ಮನೆ ರಾಜ್ಯ ಮೊಬೈಲ್ ಕದೀತಿದ್ದ, 9 ಅಪ್ರಾಪ್ತರು ಸೇರಿ 13 ಮಂದಿ ಅರೆಸ್ಟ್ – ಕಳುವಾಗಿದ್ದ 75 ಮೊಬೈಲ್‌ಗಳು...

ಮೊಬೈಲ್ ಕದೀತಿದ್ದ, 9 ಅಪ್ರಾಪ್ತರು ಸೇರಿ 13 ಮಂದಿ ಅರೆಸ್ಟ್ – ಕಳುವಾಗಿದ್ದ 75 ಮೊಬೈಲ್‌ಗಳು ಸೀಜ್‌..!

0

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್‌ 28 ರಂದು ನಡೆದ ಐಪಿಎಲ್‌ ಪಂದ್ಯದ ವೇಳೆ ಫ್ಯಾನ್ಸ್ ಗಳ ಮೊಬೈಲ್ ಗೆ ಕನ್ನ ಹಾಕಿದ್ದ ಜಾರ್ಖಂಡ್ ಖದೀಮರು ಮತ್ತಷ್ಟು ಮಂದಿ ಸಿಕ್ಕಿದ್ದಾರೆ. 9 ಮಂದಿ ಅಪ್ರಾಪ್ತರನ್ನ ಬಳಸಿಕೊಂಡು ಮೊಬೈಲ್ ಕದೀತಿದ್ದ ನಾಲ್ವರು ಬಂಧನವಾಗಿದ್ದು, 75 ಮೊಬೈಲ್‌ಗಳ ಸೀಜ್ ಮಾಡಲಾಗಿದೆ. ಆರ್‌ಸಿಬಿ ಹಾಗೂ ಎಸ್‌ಆರ್‌ಹೆಚ್‌ ನಡುವಿನ ಐಪಿಎಲ್ ಮ್ಯಾಚ್ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಭಿಮಾನಿಗಳ ಮೊಬೈಲ್ ಕದ್ದವರ ಬಾಲ ಬೆಳೀತಾನೆ ಇದೆ.

ಮೊಬೈಲ್ ಕಳೆದುಕೊಂಡವರ ದೂರಿನ ಅನ್ವಯ ತನಿಖೆ ನಡೆಸಿ ಈವರೆಗೆ ಒಟ್ಟು ಎಪ್ಪತ್ತೈದು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಜಾರ್ಖಂಡ್ ನಿಂದ ಅಪ್ರಾಪ್ತರ ಗ್ಯಾಂಗ್ ಕಟ್ಟಿಕೊಂಡು ಬಂದಿದ್ದ ಸೋಹನ್ ಕುಮಾರ್, ಸಂಜೀತ್ ಕುಮಾರ್, ಇಶಾಲ್‌ಕುಮಾರ್ ಮತ್ತು ಶುಭಮನ್ ಕುಮಾರ್ ನ ಗ್ಯಾಂಗ್ ಕೃತ್ಯ ಎಸಗಿತ್ತು. ಈ ನಾಲ್ವರು ಆರೋಪಿಗಳು 9 ಮಂದಿ ಅಪ್ರಾಪ್ತರನ್ನ ಕರೆತಂದು ಮೊಬೈಲ್ ಕಳ್ಳತನಕ್ಕೆ ಬಿಟ್ಟಿರೋದು ಗೊತ್ತಾಗಿದೆ. ಬೆಂಗಳೂರಲ್ಲದೇ ಚೆನ್ನೈ, ಮುಂಬೈ, ಕೋಲ್ಕತ್ತಾಗೆ ಹೋಗಿ ಸಾಕಷ್ಟು ಕಡೆಗಳಲ್ಲಿ ಈ ಗ್ಯಾಂಗ್ ಕೈಚಳಕ ತೋರಿದೆ. ಇದೀಗ ಬಂಧಿತರ ಸಂಖ್ಯೆ ಅಪ್ರಾಪ್ತರು ಸೇರಿದಂತೆ 13 ಕ್ಕೆ ಏರಿದೆ.

ನಾಳೆ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ RCB vs CSK ಪಂದ್ಯವಿದ್ದು ಸ್ಟೇಡಿಯಂ ನಲ್ಲಿ ಎಲ್ಲಾ ರೀತಿಯ ಭದ್ರತೆ ಕೈಗೊಳ್ಳಲಾಗಿದ್ದು, 2000 ಕ್ಕೂ ಹೆಚ್ಚು ಪೊಲೀಸ್ರನ್ನ ನಿಯೋಜನೆ ಮಾಡಲಾಗಿದೆ. ಕಳೆದ ಪಂದ್ಯದಂತೆ ಈ ಪಂದ್ಯಕ್ಕೂ ಟಿಕೆಟ್ ಇರುವವರು ಮಾತ್ರ ಸ್ಟೇಡಿಯಂ ಕಡೆ ಹೋಗಿ. ಅನಾವಶ್ಯಕವಾಗಿ ಯಾರು ಸ್ಟೇಡಿಯಂ ಬಳಿ ಓಡಾಡದಂತೆ ಸೂಚಿಸಿಲಾಗಿದೆ.

ಟಿಕೆಟ್ ಇಲ್ಲದವರು ಸ್ಟೇಡಿಯಂ ಬಳಿ ಬರೋದು ಬೇಡ. ಇನ್ ಕೇಸ್ ಬಂದ್ರೆ ಪೊಲೀಸ್ರು ಕಾನೂನು ಕ್ರಮ ಜರುಗಿಸ್ತಾರೆ. ಕಳೆದ ಮ್ಯಾಚ್ ಗೆ 15 ಸಾವಿರ ಜನರು ಮೆಟ್ರೋ ಟಿಕೆಟ್ ಅನ್ವಯ ಬಂದಿದ್ರು. ಹೋಗುವಾಗ 22 ಸಾವಿರ ಪೇಕ್ಷಕರು ವಾಪಸ್ಸು ಹೋಗಿದ್ದು ತುಂಬಾ ಸಕ್ಸಸ್ ಆಗಿದ್ದು, ಮ್ಯಾಚ್ ನೋಡಲು ಬರುವವರು ಮೆಟ್ರೊ ಬಳಸುವಂತೆ ಸೂಚನೆ ನೀಡಲಾಗಿದೆ.