ಮನೆ ರಾಷ್ಟ್ರೀಯ ಭಾರತದಲ್ಲಿ 14,000 ಪಾಕಿಸ್ತಾನಿ ಪ್ರಜೆಗಳು

ಭಾರತದಲ್ಲಿ 14,000 ಪಾಕಿಸ್ತಾನಿ ಪ್ರಜೆಗಳು

0

ನವದೆಹಲಿ: ಭಾರತದಲ್ಲಿರುವ ಪಾಕಿಸ್ತಾನ ಪ್ರಜೆಗಳನ್ನು ತಕ್ಷಣ ವಾಪಸ್ ಕಳುಹಿಸುವಂತೆ ಕೇಂದ್ರ ಸರ್ಕಾರ ಗಂಭೀರ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರು ಪಡೆದಿರುವ ವೀಸಾಗಳನ್ನು ಕೂಡಲೇ ರದ್ದುಪಡಿಸಲು ಸೂಚನೆ ನೀಡಲಾಗಿದೆ.

ಪ್ರಸ್ತುತ ಭಾರತದಲ್ಲಿ ಸುಮಾರು 14,000 ಪಾಕಿಸ್ತಾನಿ ಪ್ರಜೆಗಳು ಇದ್ದಾರೆಂದು ಅಂದಾಜಿಸಲಾಗಿದೆ. ಭಾರತ ಸರ್ಕಾರ ಪ್ರತಿವರ್ಷ 1.5 ರಿಂದ 2 ಲಕ್ಷ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ನೀಡುತ್ತಿದೆ. ಈ ವೀಸಾಗಳು ವಿವಿಧ ಉದ್ದೇಶಗಳಿಗೆ ನೀಡಲಾಗುತ್ತವೆ – ಕುಟುಂಬ ಅಥವಾ ಸ್ನೇಹಿತರ ಭೇಟಿಗಾಗಿ, ಕಾನೂನು ಸಂಬಂಧಿತ ಕಾರ್ಯಗಳಿಗಾಗಿ, ಅಥವಾ ವ್ಯಾಪಾರ ಗಳಿಗಾಗಿ.

ಪಾಕಿಸ್ತಾನಿ ಪ್ರವಾಸಿಗರಿಗೆ ಭಾರತ ಪ್ರವೇಶಕ್ಕೆ ಟೂರಿಸ್ಟ್ ವೀಸಾ ಲಭ್ಯವಿಲ್ಲ. ಅದರ ಬದಲು ಅವರು ವಿಸಿಟರ್ ವೀಸಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ವಿಸಿಟರ್ ವೀಸಾ ಸಾಮಾನ್ಯವಾಗಿ 3 ತಿಂಗಳ ಅವಧಿಗೆ ಮಾನ್ಯವಾಗಿರುತ್ತದೆ. ವ್ಯಾಪಾರದ ಉದ್ದೇಶಕ್ಕಾಗಿ ಬರುವವರಿಗೆ ವ್ಯಾಪಾರ ವೀಸಾ ನೀಡಲಾಗುತ್ತಿದ್ದು, ಅದು 6 ತಿಂಗಳವರೆಗೆ ಬಹು ಪ್ರವೇಶ ಅವಕಾಶವಿದೆ. ಈ ವೀಸಾ ಪಡೆಯಲು ಪಾಕಿಸ್ತಾನದ ಕಂಪನಿ ಅಥವಾ ಸಂಸ್ಥೆಯಿಂದ ಆಹ್ವಾನ ಪತ್ರಿಕೆ ಲಗತ್ತಿಸುವುದು ಅಗತ್ಯ.

ಕೇಂದ್ರದ ಈ ತೀರ್ಮಾನವು ಉಭಯ ರಾಷ್ಟ್ರಗಳ ನಡುವೆ ತೀವ್ರ ರಾಜತಾಂತರದ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂಬ ಅಭಿಪ್ರಾಯ ಹೆಚ್ಚಾಗಿದೆ. ದೇಶದ ಒಳಾಂಗಣ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.