ಮನೆ ರಾಜಕೀಯ ಕೆ ಅಣ್ಣಾಮಲೈ ಸಮ್ಮುಖದಲ್ಲಿ 15 ಮಾಜಿ ಶಾಸಕರು, ಓರ್ವ ಮಾಜಿ ಸಂಸದ ಬಿಜೆಪಿ ಸೇರ್ಪಡೆ

ಕೆ ಅಣ್ಣಾಮಲೈ ಸಮ್ಮುಖದಲ್ಲಿ 15 ಮಾಜಿ ಶಾಸಕರು, ಓರ್ವ ಮಾಜಿ ಸಂಸದ ಬಿಜೆಪಿ ಸೇರ್ಪಡೆ

0

ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನ ಇಂದು ದೆಹಲಿಯಲ್ಲಿ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಸಮ್ಮುಖದಲ್ಲಿ 15 ಮಾಜಿ ಶಾಸಕರು ಮತ್ತು ಓರ್ವ ಮಾಜಿ ಸಂಸದ ಇಂದು ಬಿಜೆಪಿ ಸೇರಿದರು.

ಎಲ್ಲಾ ನಾಯಕರು ಬಿಜೆಪಿಗೆ ಸೇರ್ಪಡೆಯಾದರು. ಜಿ ಶಾಸಕರನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಪಕ್ಷದ ಶಾಲು ಹಾಕಿ ನಾಯಕರನ್ನು ಸ್ವಾಗತಿಸಿದರು.

ಇದರೊಂದಿಗೆ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ 370 ಮತ್ತು ಎನ್‌ಡಿಎ 400 ಸ್ಥಾನಗಳನ್ನು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಯಕರನ್ನು ಸ್ವಾಗತಿಸಿದ ಅಣ್ಣಾಮಲೈ ಅವರು ಬಿಜೆಪಿಗೆ ಸೇರಿದ ಮಾಜಿ ನಾಯಕರು ಅನುಭವದ ಸಂಪತ್ತನ್ನೇ ಹೊತ್ತು ತಂದಿದ್ದಾರೆ ಜೊತೆಗೆ ಮೂರನೇ ಬಾರಿಗೆ ಮತ್ತೆ ಅಧಿಕಾರಕ್ಕೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈಗಳನ್ನು ಬಲಪಡಿಸಲು ಬಯಸುತ್ತಾರೆ ಎಂದು ಹೇಳಿದರು

ಪಕ್ಷ ಸೇರಿದವರ ವಿವರ:

ಬಿಜೆಪಿ ಸೇರ್ಪಡೆಯಾದವರ ಪಟ್ಟಿ ಬಹಿರಂಗವಾಗಿದೆ.ಎಡಿಎಂಕೆ ಮಾಜಿ ಶಾಸಕ ಕೆ.ವಡಿವೇಲ್, ಚಾಲೆಂಜರ್ ದುರಾಸಾಮಿ, ಪಿ.ಎಸ್.ಕಂದಸಾಮಿ, ಆರ್.ಚಿನ್ನಸಾಮಿ, ಮಾಜಿ ಸಚಿವ ಗೋಮತಿ ಶ್ರೀವಾಸನ್, ವಿ.ಆರ್.ಜಯರಾಮನ್, ಎಸ್.ಎಂ.ವಾಸನ್, ಪಿ.ಎಸ್.ಅರುಳ್, ಎಸ್.ಗುರುನಾಥನ್, ಆರ್.ರಾಜೇಂದ್ರನ್, ಸೆಲ್ವಿ. ಮುರುಗೇಶನ್., ಎ ರೋಕಿಣಿ, ಕೆ ತಮಿಳಗನ್, ಎಸ್‌ ಇ ವೆಂಕಟಾಚಲಂ, ಮುತ್ತು ಕೃಷ್ಣನ್ ಮತ್ತು ಡಿಎಂಕೆ ಮಾಜಿ ಸಂಸದ ವಿ ಕುಲಂದೈವೇಲು.

ಹಿಂದಿನ ಲೇಖನಸುಳ್ಯ: ಆಸ್ಪತ್ರೆಯ ಮಹಡಿಯಿಂದ ಜಿಗಿದು  ವ್ಯಕ್ತಿ ಆತ್ಮಹತ್ಯೆ
ಮುಂದಿನ ಲೇಖನಧಾರವಾಡ: ರಾಡ್‌ ನಿಂದ ಹೊಡೆದು ಕುಕ್ ಕೊಲೆಗೈದ ವೈಟರ್