ಗಾಂಧಿಧಾಮ್: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 130 ಕೋಟಿ ರೂ. ಮೌಲ್ಯದ ಹದಿಮೂರು ಕೊಕೇನ್ ಪ್ಯಾಕೆಟ್ ಗಳನ್ನು ಬುಧವಾರ ಬೆಳಗ್ಗೆ ಗುಜರಾತ್‌ನ ಕಚ್ ಜಿಲ್ಲೆಯ ಗಾಂಧಿಧಾಮ್ ಪಟ್ಟಣದ ಬಳಿಯ ಕ್ರೀಕ್ ಪ್ರದೇಶದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳಸಾಗಣೆದಾರರು ಸಿಕ್ಕಿಬೀಳುವುದರಿಂದ ತಪ್ಪಿಸಿಕೊಂಡು ಸಮುದ್ರ ತೀರದಲ್ಲಿ ಮರೆಯಾಗಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದೇವೆ ಎಂದು ಕಚ್-ಪೂರ್ವ ವಿಭಾಗದ ಪೊಲೀಸ್ ಅಧೀಕ್ಷಕ ಸಾಗರ್ ಬಾಗ್ಮಾರ್ ಹೇಳಿದ್ದಾರೆ.
ಎಂಟು ತಿಂಗಳ ಅವಧಿಯಲ್ಲಿ ಇದೇ ಕ್ರೀಕ್ ಪ್ರದೇಶದಲ್ಲಿ ಇದು ಎರಡನೇ ಪ್ರಮುಖ ಡ್ರಗ್ ವಶಕ್ಕೆ ಪಡೆದ ಪ್ರಕರಣವಾಗಿದೆ.
ಎಟಿಎಸ್ ಮತ್ತು ವಿಶೇಷ ಕಾರ್ಯಾಚರಣೆ ಗುಂಪಿನ ಜಂಟಿ ತಂಡವು ಭಾರೀ ಕಾರ್ಯಾಚರಣೆ ನಡೆಸಿದೆ.














