ಮನೆ ರಾಷ್ಟ್ರೀಯ ಯಮುನಾ ನದಿಯಿಂದ 1,300 ಟನ್‌ ತ್ಯಾಜ್ಯ ಹೊರಕ್ಕೆ: ಸಚಿವ ಪರ್ವೇಶ್‌ ವರ್ಮಾ

ಯಮುನಾ ನದಿಯಿಂದ 1,300 ಟನ್‌ ತ್ಯಾಜ್ಯ ಹೊರಕ್ಕೆ: ಸಚಿವ ಪರ್ವೇಶ್‌ ವರ್ಮಾ

0

ನವದೆಹಲಿ: ಕಳೆದ ಹತ್ತು ದಿನಗಳಲ್ಲಿ ಯಮುನಾ ನದಿ ಒಡಲಿನಿಂದ 1,300 ಟನ್‌ ತ್ಯಾಜ್ಯವನ್ನು ಹೊರ ತೆಗೆಯಲಾಗಿದೆ ಎಂದು ನೀರಾವರಿ ಹಾಗೂ ನೆರೆ ನಿಯಂತ್ರಣ ಸಚಿವ ಪರ್ವೇಶ್‌ ವರ್ಮಾ ತಿಳಿಸಿದ್ದಾರೆ.

Join Our Whatsapp Group

ಇಂದು (ಬುಧವಾರ) ದೋಣಿ ಮೂಲಕ ಯಮುನಾ ನದಿ ಪರಿಶೀಲಿಸಿದ ವರ್ಮಾ, ನದಿಯನ್ನು ಸಂಪೂರ್ಣವಾಗಿ ಶುಚಿಗೊಳಿಸುವುದೇ ನಮ್ಮ ಬದ್ಧತೆಯಾಗಿದೆ ಎಂದಿದ್ದಾರೆ.

2023ರಲ್ಲಿ ದೆಹಲಿ ಭೀಕರ ಪ್ರವಾಹವನ್ನು ಎದುರಿಸಿತ್ತು. ಈ ಹಿಂದೆ ಎಲ್ಲಾ ಫ್ಲಡ್‌ಗೇಟ್‌ಗಳನ್ನು ಮುಚ್ಚಲಾಗಿತ್ತು. ಈಗ ಅವುಗಳನ್ನು ದುರಸ್ಥಿ ಪಡಿಸಲಾಗಿದ್ದು, ಭವಿಷ್ಯದಲ್ಲಿ ಪ್ರವಾಹವನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿವೆ ಎಂದರು.

ಕಳೆದ 10 ದಿನಗಳಲ್ಲಿ 1,300 ಮೆಟ್ರಿಕ್ ಟನ್‌ಗಳಷ್ಟು ತ್ಯಾಜ್ಯವನ್ನು ನದಿಯ ಒಡಲಿನಿಂದ ತೆಗೆಯಲಾಗಿದೆ. ದೆಹಲಿ ಅಭಿವೃದ್ಧಿ ಪ್ರಾಧಿಕಾರವು ನದಿಪಾತ್ರವನ್ನು ಶುಚಿಗೊಳಿಸುವುದರ ಜೊತೆಗೆ ಅತಿಕ್ರಮಗಳನ್ನು ತೆರವುಗೊಳಿಸುತ್ತಿದೆ ಎಂದರು.

ನದಿಗೆ ತ್ಯಾಜ್ಯವನ್ನು ಬಿಡುವ 18 ಪ್ರಮುಖ ಚರಂಡಿಗಳಿಗೆ ‘ಒಳಚರಂಡಿ ಸಂಸ್ಕರಣಾ ಘಟಕ’ಗಳನ್ನು (ಎಸ್‌ಟಿಪಿ) ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

ಇದೇ ವೇಳೆ ಹಿಂದಿನ ಎಎಪಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ‘ಹಿಂದಿನ ಸರ್ಕಾರಕ್ಕೆ ಯಮುನಾ ನದಿ ಶುಚಿಗೊಳಿಸುವ ಬಗ್ಗೆ ಯಾವ ಆಸಕ್ತಿಯೂ ಇರಲಿಲ್ಲ. ಆದರೆ, ಈಗ ದೆಹಲಿ ಸರ್ಕಾರವಲ್ಲದೇ ಕೇಂದ್ರ ಸರ್ಕಾರವೂ ಈ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದೆ’ ಎಂದರು.