ಚಾಮರಾಜನಗರ : ಎರಡು ನಿವೇಶನಗಳ ಜಂಟಿ ಖಾತೆ ಮಾಡಿಸಿಕೊಡಲು 20,000 ರೂ.ಲಂಚ ಸ್ವೀಕರಿಸುತ್ತಿದ್ದ ಇಲ್ಲಿನ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರ ನಾರಾಯಣ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.
ನಗರದ ಬ್ರಮರಾಂಬ ಬಡಾವಣೆ ನಿವಾಸಿ ಮಾದೇಗೌಡ ಅವರು ನಿವೇಶನಗಳ ಜಂಟಿ ಖಾತೆ ಮಾಡಿಸಲು ನಗರ ಸಭೆ ಅರ್ಜಿ ಹಾಕಿದ್ದರು.ಜಂಟಿ ಖಾತೆ ಮಾಡಿಕೊಡಲು ಪ್ರಥಮದರ್ಜೆ ಕಂದಾಯ ನಿರೀಕ್ಷಕ ನಾರಾಯಣ ಅವರು 20,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದರು. ಈ ಸಂಬಂಧ ಮಾದೇಗೌಡ, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ನಾರಾಯಣ ಅವರು 18ನೇ ವಾರ್ಡ್ ನಲ್ಲಿರುವ ತಮ್ಮ ಮನೆಯಲ್ಲಿ ಲಂಚದ ಹಣ ಪಡೆಯುತ್ತಿದ್ದಾಗ, ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ನಂತರ ಅಧಿಕಾರಿಗಳು ಅವರನ್ನು ನಗರಸಭೆ ಕಚೇರಿಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದರು.
ನಾರಾಯಣ ಅವರನ್ನು ಬಂಧಿಸಿ 20 ಸಾವಿರ ನಗದು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.