ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಕರೆಯ ಮೇರೆಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡಿರುವ ೧,೫೩೧ ವಕೀಲರು ತಮ್ಮ ಸನ್ನದು ಅಮಾನತು ಮಾಡಿಸಿಕೊಂಡಿದ್ದಾರೆ.
ರಾಜ್ಯದಲ್ಲಿನ 1,29,368 ವಕೀಲರ ಮೇಲಿಂದ 59,784 ವಕೀಲರು ಪರಿಷತ್ತಿನ ಕರೆಗೆ ಯಾವುದೇ ಸ್ಪಂದನೆ ವ್ಯಕ್ತಪಡಿಸಿಲ್ಲ. ನ್ಯಾಯಮೂರ್ತಿಗಳು, ಸಚಿವರು, ವಿವಿಧ ಸಾಂವಿಧಾನಿಕ ಹುದ್ದೆಗಳು, ಪ್ರಾಸಿಕ್ಯೂಟರ್‌ಗಳು, ಸಹಾಯಕ ಪ್ರಾಸಿಕ್ಯೂಟರ್‌ಗಳು, ಲಾಡ್ಜ್, ಪೆಟ್ರೋಲ್ ಪಂಪ್, ಬಾರ್ ಅಂಡ್ ರೆಸ್ಟೋರೆಂಟ್, ರೆಸಾರ್ಟ್, ವಿವಿಧ ಸರ್ಕಾರಿ ಮತ್ತು ಅರೆ ಸರ್ಕಾರಿ ಹುದ್ದೆ, ಉಪನ್ಯಾಸಕ ವೃತ್ತಿಯಲ್ಲಿ ಇರುವವರು ೨೦೨೫ರ ಜುಲೈ ೧೫ರ ಒಳಗೆ ಸನ್ನದು ಅಮಾನತು ಮಾಡಿಸಿಕೊಳ್ಳಬೇಕು. ಇಲ್ಲದೇ ಹೋದರೆ ವಕೀಲರ ಕಾಯ್ದೆ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಕೆಎಸ್‌ಬಿಸಿ ಪ್ರಕಟಣೆಯಲ್ಲಿದೆ.
ಈವರೆವಿಗೂ ೬೮,೫೫೩ ವಕೀಲರು ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್‌ಗೆ (ಸಿಒಪಿ) ಅರ್ಜಿ ಸಲ್ಲಿಸಿದ್ದಾರೆ. ಸಿಒಪಿಗೆ ಅರ್ಜಿ ಸಲ್ಲಿಸಿರುವವರು ಞsbಛಿ.oಡಿg.iಟಿನಲ್ಲಿ ತಮ್ಮ ಹೆಸರು ಪರಿಶೀಲಿಸಿಕೊಳ್ಳಬಹುದು’ ಎಂದೂ ತಿಳಿಸಿದೆ.















