ಮನೆ Uncategorized ಜ.15ಕ್ಕೆ ನೌಕಾಪಡೆಗೆ 2 ಯುದ್ಧ ನೌಕೆ, 1 ಸಬ್‌ ಮರೀನ್‌ ಸೇರ್ಪಡೆ

ಜ.15ಕ್ಕೆ ನೌಕಾಪಡೆಗೆ 2 ಯುದ್ಧ ನೌಕೆ, 1 ಸಬ್‌ ಮರೀನ್‌ ಸೇರ್ಪಡೆ

0

ಹೊಸದಿಲ್ಲಿ: ದೇಶೀಯವಾಗಿ ನಿರ್ಮಾಣ ಮಾಡಿದ 2 ಯುದ್ಧ ನೌಕೆ, 1 ಡೀಸೆಲ್‌-ಎಲೆಕ್ಟ್ರಿಕ್‌ ಸಬ್‌ಮರೀನ್‌ಗಳನ್ನು ಜ.15ರಂದು ಮುಂಬೈನಲ್ಲಿ ಭಾರತೀಯ ನೌಕಾಪಡೆಗೆ ಸೇರಿಸಿಕೊಳ್ಳಲಾಗುತ್ತದೆ.

Join Our Whatsapp Group

ಕ್ಷಿಪಣಿ ನಾಶಕ “ಸೂರತ್‌’, ರಹಸ್ಯವಾಗಿ ಸಾಗುವ “ನೀಲಗಿರಿ’ ಮತ್ತು “ವಾಗ್ಶೀರ್‌’ ಸಬ್‌ ಮರಿನ್‌ಗಳು ನೌಕಾಪಡೆಗೆ ಸೇರ್ಪಡೆಗೊಳ್ಳಲಿವೆ. ಇದರಿಂದಾಗಿ ಹಿಂದೂ ಮಹಾಸಾಗರ ವ್ಯಾಪ್ತಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಸ್ತು ತಿರುಗಲು ನೌಕಾಪಡೆಗೆ ನೆರವಾಗಲಿದೆ.

ನೌಕಾಪಡೆಯಲ್ಲಿ ಲಿಂಗ ಸಮಾನತೆ ತರುವ ದೃಷ್ಟಿಯಿಂದ ಈ 2 ಯುದ್ಧ ನೌಕೆಗಳಲ್ಲಿ ಅಗತ್ಯ ಪ್ರಮಾಣದ ಮಹಿಳಾ ಅಧಿಕಾರಿಗಳು ಮತ್ತು ನಾವಿಕರು ಇರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.