ಮನೆ ರಾಜ್ಯ ರಾಜ್ಯ ಸಾರಿಗೆ ನೌಕರರ ವೇತನ ಶೇ.15ರಷ್ಟು ಹೆಚ್ಚಳ: ರಾಜ್ಯ ಸರ್ಕಾರದ ಆದೇಶ

ರಾಜ್ಯ ಸಾರಿಗೆ ನೌಕರರ ವೇತನ ಶೇ.15ರಷ್ಟು ಹೆಚ್ಚಳ: ರಾಜ್ಯ ಸರ್ಕಾರದ ಆದೇಶ

0

ಬೆಂಗಳೂರು:  ಶ್ರೀರಾಮನವಮಿಯಂದೇ ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ವೇತನ ಶ್ರೇಣಿ ಶೇ.15ರಷ್ಟು ಹೆಚ್ಚಿಸಿದೆ.

ನಾಲ್ಕೂ ನಿಗಮಗಳ (ಕೆಎಸ್‌’ಆರ್‌’ಟಿಸಿ, ಬಿಎಂಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ, ವಾಯುವ್ಯ ಕರ್ನಾಟಕ ಸಾರಿಗೆ) ಸಾರಿಗೆ ನೌಕರರಿಗೆ ವೇತನ ಹೆಚ್ಚಿಸಲಾಗಿದೆ. 2023ರ ಮಾರ್ಚ್ ತಿಂಗಳಿನಿಂದಲೇ ನೂತನ ವೇತನ ಜಾರಿ ಬರುವಂತೆ ಇಂದು ಅದೇಶಿಸಿದೆ.

ಸಾರಿಗೆ ನೌಕರರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮಾ.21ರಿಂದ ಮುಷ್ಕರಕ್ಕೆ ಕರೆ ನೀಡಿದ್ದರು. ಆದರೆ ಮೂಲ ವೇತನದಲ್ಲಿ ಶೇ.25ರಷ್ಟು ಹೆಚ್ಚಳ ಮಾಡಬೇಕು ಎಂಬುದು ಸಾರಿಗೆ ನೌಕರರ ಬೇಡಿಕೆಯಾಗಿತ್ತು. ಆದ್ರೆ, ಸರ್ಕಾರ ಮಾರ್ಚ್​ 28ರಂದು ಶೇ.15ರಷ್ಟು ವೇತನ ಹೆಚ್ಚಿಸುವುದಾಗಿ ಹೇಳಿತ್ತು. ಇದೀಗ ಅದರಂತೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.