ಮನೆ ಅಪರಾಧ 15 ಮದುವೆಯಾಗಿದ್ದ ಖತರ್ನಾಕ್ ಖದೀಮ ಮೈಸೂರು ಪೊಲೀಸರ ಬಲೆಗೆ

15 ಮದುವೆಯಾಗಿದ್ದ ಖತರ್ನಾಕ್ ಖದೀಮ ಮೈಸೂರು ಪೊಲೀಸರ ಬಲೆಗೆ

0

ಮೈಸೂರು: ಮಹಿಳೆಯರನ್ನು ವಂಚಿಸಿ ಹದಿನೈದು ಮದುವೆಯಾಗಿದ್ದ ಖತರ್ನಾಕ್ ಖದೀಮ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮಧ್ಯ ವಯಸ್ಕರು, ವಿಧವೆಯರನ್ನು ಟಾರ್ಗೆಟ್ ಮಾಡಿಕೊಂಡು ಮದುವೆ ಆಗೋದು ನಂತರ ಚಿನ್ನಾಭರಣ ಕದ್ದು ಎಸ್ಕೇಪ್ ಆಗುವುದನ್ನೇ ಈತ ಕಾಯಕ ಮಾಡಿಕೊಂಡಿದ್ದ.

Join Our Whatsapp Group

ಬೆಂಗಳೂರಿನ ಬನಶಂಕರಿ ಬಡಾವಣೆಯ ಮಹೇಶ್ (35) ಬಂಧಿತ ಆರೋಪಿ. ಈತನಿಂದ 2 ಲಕ್ಷ ನಗದು,2 ಕಾರ್, ಏಳು ಮೊಬೈಲ್, ಜೊತೆಗೆ ಒಂದು ಬ್ರೇಸ್ ಲೈಟ್, ಒಂದು ಉಂಗುರ, ಎರಡು ಚಿನ್ನದ ಬಳೆ,ಒಂದು ನೆಕ್ಲೆಸ್ ವಶಕ್ಕೆ ಪಡೆಯಲಾಗಿದೆ.
ತಾನು ಡಾಕ್ಟರ್, ಎಂಜಿನಿಯರ್, ಕಂಟ್ರಾಕ್ಟರ್, ಬ್ಯುಸಿಸೆನ್ ಎಂದು ಹೇಳಿಕೊಂಡು ಈತ ಮಹಿಳೆಯರನ್ನು ವಂಚಿಸುತ್ತಿದ್ದ. ಮೈಸೂರಿನ ನಿವಾಸಿ ಹೇಮಲತಾ ಎಂಬುವರಿಗೂ ಈತ ವಂಚನೆ ಮಾಡಿದ್ದ.
ತಾನು ಡಾಕ್ಟರ್ ಎಂದು ಹೇಳಿಕೊಂಡು ಮೋಸ ಮಾಡಿದ್ದ. ಜ.1,2023 ರಂದು ವಿಶಾಖಪಟ್ಟಣಂನಲ್ಲಿ ವಿವಾಹವಾಗಿದ್ದರು. ಬಳಿಕ ಕ್ಲೀನಿಕ್ ನಡೆಸಬೇಕು 70 ಲಕ್ಷ ನೀಡುವಂತೆ ಡಿಮ್ಯಾಂಡ್ ಮಾಡಿದ್ದ ಎನ್ನಲಾಗಿದೆ. ಆತನ ಬೇಡಿಕೆ ಈಡೇರಿಸಲು ಹೇಮಲತಾ ನಿರಾಕರಿಸಿದ್ದರು.
ನಂತರ ನಗದು ಹಾಗೂ ಚಿನ್ನಾಭರಣಗಳೊಂದಿಗೆ ಈತ ಎಸ್ಕೇಪ್ ಆಗಿದ್ದ. ಹೇಮಲತಾ ಕುವೆಂಪುನಗರ ಪೊಲೀಸರಿಗೆ ದೂರು ದಾಖಲಿಸಿದ್ದರು. ಇದೇ ವೇಳೆ ಬೆಂಗಳೂರಿನಲ್ಲಿ ದಿವ್ಯಾ ಎಂಬರಿಂದಲೂ ವಂಚನೆ ದೂರು ದಾಖಲಾಗಿತ್ತು. ಈತನನ್ನ ಬಂಧಿಸಿ ವಿಚಾರಣೆ ನಡೆಸಿದ ವೇಳೆ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಕುವೆಂಪುನಗರ ಠಾಣಾ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ಹಿಂದಿನ ಲೇಖನಭಾರತದ ಶ್ರೀಮಂತ ರಾಜ್ಯಗಳ ಪಟ್ಟಿ ಬಿಡುಗಡೆ: ಕರ್ನಾಟಕಕ್ಕೆ ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ
ಮುಂದಿನ ಲೇಖನಮಲೆನಾಡು ಭಾಗದಲ್ಲಿ ದಿಢೀರ್ ಕಡಿಮೆಯಾದ ವರುಣ ಅಬ್ಬರ