ಮನೆ ರಾಜ್ಯ ಎಲ್ಲಾ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ 2% ಉದ್ಯೋಗ ಮೀಸಲಾತಿ – ಸಿಎಂ

ಎಲ್ಲಾ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ 2% ಉದ್ಯೋಗ ಮೀಸಲಾತಿ – ಸಿಎಂ

0

ಬೆಳಗಾವಿ : ಎಲ್ಲಾ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ 2% ಉದ್ಯೋಗ ಮೀಸಲಾತಿ ನೀಡಲಾಗುತ್ತದೆ ಅಂತ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ‌ಸದಸ್ಯ ಐವಾನ್ ಡಿಸೋಜ ಪ್ರಶ್ನೆ ಕೇಳಿದ್ರು.

ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗಗಳು ಕೊಡಬೇಕು. ಈವರೆಗೂ 13 ಜನಕ್ಕೆ ಮಾತ್ರ ಹುದ್ದೆ ನೀಡಲಾಗಿದೆ. ನೇರ ನೇಮಕಾತಿಯಲ್ಲಿ 3% ಹುದ್ದೆ ಕ್ರೀಡಾಪಟುಗಳಿಗೆ ಮೀಸಲು ಇಡಬೇಕು. ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ಕೊಡಲು ಒಂದು ಪಾಲಿಸಿ ತರಬೇಕು. ಕಬಡ್ಡಿಗೂ ಪ್ರೋತ್ಸಾಹ ಕೊಡಬೇಕು ಮನವಿ ಮಾಡಿದರು.

ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿ, ಈವರೆಗೂ 13 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಕೊಡಲಾಗಿದೆ. ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್‌, ಏಷ್ಯನ್ ಗೇಮ್ಸ್ ಗೆದ್ದವರಿಗೆ ಹುದ್ದೆ ಕೊಡ್ತೀವಿ. ಪೊಲೀಸ್ ಇಲಾಖೆಯಲ್ಲಿ, ಅರಣ್ಯ ಇಲಾಖೆಯಲ್ಲಿ 3% ಮೀಸಲಾತಿ ಮಾಡಿದ್ದೇವೆ‌. ಉಳಿದ ಇಲಾಖೆಯಲ್ಲಿ 2% ಮೀಸಲಾತಿ ನೀಡಲು ನಿರ್ಧಾರ ಮಾಡಿದ್ದೇವೆ. ಆದಷ್ಟೂ ಬೇಗ ಆದೇಶ ಮಾಡ್ತಿವಿ.ಕಬಡ್ಡಿಗೂ ಪ್ರೋತ್ಸಾಹ ಕೊಡಲು ಪರಿಶೀಲನೆ ಮಾಡ್ತೀನಿ ಎಂದರು‌.