ನವದೆಹಲಿ: ಜೂನ್ ತಿಂಗಳಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು 13 ದಿನಗಳವರೆಗೆ ರಜೆ ಇವೆ. ಬೇರೆ ಬೇರೆ ರಾಜ್ಯಗಳಲ್ಲಿ ರಜಾ ದಿನಗಳು ವ್ಯತ್ಯಾಸವಾಗಲಿದೆ. ಈ 13 ದಿನದಲ್ಲಿ ಬರೋಬ್ಬರಿ ಏಳು ದಿನಗಳು ಶನಿವಾರ ಮತ್ತು ಭಾನುವಾರದ ರಜೆಗಳೇ ಆಗಿವೆ.
ಕರ್ನಾಟಕದಲ್ಲಿ ಜೂನ್ ತಿಂಗಳಲ್ಲಿ ಎಂಟು ದಿನ ಬ್ಯಾಂಕುಗಳು ಬಂದ್ ಆಗಿರುತ್ತವೆ.
ಒಡಿಶಾ ರಾಜ್ಯದಲ್ಲಿ ಜೂನ್ 14ರಿಂದ 17ರವರೆಗೆ ಸತತ ನಾಲ್ಕು ದಿನ ಬ್ಯಾಂಕ್ ರಜೆ ಇರುವುದು ವಿಶೇಷ. ಪಂಜಾಬ್ನಲ್ಲಿ ಜೂನ್ 8ರಿಂದ 10ರವರೆಗೆ ಮೂರು ದಿನಗಳು ರಜೆ ಇರುತ್ತವೆ. ಕರ್ನಾಟದಲ್ಲಿ ಜೂನ್ ತಿಂಗಳಲ್ಲಿ ಶನಿವಾರ ಮತ್ತು ಭಾನುವಾರ ರಜೆ ಬಿಟ್ಟರೆ ಜೂನ್ 17ಕ್ಕೆ ಬಕ್ರೀದ್ ಹಬ್ಬಕ್ಕೆ ಬ್ಯಾಂಕ್ ರಜೆ ಇರುತ್ತದೆ.
2024ರ ಜೂನ್ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳು
ಜೂನ್ 2: ಭಾನುವಾರ
ಜೂನ್ 8: ಎರಡನೆ ಶನಿವಾರ
ಜೂನ್ 9: ಭಾನುವಾರ
ಜೂನ್ 10, ಸೋಮವಾರ: ಗುರು ಅರ್ಜುನ್ ದೇವ್ ಬಲಿದಾನ ದಿನ (ಪಂಜಾಬ್ನಲ್ಲಿ ರಜೆ)
ಜೂನ್ 14, ಶುಕ್ರವಾರ: ಪಹಿಲಿ ರಾಜ ದಿನ (ಒಡಿಶಾದಲ್ಲಿ ರಜೆ)
ಜೂನ್ 15, ಶನಿವಾರ: ವೈಎಂಎ ದಿನ ಮತ್ತು ರಾಜ ಸಂಕ್ರಾಂತಿ ಹಬ್ಬ (ಮಿಜೋರಾಂ, ಒಡಿಶಾದಲ್ಲಿ ರಜೆ)
ಜೂನ್ 16: ಭಾನುವಾರ
ಜೂನ್ 17, ಸೋಮವಾರ: ಬಕ್ರೀದ್ ಹಬ್ಬ (ಮಿಜೋರಾಂ, ಸಿಕ್ಕಿಂ, ಅರುಣಾಚಲ ಬಿಟ್ಟು ಉಳಿದೆಡೆ ರಜೆ)
ಜೂನ್ 18, ಮಂಗಳವಾರ: ಬಕ್ರೀದ್ ಹಬ್ಬ (ಜಮ್ಮು ಕಾಶ್ಮೀರದಲ್ಲಿ ರಜೆ)
ಜೂನ್ 21: ವಟ ಸಾವಿತ್ರ ವ್ರತ (ಹಲವು ರಾಜ್ಯಗಳಲ್ಲಿ ರಜೆ)
ಜೂನ್ 22: ನಾಲ್ಕನೇ ಶನಿವಾರ
ಜೂನ್ 23: ಭಾನುವಾರ
ಜೂನ್ 30: ಭಾನುವಾರ
ಜೂನ್ ತಿಂಗಳಲ್ಲಿ ಕರ್ನಾಟಕದಲ್ಲಿ ಬ್ಯಾಂಕುಗಳ ರಜಾ ದಿನ
ಜೂನ್ 2: ಭಾನುವಾರ
ಜೂನ್ 8: ಎರಡನೆ ಶನಿವಾರ
ಜೂನ್ 9: ಭಾನುವಾರ
ಜೂನ್ 16: ಭಾನುವಾರ
ಜೂನ್ 17, ಸೋಮವಾರ: ಬಕ್ರೀದ್ ಹಬ್ಬ
ಜೂನ್ 22: ನಾಲ್ಕನೇ ಶನಿವಾರ
ಜೂನ್ 23: ಭಾನುವಾರ
ಜೂನ್ 30: ಭಾನುವಾರ
ಬ್ಯಾಂಕುಗಳಿಗೆ ರಜೆ ಇದ್ದರೂ ನೆಟ್ ಬ್ಯಾಂಕಿಂಗ್, ಬ್ಯಾಂಕ್ ಆ್ಯಪ್, ಮೊಬೈಲ್ ಬ್ಯಾಂಕಿಂಗ್, ಎಟಿಎಂ ಇತ್ಯಾದಿ ಮೂಲಕ ಹಣದ ವಹಿವಾಟು ನಡೆಸಲು ಅವಕಾಶ ಇರುತ್ತದೆ.