ಮನೆ ಅಪರಾಧ 2 ವರ್ಷದಲ್ಲಿ 15 ಮದುವೆ: ಹನಿಮೂನ್​ ಹೆಸರಲ್ಲಿ ವಂಚಿಸುತ್ತಿದ್ದ ಮಹಿಳೆಯ ಬಂಧನ

2 ವರ್ಷದಲ್ಲಿ 15 ಮದುವೆ: ಹನಿಮೂನ್​ ಹೆಸರಲ್ಲಿ ವಂಚಿಸುತ್ತಿದ್ದ ಮಹಿಳೆಯ ಬಂಧನ

0

ಭೋಪಾಲ್​(Bhopal): ಬೇರೆ ಬೇರೆ ಹೆಸರಿಟ್ಟುಕೊಂಡು ಮದುವೆ ಮಾಡಿಕೊಳ್ಳುವ ಮೂಲಕ 2 ವರ್ಷದಲ್ಲಿ 15 ಮಂದಿಗೆ ವಂಚಿಸಿದ್ದ ವಂಚಕಿ ಮಹಿಳೆಯನ್ನು ಬಂಧಿಸುವಲ್ಲಿ ಭೋಪಾಲ್ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.

ವಂಚನೆ ಮಾಡಿರುವ ಮಹಿಳೆಯನ್ನು ಬುಧ್ವಾರದ ಸೀಮಾ(32) ಎಂದು ಗುರುತಿಸಲಾಗಿದೆ. ಈ ಮಹಿಳೆ ಈಗಾಗಲೇ ಇಬ್ಬರು ಮಕ್ಕಳ ತಾಯಿಯಾಗಿದ್ದು, ಬೇರೆ ಬೇರೆ ಹೆಸರಿಟ್ಟುಕೊಂಡು ಮದುವೆ ಮಾಡಿಕೊಂಡು ಹನಿಮೂನ್​ ಹೆಸರಿನಲ್ಲಿ ಅವರಿಗೆಲ್ಲ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ಮಹಿಳೆ ಪೂಜಾ, ರಿಯಾ, ರೀನಾ,ಸುಲ್ತಾನಾ ಎಂಬ ಹೆಸರಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಬರೋಬ್ಬರಿ 15 ಮದುವೆ ಮಾಡಿಕೊಂಡಿದ್ದು, ಬೇರೆ ಬೇರೆ ಸ್ಥಳಗಳಲ್ಲಿ ವಾಸ ಮಾಡುವ ಮೂಲಕ ಪೊಲೀಸರ ದಾರಿ ತಪ್ಪಿಸುವ ಕೆಲಸ ಸಹ ಮಾಡಿದ್ದಾಳೆ. ಉಜ್ಜೈನಿ, ಜಬಲ್ಪುರ್​, ನರ್ಮದಾಪುರಂ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಯುವತಿ ವಿರುದ್ಧ ವಂಚನೆಯ ದೂರು ದಾಖಲಾಗಿವೆ.

ಈ ಮಹಿಳೆಯನ್ನ ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ, ಇದೀಗ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಸೀಮಾ ವಿರುದ್ಧ ಕಾಂತಪ್ರಸಾದ್ ಎಂಬುವವರು ದೂರು ದಾಖಲು ಮಾಡಿದ್ದರು. ಮದುವೆ ಮಾಡಿಕೊಳ್ಳುವ ನೆಪದಲ್ಲಿ ಮೋಸ ಮಾಡಿರುವ ಮಹಿಳೆ ಲಕ್ಷಗಟ್ಟಲೆ ಹಣ ಲಪಟಾಯಿಸಿದ್ದಾಳೆ. ಮದುವೆಯಾದ ಬಳಿಕ ಹನಿಮೂನ್​ ಅಥವಾ ಮನೆಯಲ್ಲಿ ಯಾರಿಗಾದ್ರೂ ಅನಾರೋಗ್ಯ ಎಂದು ಹೇಳಿ ಹಣ ಪಡೆದುಕೊಂಡು ಪರಾರಿಯಾಗುತ್ತಿದ್ದಳೆಂದು ಡಿಸಿಪಿ ಶೈಲೆಂದ್ರ ಚೌಹಾಣ್ ತಿಳಿಸಿದ್ದಾರೆ.