ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಯಲಯದಲ್ಲಿ ಜನವರಿಯಲ್ಲಿ 17,808 ಪ್ರವೇಶಾತಿ ಆಗಿದೆ ಮತ್ತು ಆನ್ ಲೈನ್ ನಲ್ಲಿ 128 ಪ್ರವೇಶಾತಿ ಆಗಿದೆ ಎಂದು ಕೆಎಸ್ ಒಯು ಕುಲಪತಿ ಶರಣಪ್ಪ ವಿ. ಹಲಸೆ ಮಾಹಿತಿ ನೀಡಿದರು.
ಈ ಕುರಿತು ಮಾತನಾಡಿರುವ ಅವರು, ಈ ವರ್ಷ ನಾವು 20 ಸಾವಿರ ವಿದ್ಯಾರ್ಥಿಗಳ ಅಡ್ಮಿಷನ್ ನಿರೀಕ್ಷೆ ಮಾಡಿದ್ದವು. 15 ದಿನದ ಮೊದಲಷ್ಟೆ ಆನ್ ಲೈನ್ ಪ್ರವೇಶಾತಿಯನ್ನ ಪ್ರಾರಂಭ ಮಾಡಿದ್ದವು. ಆದರೂ ಮುಂದಿನ ಬಾರಿ ಪ್ರವೇಶಾತಿ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಪ್ರವೇಶಾತಿಯಲ್ಲಿ ಆಟೋ ಚಾಲಕರಿಗೆ ಕ್ಯಾಬ್ ಡ್ರೈವರ್ ಗಳಿಗೆ ಶುಲ್ಕ ರಿಯಾಯಿತಿ ನೀಡಿದ್ದೇವೆ. ಟ್ರಾನ್ಸ್ ಜೆಂಡರ್ಸ್ ಗೆ ಉಚಿತ ಪ್ರವೇಶಾತಿ ಕಲ್ಪಿಸಲಾಗಿದೆ. ಎಲ್ಲರಿಗೂ ಶಿಕ್ಷಣ ಎಂಬ ಸರ್ಕಾರದ ದ್ಯೇಯೋದ್ದೇಶವನ್ನ ನಮ್ಮ ವಿಶ್ವವಿದ್ಯಾನಿಲಯ ಈಡೇರಿಸುತ್ತಿದೆ. ನಮ್ಮ ವಿವಿಯ ಘೋಷವಾಕ್ಯ ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬಂತೆ ಎಲ್ಲಾ ಸಿಬ್ಬಂದಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಶರಣಪ್ಪ ಹಲಸೆ ತಿಳಿಸಿದರು.
ಪ್ರತಿಯೊಂದು ಜಿಲ್ಲೆಯಲ್ಲಿ ನಮ್ಮದೆಯಾದ ಪ್ರಾದೇಶಿಕ ಕೇಂದ್ರವಿದೆ. ಈ ಕೇಂದ್ರಗಳಿಂದ ಪ್ರವೇಶಾತಿಗೆ ಸಹಾಯವಾಗುತ್ತದೆ. ಈ ಮೂಲಕ ಮುಂದೆ ಜುಲೈನಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನ ಹೆಚ್ಚು ಮಾಡಬೇಕು ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.
ದೇಶದಲ್ಲಿ 17 ಮುಕ್ತ ವಿವಿಗಳಿವೆ. ನಮ್ಮ ಮುಕ್ತ ವಿಶ್ವ ವಿದ್ಯಾನಿಲಯದ ಮೂಲಭೂತ ಸೌಕರ್ಯಗಳು ಎಲ್ಲಾ ವಿಶ್ವ ವಿದ್ಯಾನಿಲಯಗಳಿಗಿಂತ ಚೆನ್ನಾಗಿದೆ. ಮುಕ್ತವಿವಿಯನ್ನ ಎತ್ತರಕ್ಕೆ ಕೊಂಡೊಯ್ಯಲು ಅಧ್ಯಾಪಕರು ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ. ನ್ಯಾಕ್ A+ ಪಡೆದಿದ್ದರಿಂದ ವಿವಿಗೆ ಅಕಾಡಮಿಕ್ ಸ್ಟೇಟಸ್ ಬಂದಿದೆ. ಹೊಸದಾಗಿ ಕುಲಸಚಿವರು ನೇಮಕಗೊಂಡಿದ್ದು ಅವರಿಗೂ ಸಹ ವಿವಿ ಉತ್ತಮವಾಗಿ ಬೆಳೆಯಲು ಕೆಲಸ ಮಾಡುವ ಹುಮ್ಮಸ್ಸಿದೆ. ನಾವು ಸಹ ಅವರಿಗೆ ಉತ್ತಮವಾಗಿ ಕೆಲಸ ಮಾಡಲು ಸಹಕಾರ ನೀಡುತ್ತಿದ್ದೇವೆ ಎಂದು ತಿಳಿಸಿದರು.