ನವದೆಹಲಿ (New Delhi)-ಈಗಿನ ಸಿಲಿಂಡರ್ ಬೆಲೆಗೆ 2014ರಲ್ಲಿ ಎರಡು ಗ್ಯಾಸ್ ಸಿಲಿಂಡರ್‌ಗಳು ಬರುತ್ತಿದ್ದವು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.
ಅಡುಗೆ ಅನಿಲ್ ಬೆಲೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಅವರು, 2014ಕ್ಕೂ ಹಿಂದಿನ ಬೆಲೆ ಮತ್ತು ಈಗಿನ ಬೆಲೆಯನ್ನು ತುಲನೆ ಮಾಡಿದ್ದಾರೆ. ಎಲ್‌ಪಿಜಿ ಸಿಲಿಂಡರ್ 2014ರಲ್ಲಿ ₹410 ಇತ್ತು. ₹827 ಸಬ್ಸಿಡಿ ದೊರೆಯುತ್ತಿತ್ತು. ಈಗ ಎಲ್‌ಪಿಜಿ ₹999 (ದೆಹಲಿ ದರ) ದಾಟಿದೆ. ಶೂನ್ಯ ಸಬ್ಸಿಡಿ ದೊರೆಯುತ್ತಿದೆ. ಭಾರತೀಯ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಕಲ್ಯಾಣಕ್ಕಾಗಿ ಕಾಂಗ್ರೆಸ್ ಆಡಳಿತವೇ ಸೂಕ್ತ. ಇದು ನಮ್ಮ ಆರ್ಥಿಕ ನೀತಿಯೂ ಆಗಿದೆ’ ಎಂದಿದ್ದಾರೆ.
ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಶನಿವಾರ ₹50 ಹೆಚ್ಚಳ ಮಾಡಲಾಗಿತ್ತು. ಹೀಗಾಗಿ, 14.2 ಕೆ.ಜಿ ತೂಕದ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ ₹1002.50ಕ್ಕೆ ತಲುಪಿತ್ತು.