಿನ ಒಳಹರಿವು ಬರುವ ಸಾಧ್ಯತೆಯಿಂದ ಇನ್ನು ರಾತ್ರಿ ವೇಳೆಗೆ ಇನ್ನಷ್ಟು ನೀರು ಏರಿಕೆ ಕಂಡು ಬರುತ್ತದೆ ಎನ್ನಲಾಗಿದೆ.ಇದರಿಂದ ಮಂಡ್ಯ ಜಿಲ್ಲೆಯಾದ್ಯಂತ ಕೂಡ ಸತತವಾಗಿ ಅಲ್ಲಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಇಲ್ಲಿನ ರೈತರು ಕೂಡ ಮುಂಗಾರು ಬೆಳೆಗೆ ಬಿತ್ತನೆ ಕಾರ್ಯ ಮಾಡಲು ಸಜ್ಜುಗೊಳಿಸುತ್ತಿ ದ್ದಾರೆ.ಈ ಬಾರಿ ಆದಷ್ಟು ಜಲಾಶಯ ಭರ್ತಿಯಾಗುವ ಸಾಧ್ಯತೆಹಿನ್ನೆಲೆ ಮುಂಗಾರು ಬೆಳೆ ಬೆಳೆಯಲು ಯಾವುದೇ ಅಡ್ಡಯಾಗದು ಎನ್ನಲಾಗಿದೆ.ಕಳೆದ ಬೇಸಿಗೆ ಹಂಗಾಮಿಗೆ ಜಲಾಶಯದಲ್ಲಿ ನೀರಿಲ್ಲದೆ ಕುಡಿಯಲು ಮಾತ್ರ ಬಳಕೆಗೆ ನೀರಾವರಿ ಇಲಾಖೆ ಹೇಳಿದ್ದರಿಂದ ರೈತರು ಬೇಸಿಗೆ ಬೆಳೆ ಬೆಳೆಯದೆ ಜಮೀನುಗಳಲ್ಲಿ ಖಾಲಿ ಬಿಡಲಾಗಿತ್ತು.ಇದೀಗ ಜಲಾಶಯ ಭರ್ತಿಯಾಗುವ ನಿರೀಕ್ಷೆಯಲ್ಲಿ ಮುಂಗಾರು ಹಂಗಾಮು ಬೆಳೆ ಬೆಳೆಯುವ ಸಾಧ್ಯತೆಯಿಂದ ರೈತರ ಮೊಗದಲ್ಲಿ ಮತ್ತಷ್ಟು ಕಳೆಗಟ್ಟಿದೆ.